»   » ಅಲ್ಲಿ ಸ್ಮಶಾನ ಮೌನ! ಇಲ್ಲಿ ಚಲನಚಿತ್ರ ಪ್ರಶಸ್ತಿ ಸಡಗರ!

ಅಲ್ಲಿ ಸ್ಮಶಾನ ಮೌನ! ಇಲ್ಲಿ ಚಲನಚಿತ್ರ ಪ್ರಶಸ್ತಿ ಸಡಗರ!

Posted By: Super
Subscribe to Filmibeat Kannada
annual cinema awards
ಬೆಂಗಳೂರು, ಆಗಸ್ಟ್ 31 : ಅಲ್ಲಿ ನೀಗ್ರೋ ಜಾನಿ ಮನೆಯಲ್ಲಿ ಸ್ಮಶಾನ ಮೌನ. ಇಲ್ಲಿ ಸಂಭ್ರಮ ಸಡಗರ! ಕನಿಷ್ಠ ಎರಡು ನಿಮಿಷ ಸಂತಾಪ ವ್ಯಕ್ತಪಡಿಸಬೇಕೆಂಬ ಸೌಜನ್ಯ ಸಹಾ ಅಲ್ಲಿ ಯಾರಿಗೂ ಇದ್ದಂತಿರಲಿಲ್ಲ.

ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹಿರಿಯ ನಟಿ ಮತ್ತು ರಾಜ್ ಕುಮಾರ್ ಪ್ರಶಸ್ತಿ ವಿಜೇತೆ ಎಂ.ಎನ್.ಲಕ್ಷ್ಮಿದೇವಿ ಅವರಿಗೆ ಬಿಡಿಎ ಸೈಟು ನೀಡುವುದಾಗಿ ಘೋಷಿಸಿದರು.

ದುನಿಯಾ ನಾಯಕ ವಿಜಯ್ ತಮ್ಮ ಮಕ್ಕಳೊಂದಿಗೆ ನೃತ್ಯ ಮಾಡಿದ್ದು ಬಿಟ್ಟರೇ, ಇನ್ನು ಹೇಳಿಕೊಳ್ಳುವಂತಹ ಮನರಂಜನಾ ಕಾರ್ಯಕ್ರಮಗಳು ಅಲ್ಲಿರಲಿಲ್ಲ.

ಸತತ 3ನೇ ಸಲ ಪ್ರಶಸ್ತಿ ಪ್ರದಾನ ಮಾಡಿ ಕುಮಾರಸ್ವಾಮಿ ಹ್ಯಾಟ್ರಿಕ್ ಮಾಡಿದರು. ಪ್ರಶಸ್ತಿ ಪುರಸ್ಕೃತರ ಹಾಜರಿದ್ದರು. ನಟ ವಿಷ್ಣುವರ್ಧನ್, ಭಾರತಿ, ತಲ್ಲಂ ನಂಜುಂಡ ಶೆಟ್ಟಿ, ಹೆಚ್.ಡಿ.ಗಂಗರಾಜು, ಸಾ.ರಾ.ಗೋವಿಂದು ಜಯಮಾಲಾ, ಟಿ.ಎಸ್.ನಾಗಾಭರಣ ಸೇರಿದಂತೆ ಚಿತ್ರರಂಗದ ವಿವಿಧ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

English summary
Chief Minister H.D. Kumaraswamy was presenting the annual cinema awards for 2006-07 at a glittering function organised by the Department of Information on Thursday(Aug.30). The event was underlined by cultural fetes such as music and dance.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada