»   » ಏ.2ರ ತನಕ ಯವನಿಕಾದಲ್ಲಿ 3 ದಿನಗಳ ‘ಸಿನಿಮಾ ಹಬ್ಬ’

ಏ.2ರ ತನಕ ಯವನಿಕಾದಲ್ಲಿ 3 ದಿನಗಳ ‘ಸಿನಿಮಾ ಹಬ್ಬ’

Subscribe to Filmibeat Kannada


ಬೆಂಗಳೂರು : ಎಐಡಿಡಬ್ಲ್ಯೂಎ(ಆಲ್‌ ಇಂಡಿಯಾ ಡೆಮಾಕ್ರಟಿಕ್‌ ವಿಮೆನ್ಸ್‌ ಅಸೋಸಿಯೇಷನ್‌) ಆಶ್ರಯದಲ್ಲಿ ಮಾರ್ಚ್‌31ರಿಂದ ಏಪ್ರಿಲ್‌ 2ರವರೆಗೆ ಚಲನಚಿತ್ರೋತ್ಸವ ಹಾಗೂ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.

ನೃಪತುಂಗ ರಸ್ತೆಯಲ್ಲಿರುವ ಯವನಿಕಾದಲ್ಲಿ ಕಾರ್ಯಕ್ರಮಗಳು ಜರುಗಲಿದ್ದು, ಗಿರೀಶ್‌ ಕಾಸರವಳ್ಳಿ, ತಾರಾ, ಡಾ.ವಿಜಯಾ, ಬಿ.ಸುರೇಶ್‌, ಜೋಗಿ ಮತ್ತಿತರರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳುವರು. ‘ಹಸೀನಾ’ ಮತ್ತು ‘ಮಾತಿ ಮಾಯಿ’ ಚಿತ್ರಗಳು ಈ ಸಂದರ್ಭದಲ್ಲಿ ಪ್ರದರ್ಶನಗೊಳ್ಳಲಿವೆ.

2007, ಮಾರ್ಚ್‌ 31ರ ಕಾರ್ಯಕ್ರಮಗಳು :

  • ಮಧ್ಯಾಹ್ನ 3.30ಕ್ಕೆ ನಟಿ ವೈಶಾಲಿ ಕಾಸರವಳ್ಳಿ ಅವರಿಂದ ಭಾವಚಿತ್ರ ಪ್ರದರ್ಶನದ ಉದ್ಘಾಟನೆ
  • ಸಂಜೆ 4.00ಗಂಟೆಗೆ ನಟಿ ತಾರಾ ವೇಣು ಅವರಿಂದ ಚಿತ್ರೋತ್ಸವದ ಉದ್ಘಾಟನೆ
  • ಅಧ್ಯಕ್ಷತೆ- ಖ್ಯಾತ ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ
  • ಡಾ.ವಿಜಯಾ ಅವರಿಂದ ಭಾಷಣ
  • ಸಂಜೆ 5.00ಗಂಟೆಗೆ ಪ್ರಶಸ್ತಿ ವಿಜೇತ ‘ಹಸೀನಾ’ ಚಿತ್ರ ಪ್ರದರ್ಶನ
ಏಪ್ರಿಲ್‌ 1ರ ಕಾರ್ಯಕ್ರಮಗಳು :
  • 3.00ಗಂಟೆಗೆ ‘ಯುವಜನತೆಯ ಮೇಲೆ ಮಾಧ್ಯಮಗಳ ಪ್ರಭಾವ ಹಾಗೂ ಮಹಿಳೆಯರ ಮೇಲೆ ಅದರ ಪರಿಣಾಮಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ.
  • ಡಾ.ಎನ್‌.ಗಾಯತ್ರಿ, ಡಾ.ವಾಸು, ಎಚ್‌.ಎನ್‌.ಆರತಿ ಹಾಗೂ ಜೋಗಿ ಈ ವಿಷಯದ ಮೇಲೆ ಬೆಳಕು ಚೆಲ್ಲಲಿದ್ದಾರೆ. ಆನಂತರ ಡಾ.ಸಂಧ್ಯಾರೆಡ್ಡಿ ಮತ್ತು ಶೂದ್ರ ಶ್ರೀನಿವಾಸ್‌ ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಲಿದ್ದಾರೆ. ಬಿ.ಸುರೇಶ್‌ ಕಾರ್ಯಕ್ರಮ ನಿರೂಪಿಸಲಿದ್ದಾರೆ.
  • 4.30ಕ್ಕೆ ಪ್ರಶಸ್ತಿ ವಿಜೇತ ಮರಾಠಿ ಚಿತ್ರ ‘ಮಾತಿ ಮಾಯಿ’ ಪ್ರದರ್ಶನಗೊಳ್ಳಲಿದೆ.
ಏಪ್ರಿಲ್‌ 2ರ ಕಾರ್ಯಕ್ರಮ :
  • ಸಂಜೆ 4.00ಗಂಟೆಗೆ ಮಹಿಳಾ ಸಮಸ್ಯೆಗಳ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ.
(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada