»   » ‘ಮದನ’ನ ಮದನಾರಿ ಸಮೀಕ್ಷಾ ಏನಂದಿದ್ದಾಳೆ ಗೊತ್ತೆ?

‘ಮದನ’ನ ಮದನಾರಿ ಸಮೀಕ್ಷಾ ಏನಂದಿದ್ದಾಳೆ ಗೊತ್ತೆ?

Posted By:
Subscribe to Filmibeat Kannada


ತಮಿಳಿನ ಸಮೀಕ್ಷಾ, ಆದಿತ್ಯನೊಂದಿಗೆ ‘ಮದನ’ ಚಿತ್ರದಲ್ಲಿ ಅಭಿನಯಿಸಿ, ಕೆಲಸವಾದ ಮೇಲೆ ಹೊರಟಿದ್ದಾರೆ. ಹೊರಡುವ ಮುನ್ನ ಪತ್ರಕರ್ತರ ಬಳಿ, ಮನಬಿಚ್ಚಿ ಮಾತನಾಡಿದ್ದಾರೆ.

‘ಬೆಂಗಳೂರು ನಗರ ಉದ್ಯೋಗಸ್ಥರಿಗೆ ಸೂಕ್ತ ಸ್ಥಳ’ ಎನ್ನುವ ಸಮೀಕ್ಷಾ, ಅದಕ್ಕೆ ತನ್ನದೇ ಆದ ಕಾರಣವನ್ನೂ ನೀಡಿದ್ದಾರೆ. ಇಲ್ಲಿ ಪರಭಾಷಿಗರು ಸಹಾ ಕೆಲಸ ಮಾಡಬಹುದು. ನನಗಿಲ್ಲಿ ಭಾಷೆಯ ತೊಡಕು ಉಂಟಾಗಲಿಲ್ಲ. ಹಿಂದಿ ಮೂಲಕ ಯಶಸ್ವಿಯಾಗಿ ಸಂವಹನ ನಡೆಸಿದ್ದಾಗಿ ಹೇಳಿದ್ದಾರೆ.

ಎಲೆಕ್ಟ್ರಾನಿಕ್‌ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಸಮೀಕ್ಷಾ, ಉತ್ತರ ಭಾರತದ ಹುಡುಗಿ. ಈಗಾಗಲೇ ತಮಿಳಿನಲ್ಲಿ ಮನೆಮಾತು. ತೆಲುಗಿನಲ್ಲೂ ಎರಡು ಚಿತ್ರಗಳನ್ನು ಮುಗಿಸಿದ್ದಾರೆ. ಚಿತ್ರ ಹೇಗಿರಬೇಕು ಎಂಬ ಬಗ್ಗೆ ಸಮೀಕ್ಷಾಗೆ ಕಲ್ಪನೆ ಇದೆಯಂತೆ. ‘ಚರ್ಮ ಪ್ರದರ್ಶನದಲ್ಲಿ ನನಗೆ ಆಸಕ್ತಿಯಿಲ್ಲ. ಚಿತ್ರವನ್ನು ಎಲ್ಲರೂ ನೋಡುವಂತಿರಬೇಕು’ ಎಂದಿದ್ದಾರೆ. ಇವರು ಹೇಳುವುದೊಂದು, ಮಾಡುವುದೊಂದಾ ಎಂಬುದನ್ನು ಪ್ರೇಕ್ಷಕರೇ ಹೇಳಬೇಕು.

ಈ ಮಧ್ಯೆ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳಲ್ಲಿ ನಟಿಸುವುದು ನನ್ನ ಕನಸು. ಬೇಕಿದ್ದರೆ ಸಂಭಾವನೆ ಪಡೆಯದೆ, ಉಚಿತವಾಗಿ ಬೇಕಾದರೂ ಅಭಿನಯಿಸಲು ಸಿದ್ಧ ಎಂದು ಸಮೀಕ್ಷಾ ಹೇಳಿದ್ದಾರೆ. ನಿರ್ಮಾಪಕರು ಮನಸ್ಸು ಮಾಡಲಿ.

ಮದನ ಚಿತ್ರದ ನಿರ್ಮಾಪಕರು ವಿಜಯ ಲಕ್ಷ್ಮಿ ಸಿಂಗ್‌. ಅವರ ಪತಿ ಜೈ ಜಗದೀಶ್‌, ಚಿತ್ರದ ನಿರ್ದೇಶಕರು.

ಸಮೀಕ್ಷಾ ಎಂಬ ಮೋಹಕ ಚೆಲುವೆಯ ಕಾಣಲು ಇಲ್ಲಿ ಕ್ಲಿಕ್ಕಿಸಿ!

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X