ದಿಗಂತ್ ಚಿತ್ರದ ತಾರೆ ಊರ್ವಶಿ ಸೋಲಂಕಿ
ಶಿವರಾಜ್ ಹೊಸಕೆರೆ ನಿರ್ದೆಶನದ 'ತಾರೆ' ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಕತೆ ಬರೆದಿರುವ ಕೆ.ಕೆ.ರವೀಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದಾವಣಗೆರೆ, ಮಧುಗಿರಿ, ಚಿಕ್ಕಮಗಳೂರು, ಬೆಂಗಳೂರು, ಕೆಮ್ಮಣುಗುಂಡಿ ಮುಂತಾದ ಕಡೆಗಳಲ್ಲಿ 'ತಾರೆ'ಗೆ 40 ದಿನಗಳ ಚಿತ್ರೀಕರಣ ನಡೆದಿದೆ. ಐದು ಹಾಡುಗಳಿರುವ ಚಿತ್ರಕ್ಕೆ ಸಿ.ಆರ್.ಬಾಬಿ ಸಂಗೀತ ಸಂಯೋಜಿಸಿದ್ದಾರೆ.
ದಿಗಂತ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಮುಂಬೈನ ಊರ್ವಶಿ ಸೋಲಂಕಿ. ಸಂಜನಾ, ಪ್ರೊ.ದೊಡ್ಡರಂಗೇಗೌಡ, ರಾಹುಲ್, ಕರಿಬಸವಯ್ಯ, ಟೆನ್ನಿಸ್ ಕೃಷ್ಣ, ರೇಖಾದಾಸ್ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
ಜಯಂತಕಾಯ್ಕಿಣಿ, ಹೃದಯ ಶಿವ, ನಾಗೇಂದ್ರ ಪ್ರಸಾದ್, ಪ್ರೊ.ದೊಡ್ಡರಂಗೇಗೌಡ ಹಾಗೂ ನವೀನ್ ರಚಿಸಿರುವ ಚಿತ್ರದ ಗೀತೆಗಳನ್ನು ಶಂಕರ್ ಮಹದೇವನ್, ಹೇಮಂತ್, ಚಿತ್ರ, ಎಂ.ಡಿ.ಪಲ್ಲವಿ, ಕವಿತಾ ಕೃಷ್ಣಮೂರ್ತಿ ಕಾರ್ತಿಕ್, ಉನ್ನಿಕೃಷ್ಣನ್, ಚಿನ್ಮಯಿ ಸುಶ್ರಾವ್ಯವಾಗಿ ಹಾಡಿದ್ದಾರೆ. ರಮೇಶಪ್ಪಿ ಛಾಯಾಗ್ರಹಣ, ದಾಮೋದರ್ ಸಂಕಲನ, ದೇವ್ ಸಂಪತ್ ಮತ್ತು ಫೈವ್ ಸ್ಟಾರ್ ಗಣೇಶ್ ನೃತ್ಯ 'ತಾರೆ' ಚಿತ್ರಕ್ಕಿದೆ.


Click it and Unblock the Notifications











