»   » ಹಿರಿಯ ನಟ ಕೆ.ಎಸ್‌.ಅಶ್ವತ್ಥ್‌ಗೆ ಗೌರವ ಡಾಕ್ಟರೇಟ್‌

ಹಿರಿಯ ನಟ ಕೆ.ಎಸ್‌.ಅಶ್ವತ್ಥ್‌ಗೆ ಗೌರವ ಡಾಕ್ಟರೇಟ್‌

Subscribe to Filmibeat Kannada


ಮೈಸೂರು : ಹಿರಿಯ ನಟ ಕೆ.ಎಸ್‌.ಅಶ್ವತ್ಥ್‌ ಅವರಿಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ಪ್ರಕಟಿಸಿದೆ.

ಚಾಮಯ್ಯ ಮೇಷ್ಟ್ರು ಎಂದೇ ಜನಪ್ರಿಯವಾಗಿರುವ ಕೆ.ಎಸ್‌. ಅಶ್ವತ್ಥ್‌, ಈ ಮೂಲಕ ಗೌರವ ಡಾಕ್ಟರೇಟ್‌ ಪಡೆದ ಪ್ರಪ್ರಥಮ ಪೋಷಕ ನಟ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಗೋವಾ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಶೇಕ್‌ ಅಲಿ ಅವರಿಗೂ ವಿವಿ ಡಾಕ್ಟರೇಟ್‌ ಪ್ರಕಟಿಸಿದೆ.

ಜೂನ್‌ ತಿಂಗಳಲ್ಲಿ ನಡೆಯುವ ತುಮಕೂರು ವಿವಿಯ ಮೊದಲ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು.

ಅಶ್ವತ್ಥ್‌ ಪ್ರತಿಕ್ರಿಯೆ : ಪ್ರಶಸ್ತಿ ಕುರಿತು ಅಶ್ವತ್ಥ್‌ ಅಭಿಪ್ರಾಯ ಕೇಳಿದಾಗ, ‘ಯಾವ ಕ್ಷಣದಲ್ಲೂ ನಾನು ಈ ಪದವಿಯನ್ನು ನಿರೀಕ್ಷಿಸಿರಲಿಲ್ಲ. ನನಗೆ ಯಾವ ಅರ್ಹತೆಯಿದೆ ಎಂದು ಈ ಗೌರವ ಡಾಕ್ಟರೇಟ್‌ ನೀಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಆದರೆ ವಿವಿಯ ತೀರ್ಮಾನವನ್ನು ಪ್ರಶ್ನಿಸುವಂತಹ ದೊಡ್ಡ ವ್ಯಕ್ತಿ ನಾನಲ್ಲ. ಹಾಗಾಗಿ ಪ್ರಶಸ್ತಿಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ’ ಎಂದು ಹೇಳಿದರು.

‘ನಾನು ಎಲ್ಲರಂತೆ ಹೊಟ್ಟೆಪಾಡಿಗೆ ಚಿತ್ರರಂಗಕ್ಕೆ ಕಾಲಿಟ್ಟ ಕಲಾವಿದ. ನಿರ್ದೇಶಕರು ಹಾಗೂ ನಿರ್ಮಾಪಕರು ಸೃಷ್ಟಿಸಿದ ಪಾತ್ರಕ್ಕೆ ಸರಿಯಾದ ಅಭಿನಯ ನೀಡಲು ಪ್ರಯತ್ನಪಟ್ಟಿದ್ದೇನೆ ಅಷ್ಟೆ ’ ಎಂದು ಹಿರಿಯ ನಟ ವಿನಮ್ರವಾಗಿ ನುಡಿದರು.

(ದಟ್ಸ್‌ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada