»   » ಸ್ಯಾಂಡಲ್ ವುಡ್ : ಬಾಕ್ಸಾಫೀಸ್ ರಿಪೋರ್ಟ್

ಸ್ಯಾಂಡಲ್ ವುಡ್ : ಬಾಕ್ಸಾಫೀಸ್ ರಿಪೋರ್ಟ್

Subscribe to Filmibeat Kannada


ಈವರೆಗೆ ಗೆದ್ದ ಚಿತ್ರಗಳೆಷ್ಟು, ಕೆಳಕ್ಕೆ ಬಿದ್ದ ಚಿತ್ರಗಳೆಷ್ಟು? ಯಾವ ತಾರೆಯ ಹಣೆಬರಹ ಹೇಗಿದೆ ?ಈವರೆಗೆ ಕಾಮಿಡಿ ಗಣೇಶ್ ಅವರನ್ನು ನಂಬಿದವರು ಟ್ರ್ಯಾಜಿಡಿ ಕಂಡಿಲ್ಲ! ಚೆಲುವಿನ ಚಿತ್ತಾರನಿರ್ಮಾಪಕ ಮತ್ತು ನಿರ್ದೇಶಕ ಎಸ್.ನಾರಾಯಣ್, ಹುಡುಗಾಟಚಿತ್ರದ ನಿರ್ಮಾಪಕ ಬಾಬು ರೆಡ್ಡಿ ಖುಷಿಯಿಂದಿದ್ದಾರೆ.

***

ಜಯಸುಧಾ ಅಮ್ಮನಾಗಿ, ಶಿವರಾಜ್ ಕುಮಾರ್ ಮಗನಾಗಿ ಅಭಿನಯಿಸಿದ್ದತಾಯಿಯ ಮಡಿಲುಇನ್ನಿಲ್ಲದಂತೆ ನೆಲಕಚ್ಚಿತ್ತು. ಈ ನಷ್ಟವನ್ನು ಎಸ್.ನಾರಾಯಣ್, ಚೆಲುವಿನ ಚಿತ್ತಾರದಮುಖಾಂತರ ತುಂಬಿಕೊಂಡಿದ್ದಾರೆ.ಸಿನಿ ಮೂಲಗಳ ಪ್ರಕಾರ, ನಾರಾಯಣ್ ನಷ್ಟ ತುಂಬಿಕೊಂಡು ಈಗಾಗಲೇ 3ಕೋಟಿ ರೂಪಾಯಿ ಲಾಭ ಮಾಡಿದ್ದಾರೆ.

***

ಒಂದು ಯಶಸ್ವಿ ಚಿತ್ರ, ಹತ್ತು ಚಿತ್ರಗಳನ್ನು ತುಳಿಯುವ ಪರಿಸ್ಥಿತಿ ರಾಜ್ಯದಲ್ಲಿದೆ. ಕನ್ನಡ ಚಿತ್ರಗಳು ಚಿತ್ರಮಂದಿರದ ಸಮಸ್ಯೆಯನ್ನು ಮೊದಲಿನಿಂದಲೂ ಎದುರಿಸುತ್ತಿದೆ. ಈಗ ರಾಜ್ಯದ ಇರೋಬರೋ ಟಾಕೀಸುಗಳನ್ನು ಗಣೇಶ್ ಚಿತ್ರಗಳು ಕಸಿದಿವೆ.

***

ಗಣೇಶ್ ಅಲೆ ಅಬ್ಬರದ ಮಧ್ಯೆಯೂ ರಮೇಶ್ ರ ಸತ್ಯವಾನ ಸಾವಿತ್ರಿ, ರವಿಚಂದ್ರನ್ ರ ಯುಗಾದಿ, ತಮಾಷೆಗಾಗಿ , ಸುದೀಪ್ ರ ಶಾಂತಿ ನಿವಾಸ ನಂ.73ಕಷ್ಟಪಟ್ಟು ಚಿತ್ರಮಂದಿರದಲ್ಲಿ ಉಳಿದಿವೆ. ಈ ಚಿತ್ರಗಳು ನಿರ್ಮಾಪಕರಿಗೆ ಮೋಸ ಮಾಡಿಲ್ಲ. ಆದರೂ ಗಣೇಶ್ ಚಿತ್ರಗಳಿಂದ ತುಸು ತೊಂದರೆಯಂತೂ ಆಗಿದೆ.

***

ಶಿವರಾಜ್ ಕುಮಾರ್ ಅಭಿನಯದ ಸಂತ ಮತ್ತು ನೆನಪಿರಲಿ ಪ್ರೇಮ್ ರ ಪಲ್ಲಕ್ಕಿಅರ್ಧ ಶತಕ ಹೊಡೆವ ಹೊತ್ತಿಗೆ ಸುಸ್ತಾಗಿವೆ.

***

ಜ.1ರಿಂದ ಜು.31ರವರೆಗೆ 58 ಸಿನಿಮಾಗಳು ಬಿಡುಗಡೆಯಾಗಿವೆ. ಸಂಖ್ಯೆ ದೊಡ್ಡದು ಅನ್ನಿಸಿದರೂ, ಯಶಸ್ಸಿನ ಪ್ರಮಾಣ ಸಾಲದು. ಈ ಮಧ್ಯೆ 20 ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿದ್ದು, ಚಿತ್ರಮಂದಿರ ಹುಡುಕುತ್ತಿವೆ.

***

ಉಪೇಂದ್ರ, ದರ್ಶನ್ ಅಭಿನಯದ ಅನಾಥರು, ದರ್ಶನ್ ಮತ್ತು ನವ್ಯ ನಾಯರ್ ಅಭಿನಯದ ಗಜ, ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಮಾತಾಡ್ ಮಾತಾಡ್ ಮಲ್ಲಿಗೆಸದ್ಯದಲ್ಲಿಯೇ ತೆರೆಗೆ ಬರಲಿವೆ.

***

ಮಾತಾಡ್ ಮಾತಾಡ್ ಮಲ್ಲಿಗೆಚಿತ್ರದ ಧ್ವನಿ ಸುರಳಿ ಬಿಡುಗಡೆಯಾಗಿದೆ. ನಾಗತಿಹಳ್ಳಿ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ವಿಷ್ಣುವರ್ಧನ್,ಸುಹಾಸಿನಿ ಪ್ರಮುಖ ಪಾತ್ರದಲ್ಲಿದ್ದಾರೆ. ರೈತನ ಪಾತ್ರದಲ್ಲಿ ವಿಷ್ಣು ಅಭಿನಯಿಸಿದ್ದಾರೆ.

***

ಪುನೀತ್ ಮತ್ತು ಪಾರ್ವತಿಯಮಿಲನ, ಶಿವರಾಜ್ ಕುಮಾರ್ ಮತ್ತು ಗೌರಿಯ ಗಂಡನ ಮನೆಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳು ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada