»   » ಕಪ್ಪು-ಬಿಳುಪು ದಿನಗಳ ಈಸ್ಟ್‌ಮನ್‌ ಕಲರ್‌ ನಟಿ ಸುರಯ್ಯಾ ನಿಧನ

ಕಪ್ಪು-ಬಿಳುಪು ದಿನಗಳ ಈಸ್ಟ್‌ಮನ್‌ ಕಲರ್‌ ನಟಿ ಸುರಯ್ಯಾ ನಿಧನ

Subscribe to Filmibeat Kannada

ಮುಂಬಯಿ : ಬಾಲಿವುಡ್‌ನ ಕಪ್ಪು ಮತ್ತು ಬಿಳುಪಿನ ದಿನಗಳ ಈಸ್ಟ್‌ಮನ್‌ ಕಲರ್‌ ವ್ಯಕ್ತಿತ್ವದ ನಟಿ ಹಾಗೂ ಗಾಯಕಿ ಸುರಯ್ಯಾ ಅಲ್ಪಕಾಲದ ಅಸೌಖ್ಯದ ನಂತರ, ಜ.31ರ ಶನಿವಾರ ಮುಂಬಯಿಯ ಆಸ್ಪತ್ರೆಯಾಂದರಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು .

15 ದಿನಗಳ ಹಿಂದೆ ರಕ್ತದೊತ್ತಡ ಹಾಗೂ ಇತರ ಸಮಸ್ಯೆಗಳಿಂದ ಬಳಲುತ್ತಿದ್ದ ಸುರಯ್ಯಾ ಅವರನ್ನು ದಕ್ಷಿಯ ಮುಂಬಯಿಯ ಹರಕಿಷನ್‌ ಆಸ್ಪತ್ರೆಗೆ ಸೇರಿಸಲಾಗಿತ್ತು . ಅನಾರೋಗ್ಯದಿಂದ ಚೇತರಿಸಿಕೊಳ್ಳದ ಸುರಯ್ಯ ಶನಿವಾರ ಬೆಳಗ್ಗೆ ನಿಧನರಾದರು.

ಫಾಲ್ಕೆ ಪ್ರಶಸ್ತಿ ವಿಜೇತ ದೇವಾನಂದ್‌ ಜೊತೆಗಿನ ಸುರಯ್ಯಾ ಅವರ ಪ್ರಣಯ ಬಾಲಿವುಡ್‌ನಲ್ಲಿ ಗುಲ್ಲಾಗಿತ್ತು . ಆದರೆ ದೇವಾನಂದ್‌ ಹಾಗೂ ಸುರಯ್ಯ ಅವರ ದಾರಿ ನಂತರದ ದಿನಗಳಲ್ಲಿ ಬೇರೆಬೇರೆಯಾಯಿತು. ದೇವಾನಂದ್‌ ಹಾಗೂ ಸುರಯ್ಯ ಕುರಿತ ಅನೇಕ ಕಥೆಗಳು-ದಂತಕಥೆಗಳು ಬಾಲಿವುಡ್‌ ಓಣಿಗಳಲ್ಲಿ ಇನ್ನೂ ಹಸಿರಾಗಿವೆ.

ಅಫ್ಸಾರ್‌, ದಿಲ್ಲಗಿ, ಮಿರ್ಜಾ ಘಾಲಿಬ್‌, ಪರ್ವಾನ, ಪ್ಯಾರ್‌ ಕಿ ಜೀತ್‌, ರುಸ್ತುಂ ಸೊಹ್ರಾಬ್‌, ಬಡಿ ಬಹೆನ್‌, ಶಮಾ ಪರ್ವಾನ ಮುಂತಾದವು ಸುರಯ್ಯಾ ಅವರ ಜನಪ್ರಿಯ ಚಿತ್ರಗಳು.

1941ರಲ್ಲಿ ತಾಜ್‌ಮಹಲ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಸುರಯ್ಯಾ , 1942ರಲ್ಲಿ ನೌಷಾದ್‌ ಗರಡಿಯಲ್ಲಿ ಹಿನ್ನೆಲೆ ಗಾಯನ ಆರಂಭಿಸಿದ್ದರು. 1944ರ ಫೂಲ್‌ ಚಿತ್ರ ಅವರಿಗೆ ರಾಷ್ಟ್ರೀಯ ಖ್ಯಾತಿ ದೊರಕಿಸಿಕೊಟ್ಟಿತ್ತು .

(ಪಿಟಿಐ)


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada