For Quick Alerts
ALLOW NOTIFICATIONS  
For Daily Alerts

2007ರ ಚಿತ್ರರಂಗದ ಮಳೆ ಬೆಳೆ!

By Staff
|

ವರ್ಷದ ಕೊನೆ ಬರುತ್ತಿದ್ದಂತೆ ಮತ್ತೆ ಲೆಕ್ಕಾಚಾರ ಪ್ರಾರಂಭವಾಗಿದೆ. ಯಾರು ಮೇಲೆ, ಯಾರು ಕೆಳಗೆ ಎಂದು ಗುಣಾಕಾರ, ಭಾಗಾಕಾರ ಶುರುವಾಗಿದೆ. ಏನೇ ಲೆಕ್ಕಾಚಾರ ಹಾಕಿದರೂ ಈ ವರ್ಷದ ಗಣೇಶ್‌ಗೆ ಸೇರುತ್ತದೆ. ಮುಂಗಾರು ಮಳೆ 25ನೇ ವಾರ ಮುಗಿಸಿದೆ. ಹುಡುಗಾಟ, ಚೆಲುವಿನ ಚಿತ್ತಾರ ನೂರುದಿನಗಳನ್ನು ಪೂರೈಸಿವೆ. ಅಲ್ಲಿಗೆ ಮೂರು ಚಿತ್ರಗಳು ಹಿಟ್ ಆಗಿ ಗಣೇಶ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಎರಡನೆಯ ಸ್ಥಾನದಲ್ಲಿ ವಿಜಯ್. ಮೂರನೆಯ ಸ್ಥಾನದಲ್ಲಿ ಪುನೀತ್ ಆಸೀನರಾಗಿದ್ದಾರೆ.

ಇನ್ನುಳಿದಂತೆ ಶಿವಣ್ಣ ನಟಿಸಿದ 'ತಾಯಿಯ ಮಡಿಲು', 'ಗಂಡನ ಮನೆ', 'ಸಂತ' ಹಾಗೂ 'ಲವಕುಶಗಳು' ತೋಪಾಗಿವೆ. ವಿಷ್ಣುವರ್ಧನ್ 'ಏಕದಂತ', 'ಮಾತಾಡ್ ಮಾತಾಡು ಮಲ್ಲಿಗೆ', 'ಕ್ಷಣಕ್ಷಣ'ದಿಂದ ಸೋತಿದ್ದಾರೆ. ವರ್ಷ ಕೊನೆಯಲ್ಲಿ ಬಂದ 'ಈ ಬಂಧನ' ದ ಯಶಸ್ಸಿಗೆ ಕಾಯಬೇಕು. ಉಪೇಂದ್ರ ಸೋಲಿನ ಪಯಣಕ್ಕೆ 'ಪರೋಡಿ', 'ಮಸ್ತಿ', 'ಅನಾಥರು' ಹಾಗೂ 'ಲವಕುಶ' ಇನ್ನಷ್ಟು ಪೆಟ್ಟು ನೀಡಿವೆ. ದರ್ಶನ್‌ರ ಇಪ್ಪತ್ತೈದನೇ ಚಿತ್ರ 'ಭೂಪತಿ' ಕೈ ಕೊಟ್ಟಿತು. 26-27ರ ಸ್ಥಾನದಲ್ಲಿ ಬಂದ 'ಸ್ನೇಹಾನಾ ಪ್ರೀತೀನಾ' ಹಾಗೂ 'ಅನಾಥರು' ಅವರಿಗೆ ಗೆಲುವು ತಂದುಕೊಡಲಿಲ್ಲ. ಸುದೀಪ್ ನಿರ್ದೇಶಕರಾಗಿಯೂ ಫ್ಲಾಪ್. ನಟರಾಗೂ ಫ್ಲಾಪ್. ಅವರ ನಿರ್ದೇಶನದ 'ನಂ.73 ಶಾಂತಿ ನಿವಾಸ'ವನ್ನು ಜನ ಅಷ್ಟಾಗಿ ಇಷ್ಟಪಡಲಿಲ್ಲ. ಮಲ್ಲಿಗೆಯ ನಕ್ಸಲೈಟ್ ಪಾತ್ರ ಜನರಿಗೆ ಪಥ್ಯವಾಗಲಿಲ್ಲ. ಸಾಯಿಕುಮಾರ್ ತಾತಯ್ಯನವರಾದರೂ(ಕೈವಾರ ತಾತಯ್ಯ) ಗಿಟ್ಟಲಿಲ್ಲ. ಪೋಲೀಸ್ ಆದರೂ ತಟ್ಟಲಿಲ್ಲ. ನೆನಪಿರಲಿ ಪ್ರೇಮ್ ಸಹ ಮೂರು ಚಿತ್ರಗಳಲ್ಲಿ ಅಭಿನಯಿಸಿದರು. ಪಲ್ಲಕ್ಕಿ, ಗುಣವಂತ, ಸವಿಸವಿ ನೆನಪು ಇವುಯಾವುವೂ ನೆನಪಿನಲ್ಲಿ ಉಳಿಯಲಿಲ್ಲ.

ಮಿಕ್ಕಂತೆ ಬಹಳಷ್ಟು ಹೊಸಬರು ಈ ವರ್ಷ ಗುರುತಿಸಿಕೊಂಡರು. ಸೂರಿ(ದುನಿಯಾ), ಚೈತನ್ಯ(ಆ ದಿನಗಳು), ಶಶಾಂಕ್, ಶ್ರೀ ಮುಂತಾದ ನಿರ್ದೇಶಕರು ಗಮನ ಸೆಳೆದರು. ಪ್ರಜ್ವಲ್, ಪ್ರಶಾಂತ್, ಚೇತನ್‌ರಂಥ ಹೀರೋಗಳು ಪರವಾಗಿಲ್ಲ ಎನಿಸಿಕೊಂಡರು.

ನಾಯಕಿಯರ ಪೈಕಿ ಕನ್ನಡದ ಒಬ್ಬ ಗಟ್ಟಿ ನಾಯಕಿ ಈ ವರ್ಷ ಹೊರಬರಲಿಲ್ಲ. ರಮ್ಯ ಇರುವ ಚಿತ್ರಗಳನ್ನೆಲ್ಲಾ ತ್ಯಾಗ ಮಾಡಿದರು.ಸಂಜನಾ ಉರುಫ್ ಪೂಜಾ ಗಾಂಧಿ ಮಿಲನ, ಕೃಷ್ಣ, ಮನ್ಮಥ ಹೀಗೆ ಸಣ್ಣ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡರೂ ಬಹು ಚಾಲ್ತಿಯಲ್ಲಿರುವ ನಟಿ ಎನಿಸಿದರು. ಇದ್ದುದರಲ್ಲಿ ಸ್ವಲ್ಪ ವಾಸಿ ಎಂದರೆ ಶರ್ಮಿಳಾ ಹಾಗೂ ರಶ್ಮಿ. ಇಬ್ಬರಿಗೂ ಒಂದೆರಡು ಚಿತ್ರಗಳು ಸಿಕ್ಕಿವೆ. ಅದನ್ನೆಲ್ಲಾ ಅವರು ಮುಂದಿನ ದಿನಗಳಲ್ಲಿ ಹೇಗೆ ಬಳಸಿಕೊಳ್ಳುತ್ತಾರೋ ನೋಡಬೇಕು.

ಮಳೆಯಲ್ಲಿ ಕೊಚ್ಚಿಹೋದವರು

2007, ಇದು ಕನ್ನಡ ಚಿತ್ರರಂಗದ ಪಾಲಿಗೆ ಮಹತ್ತರ ವರ್ಷ ಎಂದು ಹೇಳಬಹುದು. ಈ ವರ್ಷ ಬಿಡುಗಡೆಯಾದ ಚಿತ್ರಗಳ ಸಂಖ್ಯೆ 97. ಒಂದು ಲೆಕ್ಕಾಚಾರದ ಪ್ರಕಾರ ಮುಹೂರ್ತವಾಗಿಸಿಕೊಂಡ ಚಿತ್ರಗಳ ಸಂಖ್ಯೆ 190. ಗೆದ್ದ ಚಿತ್ರಗಳ ಸಂಖ್ಯೆ ಶೇ.15. ಬಿಡುಗಡೆಯಾದ ಚಿತ್ರಗಳ ಮೇಲೆ ಹಾಕಲಾದ ಬಂಡವಾಳ 200ಕೋಟಿ! ಒಟ್ಟಾರೆ ಗಳಿಕೆ 120 ಕೊಟಿ ಅಂತ ಗಾಂಧಿನಗರದ ಸಂಖ್ಯಾಶಾಸ್ತ್ರ ಹೇಳುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಮುಂಗಾರು ಮಳೆಯೇನೋ ಚೆನ್ನಾಗಿ ಸುರಿದಿದೆ ಆದರೆ ದುನಿಯಾ ಸರಿಯಿಲ್ಲದ ಕಾರಣ ತೋಪಾದ ಚಿತ್ರಗಳ ಸಂಖ್ಯೆಯೇ ಹೆಚ್ಚು.

ಈ ವರ್ಷದ ಮುಖ್ಯ ಬದಲಾವಣೆ ಎಂದರೆ ಲಾಂಗು ಮಚ್ಚುಗಳಿಗಿಂತ ಪ್ರೇಮಕತೆ ಹಾಗೂ ಸಾಪ್ಟ್ ಚಿತ್ರಕತೆಗಳ ಕಡೆಗೆ ಚಿತ್ರರಂಗ ವಾಲಿದ್ದು. ದೊಡ್ಡ ಹೀರೋಗಳಿಗೆ ಲವ್‌ಸ್ಟೋರಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹೊಸಬರ ಮೊರೆಹೋಗುತ್ತಿದ್ದಾರೆ ಎಂಬುದು ಗಾಂಧಿನಗರದ ಹೊಸ ಸೂತ್ರ. ಹಾಗಾಗಿ ದುನಿಯಾ, ಆ ದಿನಗಳು, ಕೃಷ್ಣ, ಹುಡುಗಾಟ, ಚೆಲುವಿನ ಚಿತ್ತಾರ, ಸಿಕ್ಸರ್ ಚಿತ್ರಗಳು ಗೆದ್ದವು. ಇವುಗಳ ಜತೆಗೆ ಹಳಬರ ಅರಸು, ಮಿಲನ, ಸಂತ ಸಹ ಸೇರುತ್ತವೆ. ಪರವಾಗಿಲ್ಲ ಅನಿಸಿಕೊಂಡ ಚಿತ್ರಗಳೆಂದರೆ ಅನಾಥರು, ಸತ್ಯವಾನ್ ಸಾವಿತ್ರಿ, ಗೆಳೆಯ, ಪಲ್ಲಕ್ಕಿ, ಜಂಬದ ಹುಡುಗಿ, ಒರಟ ಐ ಲವ್ ಯೂ, ಗಣೇಶ. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಹೊಸ ಮುಖಗಳಿಂದ ಕಂಗೊಳಿಸುತ್ತಿದೆ. ಮುಂದಿನ ವರ್ಷವೂ ಹೊಸಬರಿಗೇ ಮೀಸಲಾಗಲಿದೆಯೇ? ಕಾದು ನೋಡಬೇಕು.

ತೆರೆಕಂಡ ಚಿತ್ರಗಳು:(ಕ್ರ.ಸಂ, ದಿನಾಂಕ, ಚಿತ್ರ)

1 5/1/2007 ಸಿಕ್ಸರ್

2 5/1/2007 ಹೊಸವರುಷ

3 12/1/2007 ರಾಜೀವ ಅಲ್ಲ ಗೋಡ್ಸೆ

4 12/1/2007 ತಾಯಿಯ ಮಡಿಲು

5 12/1/2007 ನಾಯಿ ನೆರಳು

6 19/1/2007 ಸ್ನೇಹ ಪರ್ವ

7 26/1/2007 ಅರಸು

8 26/1/2007 ಪೂಜಾರಿ

****************************************************

9 2/2/2007 ವಿದ್ಯಾರ್ಥಿ

10 9/2/2007 16 ಟು 60

11 9/2/2007 ತಂಗಿಯ ಮನೆ

12 9/2/2007 ಪೊಲೀಸ್ ಸ್ಟೋರಿ -2

13 16/2/2007 ಭೂಪತಿ

14 23/2/2007 ಎಸ್ ಎಂ ಎಸ್ 6260

15 23/2/2007 ದುನಿಯಾ

16 23/2/2007 ಸಜನಿ

*****************************************************

17 2/3//2007 ಪರೋಡಿ

18 9/3//2007 ವಿಐಪಿ 5

19 9/3//2007 ಶ್ರೀ ದಾನಮ್ಮ ದೇವಿ

20 16/3//2007 ಏಕದಂತ

21 16/3//2007 ಪ್ರೀತಿಗಾಗಿ

22 30/3//2007 ಒಂದು ಪ್ರೀತಿಯ ಕತೆ

23 30/3//2007 ರಕ್ಷಕ

24 30/3//2007 ಓ ಪ್ರೇಮ ದೇವತೆ

25 30/3//2007 ಅಪ್ಪ ಇಲ್ಲ

*******************************************************

26 6/4/2007 ಶ್ರೀ ಕ್ಷೇತ್ರ ಕೈವಾರ ತಾತಯ್ಯ

27 6/4/2007 ತಿಮ್ಮ

28 13/4/2007 ಈ ಪ್ರೀತಿ ಒಂಥರಾ

29 13/4/2007 ಲಂಚ ಸಾಮಾಜ್ಯ

30 13/4/2007 ಬಾನಾಮತಿ

31 13/4/2007 ಯಜ್ಞ ಕನ್ಯೆ

32 20/4/2007 ಸೌಂದರ್ಯ

33 20/4/2007 ಭಕ್ತ

34 20/4/2007 ದಾದಾಗಿರಿ

35 27/4/2007 ಜನಪದ

36 27/4/2007 ಭೂಗತ

********************************************************

37 4/5/007 ಮಸ್ತಿ

38 4/5/007 ಪಲ್ಲಕ್ಕಿ

39 4/5/007 ಮಸಣದ ಮಕ್ಕಳು

40 4/5/007 ಗೋವಿಂದ ಗೋಪಾಲ

41 11/5/2007 ದುಷ್ಮನ್

42 18/5/2007 ಅಮೃತವಾಣಿ

43 18/5/2007 ಸಂತ

44 25/5/2007 ರೋಮಾಂಚನ

45 1/6/ 2007 ಕ್ಷಣ ಕ್ಷಣ

46 8/6/ 2007 ಹುಡುಗಾಟ

47 8/6/ 2007 ರಾಜರಾಣಿ

48 15/6/ 2007 ನಂ. 73 ಶಾಂತಿನಿವಾಸ

49 15/6/ 2007 ಜಂಬದ ಹುಡುಗಿ

50 22/6/ 2007 ಚೆಲುವಿನ ಚಿತ್ತಾರ

51 22/6/ 2007 ಸತ್ಯ್ವವಾನ್ ಸಾವಿತ್ರಿ

52 29/6/ 2007 ಕಾಡ ಬೆಳದಿಂಗಳು

53 29/6/ 2007 ಬೊಂಗಲೂರು ಸಾರ್ ಬೊಂಗಲೂರ್

*********************************************************

54 6/7/2007 ಯುಗಾದಿ

55 6/7/2007 ತಮಾಷೆಗಾಗಿ

56 20/7/2007 ಸ್ನೇಹನಾ.. ಪ್ರೀತಿನಾ

57 27/7/2007 ಮೀರಾ ಮಾಧವ ರಾಘವ

********************************************************

58 3/8/2007 ಹನಿಮೂನ್ ಸೀಕ್ರೇಟ್ಸ್

59 10/8/2007 ಮನ್ಮ್ಮಥ

60 10/8/2007 ಸವಿ ಸವಿ ನೆನಪು

61 24/8/2007 ಮಾತಾಡ್ ಮಾತಾಡ್ ಮಲ್ಲಿಗೆ

62 24/8/2007 ಗಂಡನ ಮನೆ

63 31/8/2007 ನಿನದೇ ನೆನಪು

64 31/8/2007 ನಲಿ ನಲಿಯುತಾ

65 31/8/2007 ಜೀವನ ಧಾರೆ

********************************************************

66 14/9/2007 ಮಿಲನ

67 14/9/2007 ಅನಾಥರು

68 28/9/2007 ಗುಣ

69 28/9/2007 ರೋಡ್ ರೋಮಿಯೋ

70 28/9/2007 ಅಗ್ರಹಾರ

71 28/9/2007 ಯೌವನದ ಹೊಳೆಯಲ್ಲಿ

********************************************************

72 5/10/2007 ಕೃಷ್ಣ

73 5/10/2007 ಧೀಮಂತ ಮನುಷ್ಯ

74 12/10/2007 ಸರ್ಕಲ್ ರೌಡಿ

75 12/10/2007 ಶುಕ್ರ

76 19/10/2007 ಗೆಳೆಯ

77 19/10/2007 ಆ ದಿನಗಳು

78 19/10/2007 ಹುಣ್ಣಿಮೆಯ ಚೆಲುವೆ

79 19/10/2007 ಈ ಪ್ರೀತಿಗೆ ಥ್ಯಾಂಕ್ಸ್

80 26/10/2007 ಪುಟಾಣಿ ಫೋರ್ಸ್

*******************************************************

81 2/11/2007 ಹೇಳಲಾರೆ ನಾ ತಾಳಲಾರೆ ನಾ

82 2/11/2007 ಯುಗ

83 9/11/2007 ಸ್ನೇಹಾಂಜಲಿ

84 16/11/2007 ಗಣೇಶ

85 17/11/2007 ಚಂಡ

86 23/11/2007 ಒರಟ ಐ ಲವ್ ಯೂ

87 23/11/2007 ಹೆತ್ತರೇ ಹೆಣ್ಣನ್ನೇ ಹೆರಬೇಕು

88 30/11/2007 ಗುಣವಂತ

89 30/11/2007 ರೈಟ್ ಆದ್ರೆ

********************************************************

90 7/12/2007 ಅಪರೇಷನ್ ಅಂಕುಶ

91 7/12/2007 ಪ್ರೀತಿಯ ಹುಚ್ಚು

92 7/12/2007 ವಿರಹ ನೂರು ತರಹ

93 14/12/2007 ಲವಕುಶ

94 14/12/2007 ಅಪ್ಪಚ್ಚಿ

95 21/12/2007 ನಾನು ನೀನು ಜೋಡಿ

96 21/12/2007 ಈ ಬಂಧನ

97 28/12/2007 ಪ್ರೀತಿ ಏಕೆ ಭೂಮಿ ಮೇಲಿದೆ ?

(ದಟ್ಸ್‌ಕನ್ನಡ ಸಿನಿವಾರ್ತೆ)

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more