For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ, ಪುನೀತ್ ಚಿತ್ರದ ಬಗ್ಗೆ ಉಪೇಂದ್ರ ಮಾತು

  |

  ಸೂಪರ್ ಸ್ಟಾರ್ ಉಪೇಂದ್ರ, ಹರಿದಾಡುತ್ತಿದ್ದ ಗಾಳಿಸುದ್ದಿಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. "ನಾನು ಶಿವಣ್ಣ ಹಾಗೂ ಪುನೀತ್ ಅವರಿಗೆ ಯಾವ ಚಿತ್ರವನ್ನೂ ನಿರ್ದೆಶನ ಮಾಡುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ." ಈ ಮೂಲಕ ಹಲವು ದಿನಗಳಿಂದ ಗಾಂಧಿ ನಗರ ಹಾಗೂ ಮಾಧ್ಯಮಗಳಲ್ಲಿ ಬಂದ 'ಶಿವಣ್ಣ ಹಾಗೂ ಪುನೀತ್ ತಾರಾಗಣದ ಚಿತ್ರವನ್ನು ಉಪೇಂದ್ರ ನಿರ್ದೆಶಿಸುತ್ತಾರೆ' ಎಂಬ ಸುದ್ದಿಗೆ ತೆರೆಬಿದ್ದಂತಾಗಿದೆ.

  ಇದೀಗ ಉಪೇಂದ್ರ ನಟನೆ ಹಾಗೂ ಪಿ ವಾಸು ನಿರ್ದೇಶನದ 'ಆರಕ್ಷಕ' ಚಿತ್ರ ರಾಜ್ಯದಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಸಂಬಂಧ ಮಾಧ್ಯಮಗಳಿಗೆ ನೀಡುತ್ತಿದ್ದ ಸಂದರ್ಶನದ ವೇಳೆ ಈ ವಿಷಯವನ್ನೂ ಉಪ್ಪಿ ಸ್ಪಷ್ಟಪಡಿಸಿದ್ದಾರೆ. "ಸದ್ಯಕ್ಕೆ ಇಂತಹ ಯಾವುದೇ ಯೋಚನೆಯಿಲ್ಲ" ಎನ್ನುವ ಮೂಲಕ ಉಪ್ಪಿ ಈ ವಿಷಯಕ್ಕೆ ತೆರೆ ಎಳೆದಿದ್ದಾರೆ.

  'ಸೂಪರ್ ಭಾಗ 2' ಕೂಡ ಮಾಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿರುವ ಉಪ್ಪಿ ಈಗ 'ಕಠಾರಿ ವೀರ ಸುರಸುಂದರಾಂಗಿ' ಹಾಗೂ 'ಟೋಪಿವಾಲಾ' ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ 'ಉಪೇಂದ್ರ 2' ಚಿತ್ರಕ್ಕಾಗಿ 'ಸ್ಕ್ರಿಪ್ಟ್' ಸಿದ್ಧತೆಯಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಆರಕ್ಷಕ ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ಉಪ್ಪಿ ಚಿತ್ರದ ಪ್ರಚಾರಕ್ಕಾಗಿ ಓಡಾಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Real Star Upendra rejects Rumors that he directs a movie for Shvarajkumar and Puneet together. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X