ಮತ್ತೆ ಒಂದಾದ ರೆಬೆಲ್ ಸ್ಟಾರ್ ಅಂಬಿ ನಟಿ ಭವ್ಯಾ

By Rajendra

Ambarish and Bhavya
ತೊಂಬತ್ತರ ದಶಕದ ಜನಪ್ರಿಯ ಜೋಡಿ ಮತ್ತೆ ಒಂದಾಗಿದೆ. ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಹಿರಿಯ ನಟಿ ಭವ್ಯಾ ಮತ್ತೆ ಒಂದಾಗಲಿರುವ ಚಿತ್ರ 'ರಣ'. ಈ ಹಿಂದೆ ಭವ್ಯಾ ಮತ್ತು ಅಂಬಿ ಅವರು ಹೃದಯ ಹಾಡಿತು, ಜೋಡಿ, ಸೋಲಿಲ್ಲದ ಸರದಾರ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯವಾಗಿತ್ತು.

ಈಗ ಮತ್ತೊಮ್ಮೆ ಅತಿಥಿ ಪಾತ್ರದಲ್ಲಿ ಈ ಜೋಡಿ ಮೋಡಿ ಮಾಡಲು ಬರುತ್ತಿದೆ. ಕೆಲದಿನಗಳ ಹಿಂದೆ ತೆರೆಕಂಡು ತೋಪಾದ ಸ್ವಯಂಕೃಷಿ ಎಂಬ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅತಿಥಿ ಪಾತ್ರ ಪೋಷಿಸಿದ್ದರು. ಈಗ ಮತ್ತೆ 'ರಣ' ಚಿತ್ರದ ಮೂಲಕ ಮುಖಕ್ಕೆ ಮೇಕಪ್ ಮಾಡಿಸಿಕೊಳ್ಳಲಿದ್ದಾರೆ. ಈ ಚಿತ್ರದ ನಾಯಕ ನಟ, ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಪುತ್ರ ಪಂಕಜ್.

ರಣ ಚಿತ್ರದ ಮೂಲಕ ಶ್ರೀನಿವಾಸಮೂರ್ತಿ ಎಂಬ ಹೊಸ ನಿರ್ದೇಶಕರು ಕನ್ನಡ ಬೆಳ್ಳಿಪರದೆಗೆ ಪರಿಚಯವಾಗುತ್ತಿದ್ದಾರೆ. ಈಗಾಗಲೆ 'ರಣ' ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಅಂಬಿ ಅವರ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ ಮೂರ್ತಿ.

2012ರ ಜನವರಿಗೆ ಈ ಚಿತ್ರವನ್ನು ತೆರೆಗೆ ತರುವ ಪ್ಲಾನ್‌ನಲ್ಲಿದ್ದಾರೆ ನಿರ್ದೇಶಕರು. ಚಿತ್ರದ ಪಾತ್ರವರ್ಗದಲ್ಲಿ ಸುಪ್ರಿತಾ, ಅರ್ಚನಾ, ಸೋನಿಯಾ ಗೌಡ ನಾಯಕಿಯರು. ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಕನಕ ಜನ್ಯ ಅವರದು. ವಿ ಶ್ರೀಧರ್ ಅವರ ಸಂಗೀತ, ರಾಜರತ್ನ ಅವರ ಕ್ಯಾಮೆರಾ, ಕೆಂಪರಾಜ್ ಅವರ ಸಂಕಲನ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
The yesteryear heart-throb hit pair Rebel Star Ambarish and actress Bhavya teamed up again in Kannada movie Rana. Earlier they acted in Hrudaya Hadithu, Bedi, Sollilladha Saradara. S Narayan's son Pankaj is the hero of this film. Ambarish and Bhavya are playing a guest role in Rana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X