»   » ಮತ್ತೊಂದು ಕನ್ನಡ ಚಿತ್ರದಲ್ಲಿ ಕಮಲ್‌ಹಾಸನ್‌?

ಮತ್ತೊಂದು ಕನ್ನಡ ಚಿತ್ರದಲ್ಲಿ ಕಮಲ್‌ಹಾಸನ್‌?

Posted By:
Subscribe to Filmibeat Kannada

ಹೀರೊ-ಹೀರೊಯಿನ್‌ ಜೋಡಿ ಕ್ಲಿಕ್ಕಾಗುತ್ತಿದ್ದಂತೆ ಮುಂಬರುವ ಚಿತ್ರಕ್ಕೂ ಅದೇ ಜೋಡಿಯನ್ನು ಸೂಚಿಸುವುದು ಚಿತ್ರರಂಗ ಹಳೇ ಚಾಳಿ. ಈಗ ಹೀರೊ-ಹೀರೊ ಜೋಡಿಯ ಸರದಿ. ಕಮಲ್‌ಹಾಸನ್‌ ಮತ್ತೊಂದು ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ನಟ ರಮೇಶ್‌ ಹೇಳಿದ್ದಾರೆ. ಅವರು ಈ ವಿಷಯ ಪ್ರಕಟಿಸಿದ್ದು; ‘ರಾಮ ಶಾಮ ಭಾಮ’ ಚಿತ್ರದ ಶತದಿನೋತ್ಸವ ಆಚರಣೆ ಸಮಾರಂಭದಲ್ಲಿ.

ರಮೇಶ್‌ ಮತ್ತು ಕಮಲ್‌ ಜೋಡಿಯ ಈ ಹೊಸ ಚಿತ್ರ ಸಹಾ ರಿಮೇಕ್‌. ಅಂದ ಹಾಗೆ, ಇದು ತಮಿಳು ಚಿತ್ರ ‘ಮಗಳಿಲ್‌ ಮಟ್ಟುಂ’ ಎಂಬ ಚಿತ್ರದ ನಕಲು. ಮಗಳಿಲ್‌ ಮಟ್ಟುಂ ಎಂದರೆ ಕನ್ನಡದಲ್ಲಿ ‘ಹೆಂಗಸರಿಗೆ ಮಾತ್ರ’ ಎಂದರ್ಥ.

‘ಕೋಕಿಲಾ’, ‘ಮರಿಯಾ ಮೈ ಡಾರ್ಲಿಂಗ್‌’, ‘ಬೆಂಕಿಯಲ್ಲಿ ಅರಳಿದ ಹೂವು’ ಹಾಗೂ ‘ಪುಷ್ಟಕವಿಮಾನ’ ಎಂಬ ಕನ್ನಡ ಚಿತ್ರಗಳಲ್ಲಿ ಈ ಹಿಂದೆ ಅಭಿನಯಿಸಿದ್ದ ಕಮಲ್‌, ಕಳೆದ ವರ್ಷ ರಮೇಶ್‌ ನಿರ್ದೇಶನದ ಚಿತ್ರ ‘ರಾಮ ಶಾಮ ಭಾಮ’ದಲ್ಲಿ ನಟಿಸಿದ್ದರು.

ಕಮಲ್‌ ಮತ್ತೆ ಕನ್ನಡಕ್ಕೆ ಬರ್ತಾಯಿರೋದು ಓಕೆ... ಆದರೆ ರಿಮೇಕ್‌ ಚಿತ್ರ ಯಾಕೆ ಅನ್ನೋದು ಸ್ವಮೇಕ್‌ ಪ್ರೇಮಿಗಳ ಪ್ರಶ್ನೆ. ಅದೇನೇ ಇದ್ದರೂ ಕಮಲ್‌ ಮತ್ತೊಂದು ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ, ಕನ್ನಡ ಚಿತ್ರಪ್ರೇಮಿಗಳಿಗೆ ಸಂಭ್ರಮದ ಸಂಕೇತ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada