For Quick Alerts
  ALLOW NOTIFICATIONS  
  For Daily Alerts

  ‘ಹೆಜ್ಜೆ’ ತಪ್ಪಿದ ಕುಮಾರಸ್ವಾಮಿ ಚಂದ್ರ ಚಕೋರಿ ಮೂಲಕ ಮತ್ತೆ ಸಿನಿಮಾ ಕನಸುಗಳಿಗೆ ಮರಳಿದ್ದಾರೆ.

  By Staff
  |

  *ದಟ್ಸ್‌ಕನ್ನಡ ಬ್ಯೂರೊ

  ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿಯನ್ನು ಸಿನಿಮಾ ಮಾಡುವುದಾಗಿ ಗಾಂಧಿನಗರದಲ್ಲಿ ಸರಬರ ಓಡಾಡಿ, ಆನಂತರ ಸುಸ್ತಾದವರಂತೆ ಸುಮ್ಮನಿದ್ದ ಎಚ್‌.ಡಿ.ಕುಮಾರಸ್ವಾಮಿ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ರಾಜಕೀಯದಲ್ಲಿ ಬಿಡುವಾಯಿತೋ ಏನೋ- ಸಿನಿಮಾ ಅವರಿಗೆ ನೆನಪಾಗಿದೆ.

  ‘ಸೂರ್ಯವಂಶ’, ‘ಗಲಾಟೆ ಅಳಿಯಂದ್ರು’ಗಳಂಥ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಹಿನ್ನೆಲೆ ಕುಮಾರಸ್ವಾಮಿ ಅವರದು. ಪ್ರಸ್ತುತ ಕುಮಾರಸ್ವಾಮಿ ಕೈಗೆತ್ತಿಕೊಂಡಿರುವ ಚಿತ್ರ ‘ಹೆಜ್ಜೆ’ ಅಲ್ಲ-‘ಚಂದ್ರ ಚಕೋರಿ.’

  ಸ್ವಾಮಿ ಅವರ ನಿಲಯದ ನಿರ್ದೇಶಕರಾದ ಸಕಲ ಕಲಾ ವಲ್ಲಭ ಎಸ್‌.ನಾರಾಯಣ್‌ ‘ಚಂದ್ರ ಚಕೋರಿ’ಯ ನಿರ್ದೇಶಕರು. ಕನ್ನಡ ಮಾತ್ರವಲ್ಲ , ತೆಲುಗಿನಲ್ಲೂ ನಿರ್ಮಾಣವಾಗುತ್ತಿರುವುದು ಈ ಚಿತ್ರದ ವಿಶೇಷ. ಈ ಮೂಲಕ ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದನ್ನು ನಿರ್ದೇಶಿಸುವ ಅವಕಾಶ ನಾರಾಯಣ್‌ಗೆ ದೊರೆತಂತಾಗಿದೆ.

  ಅಂದಹಾಗೆ, ಕುಮಾರಸ್ವಾಮಿ-ನಾರಾಯಣ್‌ ಕಾಂಬಿನೇಷನ್‌ನ ಈ ಚಿತ್ರದಲ್ಲಿ ವಿಷ್ಣುವರ್ಧನ್‌ ನಟಿಸುತ್ತಿಲ್ಲ . ಏಕೆಂದರೆ ಇದು ಮೀಸೆಯ ಸಿನಿಮಾ ಅಲ್ಲ ! ಪ್ರೇಮ ಪ್ರಧಾನ ‘ಚಂದ್ರ ಚಕೋರಿ’ ಸಿನಿಮಾದಲ್ಲಿ ಸಂಪೂರ್ಣವಾಗಿ ಹೊಸಬರು ಮಿಂಚಲಿದ್ದಾರೆ. ತಾರಾಗಣ ಅಂತಿಮವಾಗಿಲ್ಲ .ಫೆಬ್ರವರಿಯಿಂದ ಶೂಟಿಂಗ್‌ ಶುರು. ಹಾಡುಗಳ ಧ್ವನಿಮುದ್ರಣ ಕಾರ್ಯ ಆರಂಭವಾಗಿದೆ.ಇದೆಲ್ಲಾ ಸರಿ. ‘ಹೆಜ್ಜೆ’ ಏನಾಯಿತು ?

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X