»   » ನಂಗೆ ಸಸ್ಯಾಹಾರ ಇಷ್ಟವಾಗೊಲ್ಲ -ರಕ್ಷಿತಾ

ನಂಗೆ ಸಸ್ಯಾಹಾರ ಇಷ್ಟವಾಗೊಲ್ಲ -ರಕ್ಷಿತಾ

Posted By:
Subscribe to Filmibeat Kannada
  • ನನಗೆ ಸಾಮಾನ್ಯವಾಗಿ ಸಸ್ಯಾಹಾರ ಇಷ್ಟವಾಗುವುದಿಲ್ಲ. ಆದರೆ ಪುಳಿಯೋಗರೆ ಎಂದರೆ ಪ್ರಾಣ. ಹೀಗೆಂದವರು ನಟಿ ರಕ್ಷಿತಾ. ಆಕೆಯ ದಢೂತಿ ದೇಹದ ಗುಟ್ಟು ಗೊತ್ತಾಯಿತಲ್ಲ!
  • ಅಶೋಕ್‌ ಪಾಟೀಲ್‌ ನಿರ್ದೇಶನದ ಹೊಸ ಚಿತ್ರ ‘ಮೇಡ್‌ ಇನ್‌ ಅಮೆರಿಕಾ ’. ಈ ಚಿತ್ರ ಅಶೋಕ್‌ ಪಾಟೀಲ್‌ ಅಮೆರಿಕಾದಿಂದ ಹಿಂತಿರುಗಿದ ಮೇಲೆ ಆರಂಭವಾಗಿದೆ.
  • ಮಾರಿ ಕಣ್ಣು ಹೋರಿ ಮ್ಯಾಗೆ ನಿರ್ಮಿಸಿದ ಬೆಸ್ಟ್‌ ಫಿಲಂಸ್‌ನ ಎ.ಕೇಶವ, ಎ.ನರಸಿಂಹ ಮತ್ತು ಕೇಶವ ಪ್ರಸಾದ್‌ ಈಗ ‘ಕಟುಕನ ಕಣ್ಣು ಕುರಿ ಮ್ಯಾಗೆ ’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಮಾರಿ ಕಣ್ಣು ಹೋರಿ ಮ್ಯಾಗೆ ’ ಚಿತ್ರವನ್ನು ನಿರ್ದೇಶಿಸಿದ ಕುಮಾರ್‌ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ಜಗ್ಗೇಶ್‌ ಈಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
  • ಸಾಯಿಪ್ರಕಾಶ್‌ ತಾತ ಆಗಿದ್ದಾರೆ. ಇತ್ತೀಚೆಗೆ ಸಾಯಿಪ್ರಕಾಶ್‌ ಅವರ ಮಗನ ಪ್ರಥಮ ಮಗನಿಗೆ ಹೈದರಾಬಾದಿನಲ್ಲಿ ನಾಮಕರಣ ನಡೆಯಿತು. ಮೊಮ್ಮಗನಿಗೆ ಯುಗ ಸಾಯಿ ಎಂದು ಹೆಸರಿಟ್ಟಿದ್ದಾರೆ.
  • ‘ಬಾ ಬಾರೋ ರಸಿಕ ’ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕರು ‘ಗಿರಿ’ ಎಂಬ ಚಿತ್ರದ ನಿರ್ಮಾಣದಲ್ಲಿ ತೊಡಗಿದ್ದಾರೆ. ತೆಲುಗಿನ ರವಿಚರಣ್‌ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
  • ಸಾಯಿಕುಮಾರ್‌ ಮತ್ತು ಪ್ರಕಾಶ್‌ ರೈ ಅಭಿನಯಿಸುವ ಚಿತ್ರವೊಂದು ಸೆಟ್ಟೇರಲಿದೆ. ಹೊಸ ನಾಯಕ ನಟನೊಬ್ಬನ ಪರಿಚಯವಾಗಲಿರುವ ಈ ಚಿತ್ರವನ್ನು ಆನಂದ್‌ ಪಿ.ರಾಜು ನಿರ್ದೇಶಿಸಲಿದ್ದಾರೆ.
  • ಇತ್ತೀಚೆಗೆ ಕರಾವಳಿ ತೀರದಲ್ಲಿ ಸುನಾಮಿ ಅಲೆಗಳಿಂದ ತತ್ತರಿಸಿ ಹೋದವರಲ್ಲಿ ಇಬ್ಬರು ಮಕ್ಕಳನ್ನು ನಟಿ ಮಾನ್ಯ ದತ್ತು ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದಾಳೆ. ಕನ್ನಡ ಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ಆಕೆ ಈ ವಿಷಯ ತಿಳಿಸಿದ್ದಾಳೆ.
  • ಮಲಯಾಳಂ ನಟಿ ಸದಾ ತನ್ನ ತುಟಿಗಳನ್ನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ ಎಂದು ಭಾರಿ ಸುದ್ದಿಯಾಗಿತ್ತು. ಅದು ರಂಗು ರಂಗಾಗೇ ಪತ್ರಿಕೆಗಳಲ್ಲಿ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲ, ಅದು ಲಿಪ್‌ಸ್ಟಿಕ್‌ ಜಾಹೀರಾತುಗೆ ಶುಕ್ರದೆಸೆಯನ್ನು ತಂದಿತ್ತು. ಆದರೆ ಮೊನ್ನೆ ಈಕೆ ಈ ಸುದ್ದಿಯನ್ನು ನಿರಾಕರಿಸಿದ್ದಾಳೆ. ತನ್ನ ತುಟಿಗಳಿಗೆ ಅಲರ್ಜಿಯಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾಳೆ.
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada