For Quick Alerts
  ALLOW NOTIFICATIONS  
  For Daily Alerts

  ‘ಒಡಹುಟ್ಟಿದವಳು’ ಈ ವಾರ ನಿಮ್ಮ ಮುಂದೆ!

  By Staff
  |

  ಮೂರು ‘ರ’(ರವಿಚಂದ್ರನ್‌, ರಕ್ಷಿತಾ ಮತ್ತು ರಾಧಿಕಾ)ಗಳ ‘ಒಡಹುಟ್ಟಿದವಳು’ ಚಿತ್ರ ಈ ಶುಕ್ರವಾರ(ಸೆ.1) ಬೆಳ್ಳಿತೆರೆಯೇರಲಿದೆ. ತಮ್ಮ ರಸಿಕ ಚೇಷ್ಟೆಗಳಿಂದ ಮಹಿಳೆಯರ ಸಿಡಿಮಿಡಿಗೆ ಪಾತ್ರರಾಗುತ್ತಿದ್ದ ರವಿಚಂದ್ರನ್‌, ಈ ಚಿತ್ರದಲ್ಲಿ ಮಹಿಳೆಯರು ಲೀಟರ್‌ಗಟ್ಟಲೇ ಕಣ್ಣೀರು ಸುರಿಸುವಂತೆ ಮಾಡಲಿದ್ದಾರೆ!

  ‘ತವರಿನ ಸಿರಿ’ಯಲ್ಲಿ ಮಹಿಳೆಯರನ್ನು ಅಳಿಸುವಲ್ಲಿ ಸೋತು ಕಂಗಲಾಗಿದ್ದ ನಿರ್ದೇಶಕ ಸಾಯಿಪ್ರಕಾಶ್‌, ಹಠ ತೊಟ್ಟವರಂತೆ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಕನಿಷ್ಠ ಐದಾರು ಕಡೆ ಯಾರು ಬೇಡವೆಂದರೂ ಕಣ್ಣೀರು ಕಾವೇರಿಯಾಗಿ ಧುಮುಕುವುದಂತೆ! ಸಾಯಿಕೃಷ್ಣ ಸಂಭಾಷಣೆ ಚಿತ್ರಕ್ಕೆ ಶಕ್ತಿ ನೀಡಿದೆಯಂತೆ.

  ಕೆ.ಕಲ್ಯಾಣ್‌ ಸಾಹಿತ್ಯ, ಆರ್‌.ಪಿ.ಪಟ್ನಾಯಕ್‌ ಸಂಗೀತ, ರವಿಚಂದ್ರನ್‌ ಗತ್ತು, ರಕ್ಷಿತಾ-ರಾಧಿಕಾರ ಚಮಕ್ಕು ಚಿತ್ರವನ್ನು ಗೆಲ್ಲಿಸಿಯೇ ಗೆಲ್ಲಿಸುತ್ತದೆ ಎಂಬ ವಿಶ್ವಾಸ ನಿರ್ಮಾಪಕ ಕೆ.ಮಂಜು ಅವರಲ್ಲಿದೆ. ಅಂದಹಾಗೇ ಈ ‘ಒಡಹುಟ್ಟಿದವಳು ’ ಚಿತ್ರ ತಮಿಳಿನ ‘ಪೋರ್ಕಾಲಂ’(ಚೆರಣ್‌ರ ಈ ಸೂಪರ್‌ ಹಿಟ್‌ ಸಿನಿಮಾದಲ್ಲಿ ಮುರಳಿ, ಮೀನಾ, ಸಾಂಘವಿ ನಟಿಸಿದ್ದರು)ನ ರೀಮೇಕ್‌ ರೂಪ.

  ಮತ್ತೊಂದು ಸುದ್ದಿ ಏನಪ್ಪಾ ಅಂದ್ರೆ -ಈ ಚಿತ್ರ ನೋಡಲು ಅಮೆರಿಕಾದ ವಾಷಿಂಗ್ಟನ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಸಕ್ತರಾಗಿದ್ದಾರೆ. ಚಿತ್ರದ ವಿಶೇಷಕ್ಕಿಂತ ಈ ನೆಲದ ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿ ಅರಿಯುವುದು ಅವರ ಉದ್ದೇಶ. ವಿದ್ಯಾರ್ಥಿಗಳಿಗೆ ಇಂತಹ ಐಡಿಯಾ ಕೊಟ್ಟದ್ದು ನಿರ್ದೇಶಕಿ ಕವಿತಾಲಂಕೇಶ್‌.

  Post your views

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X