»   » ‘ಜೋಗುಳ’ ತೂಕಡಿಸುತ್ತಿರುವುದಾದರೂ ಯಾಕೆ ಗೊತ್ತೆ ?

‘ಜೋಗುಳ’ ತೂಕಡಿಸುತ್ತಿರುವುದಾದರೂ ಯಾಕೆ ಗೊತ್ತೆ ?

Posted By: Staff
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ರೂರಲ್‌ ಸ್ಟಾರ್‌ ಬಿ.ಸಿ.ಪಾಟೀಲರ ಸಿನಿಮಾ ಹಳ್ಳಿ ಟೆಂಟಿಗೂ ಆಗಿಬರದೇ ಹೋಗುತ್ತಿರುವ ಈ ಕಾಲದಲ್ಲಿ ಅವರು ಏನು ಮಾಡುತ್ತಿರುವರು ಅಂತ ನೋಡಿದಾಗ...

ಬಾಯಗಲಿಸಿ ರಾವಣನ ಇಸ್ಟೈಲಲ್ಲಿ ಆಕಳಿಸುತ್ತಿದ್ದ ಪಾಟೀಲರ ಮುಖ ಬಾಡಿ ಹೋಗಿತ್ತು. ಒಂದು ಕಡೆ 'ಹತ್ತೂರ ಒಡೆಯ" ಸಿನಿಮಾ ಮೇಲೆ ಸುರಿದ ಸರಿ ಸುಮಾರು ಒಂದು ಕೋಟಿ ರುಪಾಯಿ ಕೊಚ್ಚಿ ಹೋಗಿರುವ ದುಃಖ. ಇನ್ನೊಂದು ಕಡೆ ಆ ದುಡ್ಡಿಗಾಗಿ ಮಾಡಿರುವ ಸಾಲದ ಬಡ್ಡಿ ಬೆಳೆಯುತ್ತಲೇ ಇರುವ ಆತಂಕ. ಮಗದೊಂದೆಡೆ ಸದ್ಯಕ್ಕೆ ತಾಚೊಂಡಿರುವ 'ಜೋಗುಳ" ಸಿನಿಮಾ ಚಿತ್ರೀಕರಣ. ಬೃಹದಾಕಾರದ ಪಾಟೀಲರ ಆಕೃತಿಯ ತುಂಬಾ ಈಗ ಅಳಲು.

'ಕೌರವ" ಯಶಸ್ಸಿನಿಂದ ಪ್ರಚೋದಿತರಾಗಿ ಅದೇ ಪ್ರಕಾರದ ಚಿತ್ರಗಳಿಗೆ ಕೈ ಹಚ್ಚಿ ಸಾಕಷ್ಟು ಕೈಸುಟ್ಟುಕೊಂಡ ಪಾಟೀಲರಿಗೆ 'ಹತ್ತೂರ ಒಡೆಯ"ನ ಬಗ್ಗೆ ಅಪಾರ ನಿರೀಕ್ಷೆಯಿತ್ತು. ಈಗ ಅದೂ ಹುಸಿಯಾಗಿದೆ. 'ಜೋಗುಳ" ಗೆಲ್ಲಬಹುದು ಅಂತ ಸ್ಯಾಂಡಲ್‌ವುಡ್‌ ಮಾತಾಡಿಕೊಳ್ಳುತ್ತಿದೆ. ಇದಕ್ಕೆ ಕಾರಣ- ಅದರ ನಿರ್ದೇಶಕ ಎಸ್‌.ಮಹೇಂದರ್‌. ನಟರ ಮಿತಿಯಲ್ಲೇ ಕೆಲಸ ತೆಗೆಸಿ ಸೈ ಎನಿಸಿಕೊಂಡಿರುವ ಜಾಣ ಮಹೇಂದರ್‌. 'ನಿನಗಾಗಿ" ಯಶಸ್ಸೇ ಇದಕ್ಕೆ ಸಾಕ್ಷಿ. ಆ್ಯಕ್ಷನ್‌- ಕಟ್‌ ಹೇಳೋಕೆ ಮಹೇಂದರ್‌ ಸಿದ್ಧರಾಗಿ ನಿಂತಿದ್ದರೂ, ಪಾಟೀಲರ ಥೈಲಿ ಬರಿದಾಗಿರುವುದರಿಂದ 'ಜೋಗುಳ" ಸದ್ಯಕ್ಕೆ ನಿದ್ರಾವಸ್ಥೆಯಲ್ಲಿದೆ; ಪಾಟೀಲರೂ ಕೂಡ !

ನಾಯಕರಾಗಿ ಪಾಟೀಲರು ಕೆರಿಯರ್ರನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿರುವ ಪರಿಸ್ಥಿತಿಯಲ್ಲಿ ಅನಿವಾರ್ಯ ಕಾರಣಗಳಿಂದ ಮತ್ತೆ ಖಳನಾಯಕನ ಆಫರನ್ನು ಒಪ್ಪಿಕೊಳ್ಳಲೇಬೇಕಾಯಿತು. ಹೀಗಾಗಿ 'ಗ್ಯಾಂಗ್‌ಲೀಡರ್‌" ಚಿತ್ರದಲ್ಲಿ ಪಾಟೀಲರು ವಿಲನ್‌.

ಮುಖಪುಟ / ಸ್ಯಾಂಡಲ್‌ವುಡ್‌

English summary
B.C.Patil struggling to complete Jogula
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada