For Quick Alerts
  ALLOW NOTIFICATIONS  
  For Daily Alerts

  ಪುನೀತ್ ಜೊತೆ ಮತ್ತೆ ಲೂಸ್ ಮಾದ ಯೋಗೇಶ್

  |

  ಪುನೀತ್ ರಾಜ್ ಸ್ವಂತ ಬ್ಯಾನರ್ 'ವಜ್ರೇಶ್ವರಿ ಕಂಬೈನ್ಸ್' ಅಡಿಯಲ್ಲಿ ಇನ್ನೊಂದು ರೀಮೇಕ್ ಚಿತ್ರ ಬರಲಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಈ ಚಿತ್ರದಲ್ಲಿ 'ಹುಡುಗರು' ಚಿತ್ರದ ಯಶಸ್ಸಿನ ನಂತರ ಲೂಸ್ ಮಾದ ಯೋಗೇಶ್ ನಟಿಸುತ್ತಿದ್ದಾರೆ. ಅದು ತಮಿಳಿನ ಯಶಸ್ವಿ ಚಿತ್ರ 'ಪೊರಲಿ'. ಈ ಚಿತ್ರಕ್ಕೆ ನಿರ್ದೇಶಕರು ಮೂಲ ಚಿತ್ರವನ್ನು ನಿರ್ದೇಶಿಸಿರುವ ಸಮುತ್ತರಕನಿ.

  ಮೂಲ ಚಿತ್ರದಲ್ಲಿ ಶಶಿಕುಮಾರ್ ಮುಖ್ಯಪಾತ್ರ ಪೋಷಿಸಿದ್ದರು. ಆ ಪಾತ್ರವನ್ನು ಕನ್ನಡದಲ್ಲಿ ಪುನೀತ್ ನಿರ್ವಹಿಸುತ್ತಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಅಲ್ಲರಿ ನರೇಶ್ ಅಭಿನಯಿಸಿದ್ದರು. ಆ ಪಾತ್ರ ಲೂಸ್ ಮಾದ ಯೋಗೇಶ್ ಪಾಲಾಗಿದೆ. ಹುಡುಗರು' ಚಿತ್ರ ಹಿಟ್ ಆಗಿದ್ದು ಯೋಗಿಯಿಂದ ಎಂದು ಸ್ವತಃ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದರು. ಈಗ ಮತ್ತೆ ಯೋಗೇಶ್ ಪುನೀತ್ ಜೊತೆ ನಟಿಸುತ್ತಿರುವುದು ಆ ಮಾತಿಗೆ ಇನ್ನಷ್ಟು ಪುಷ್ಟಿ ಕೊಟ್ಟಂತಾಗಿದೆ.

  'ನಾಡೋಡಿಗಳ್' ಚಿತ್ರದ ರೀಮೇಕ್ ಆದ 'ಹುಡುಗರು' ಮೂಲ ಚಿತ್ರವನ್ನು ಕೂಡ ಸಮುತ್ತಿರಕನಿ ನಿರ್ದೇಶಿಸಿದ್ದರು. "ಪೊರಲಿ ಚಿತ್ರ ಭಾವನಾತ್ಮಕವಾಗಿ, ಆಕ್ಷನ್ ಹಾಗೂ ಪ್ರತೀಕಾರದ ಕಥಾಹಂದರವನ್ನು ಒಳಗೊಂಡಿದೆ. ಪುನೀತ್‌ಗೆ ತಕ್ಕ ಸಬ್ಜೆಕ್ಟ್, ಹಿಟ್ ಆಗುವುದು ಖಂಡಿತ" ಎಂದಿದ್ದಾರೆ ರಾಘವೇಂದ್ರ ರಾಜ್‌ಕುಮಾರ್. ನಾಯಕಿಯರು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)

  English summary
  Vajreshwari Combines Produces Tamil Movie Porali Remake in Kannada. Lose Mada Yogesh Acts with Puneet in this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X