»   » ಮತ್ತೆ ಮೊಳಗಲಿದೆ ‘ಸಿಂಹ ಘರ್ಜನೆ’

ಮತ್ತೆ ಮೊಳಗಲಿದೆ ‘ಸಿಂಹ ಘರ್ಜನೆ’

Posted By: Staff
Subscribe to Filmibeat Kannada

ಸಿಂಹ ಮತ್ತೆ ಘರ್ಜಿಸಲಿದೆ!
ಅಂದು 'ಸಾಹಸ ಸಿಂಹ" ಇಂದು 'ಸಿಂಹಾದ್ರಿಯ ಸಿಂಹ." ವಿಷ್ಣು ಟೈಂ ಚೆನ್ನಾಗಿದೆ. ಮುಟ್ಟಿದ್ದೆಲ್ಲಾ ಚಿನ್ನ . ಸಿಂಹಾದ್ರಿಯ ಸಿಂಹ ಗೆಲ್ಲುವ ಬಗ್ಗೆ ಉದ್ಯಮಕ್ಕೆ ಅನುಮಾನವೇ ಉಳಿದಿಲ್ಲ .

ವಿಷ್ಣು ಹಾಗೂ ಎಸ್‌.ನಾರಾಯಣ್‌ ಜೋಡಿಯ ಇನ್ನೊಂದು ಪ್ರಯೋಗ- ಸಿಂಹಾದ್ರಿಯ ಸಿಂಹ. ವಿಷ್ಣುಗೆ ಮೀಸೆ ಅಂಟಿಸುವುದರ ಮೂಲಕವೇ ಗಲ್ಲಾ ಪೆಟ್ಟಿಗೆಯನ್ನು ದೋಚಿದ ನಾರಾಯಣ್‌, ಸಿಂಹದಲ್ಲಿ ಮೀಸೆ ಇಟ್ಟಿದ್ದಾರೋ ಇಲ್ಲವೋ ಅನ್ನುವುದು ಇನ್ನೂ ಗುಟ್ಟಾಗಿಯೇ ಉಳಿದಿದೆ. ಸಿಂಹ ಅಂದಮೇಲೆ ಮೀಸೆ ಜೋರಾಗಿಯೇ ಇರಬೇಕು ಅನ್ನುವುದು ಚಿತ್ರ ರಸಿಕರ ಸಿನಿಸಿಕೆ.

ಅಂದಹಾಗೆ, ಜೂನ್‌ 6 ರ ಗುರುವಾರ ಸಿಂಹಾದ್ರಿಯ ಸಿಂಹ ತೆರೆ ಕಾಣಲಿದೆ. ಕಳೆದ ವಾರ ತೆರೆಕಂಡ ತುಂಟಾಟ ಚಿತ್ರಕ್ಕೆ ಬೆಂಗಳೂರಿನಲ್ಲಿ ಸಿಕ್ಕಿದ್ದು ಒಂದೇ ಥಿಯೇಟರ್‌ ಆದರೆ, ಸಿಂಹಕ್ಕೆ ಈಗಾಗಲೇ ಐದಾರು ಥಿಯೇಟರ್‌ ಸಿಕ್ಕಿವೆ. ಅದು ಜಮೀನ್ದಾರ್ರು ಯಶಸ್ಸಿನ ಮಹಿಮೆ. ವಾರ್ತಾ ಸಂಚಯ

English summary
Will Simhadriya Simha becomes a success?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada