ಹಂಸಲೇಖ, ದ್ವಾರಕೀಶ್ ಸೇರಿದಂತೆ ಐವರಿಗೆ ಮನ್ನಣೆ
ಬೆಂಗಳೂರು : ಈ ವರ್ಷ ಕನ್ನಡ ಚಿತ್ರರಂಗದ ಐದು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.
ರಾಜ್ಯ ಸರ್ಕಾರದ ಗೌರವಕ್ಕೆ ಪಾತ್ರರಾಗಿರುವ ಹಂಸಲೇಖ, ಪ್ರಶಸ್ತಿಯಿಂದ ಖುಷಿಯಲ್ಲಿದ್ದಾರೆ. ಈ ವರ್ಷ ನಾಲ್ಕು ಪ್ರಶಸ್ತಿ ಬಂದಿವೆ. ಆ ಪರಿಣಾಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಶ್ರೀರಂಗ ಪಟ್ಟಣ ತಾಲೂಕಿನ ಕನ್ನಡಂಬಾಡಿ ಹಂಸಲೇಖರ ಸ್ವಗ್ರಾಮ. ಕೆಆರ್‌ಎಸ್ ಅಣೆೆಕಟ್ಟೆ ಕಟ್ಟಿದ ನಂತರ ಗ್ರಾಮ ಮುಳುಗಡೆಯಾಯಿತು. ಹೀಗಾಗಿ, ಹಂಸಲೇಖ ಕುಟುಂಬ ಬೆಂಗಳೂರಿಗೆ ವಲಸೆ ಬಂತು. ಗಂಗರಾಜು ಎಂಬುದು ಹಂಸಲೇಖರ ಮೂಲ ಹೆಸರು. ಇವರು ಚಿತ್ರರಂಗದಲ್ಲಿ ತಮ್ಮ ಸಾಹಿತ್ಯ ಮತ್ತು ಸಂಗೀತ ಪ್ರತಿಭೆಯಿಂದ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.
ಹಂಸಲೇಖ ಜೊತೆ, ನಟ ಮತ್ತು ನಿರ್ಮಾಪಕ ದ್ವಾರಕೀಶ್, ಕಿರುತೆರೆ ಮತ್ತು ಬೆಳ್ಳಿತೆರೆಯ ನಿರ್ದೇಶಕ ಎಸ್.ನಾರಾಯಣ್, ನಟ ದೊಡ್ಡಣ್ಣ, ಲೇಖಕ ಮತ್ತು ನಟ ಲೋಹಿತಾಶ್ವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications