ಉಪ್ಪಿ ಮನೆಯಲ್ಲಿ ಅಭಿಮಾನಿಗಳ ಸೂಪರ್ ಸಂಭ್ರಮ

By Rajendra

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ 'ಸೂಪರ್' ಚಿತ್ರ ಕಾಲು ಶತಕ ಬಾರಿಸಿದೆ (25 ದಿನ). ಉಪೇಂದ್ರ ಅಭಿಮಾನಿಗಳು ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಅಭಿಮಾನಿಗಳು ಉಪ್ಪಿ ಮನೆಗೆ ಬಂದು 25ರ ಸಡಗರ, ಸಂಭ್ರಮವನ್ನು ಆಚರಿ ಸಂತಸಪಟ್ಟಿದ್ದಾರೆ.

ಉಪ್ಪಿ ಮನೆಯಲ್ಲಿ ಕೇಕ್ ಕತ್ತರಿಸಿ ಅಭಿಮಾನಿಗಳು 'ಸೂಪರ್' ಸಂಭ್ರಮವನ್ನು ತಮ್ಮ ನೆಚ್ಚಿನ ನಟನೊಂದಿಗೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ, ಹಾಸ್ಯನಟ, ನಿರ್ದೇಶಕ ಸಾಧು ಕೋಕಿಲ ಕೂಡ ಉಪಸ್ಥಿತರಿದ್ದರು. ಹತ್ತು ವರ್ಷಗಳ ಉಪೇಂದ್ರ ಆಕ್ಷನ್, ಕಟ್ ಹೇಳಿದ ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ಉಪ್ಪಿ ಮಾತನಾಡುತ್ತಾ, 'ಸೂಪರ್' ಚಿತ್ರದ ತೆಲುಗು ಅವತರಣಿಕೆ ಸಿದ್ಧವಾಗಿದೆ. ಕನ್ನಡದಲ್ಲಿ ಸೂಪರ್ ಚಿತ್ರದ ಯಶಸ್ಸು ತೆಲುಗು ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ ಎಂದಿದ್ದಾರೆ. ತೆಲುಗು ಚಿತ್ರರಂಗದಿಂದ ಹಲವಾರು ಕರೆಗಳು ಬರುತ್ತಿದ್ದು ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕೇಳುತ್ತಿದ್ದಾರೆ. ಶೀಘ್ರದಲ್ಲೇ ತೆಲುಗು 'ಸೂಪರ್' ತೆರೆಗೆ ತರುತ್ತಿರುವುದಾಗಿ ಅವರು ತಿಳಿಸಿದ್ದಾರೆ. [ಉಪೇಂದ್ರ]

More from Filmibeat

English summary
Real Star Upendra latest movie Super screening successfully and completes 25 days. Uppendra fans assembled in his residence to celebrate the success of the movie. Meanwhile Telugu version of Super has been completed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X