ಕನ್ನಡ ಚಿತ್ರರಂಗ-2003 : ಗಮನ ಸೆಳೆದ ಸಾಧಕರು !
- ದಟ್ಸ್‌ಕನ್ನಡ ಬ್ಯೂರೊ
- ವರನಟ ಡಾ.ರಾಜಕುಮಾರ್‌ಗೆ ಈಟೀವಿ-ಕನ್ನಡ ಪ್ರಶಸ್ತಿ-2003. ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಜರುಗಿದ ವರ್ಣರಂಜಿತ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಈ ಪ್ರಶಸ್ತಿ ಪ್ರದಾನ ಮಾಡಿದರು. ರಾಮೋಜಿರಾವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಯುವ ನಿರ್ದೇಶಕ ಬಿ.ಎಸ್.ಲಿಂಗದೇವರು ಅವರದ್ದು ಅಪರೂಪದ ಸಾಧನೆ. ಅವರ ನಿರ್ದೇಶನದ ಚೊಚ್ಚಿಲ ಚಿತ್ರ ಮೌನಿ (ಯು.ಆರ್.ಅನಂತಮೂರ್ತಿ ಕಥೆ) ಪನೋರಮಾಕ್ಕೆ ಪ್ರವೇಶ. ಮುಂಬಯಿ ಮತ್ತು ಕೋಲ್ಕತಾ ಚಲನಚಿತ್ರೋತ್ಸವಗಳಲ್ಲೂ ಮೌನಿ ಪ್ರದರ್ಶನ ಕಂಡಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಈ ಚಿತ್ರ ರಾಜ್ಯಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿರುವುದು ಚಿತ್ರರಸಿಕರ ಹುಬ್ಬೇರಿಸಿದೆ.
- ಗಿರೀಶ್ ಕಾಸರವಳ್ಳಿಯವರ ದ್ಪೀಪ ಮಾಸ್ಕೋ ಚಿತ್ರೋತ್ಸವದಲ್ಲಿ ಹಾಗೂ ಶ್ರೀನಿವಾಸಮೂರ್ತಿಯವರ ದೇವರ ಮಕ್ಕಳು ಹೈದರಾಬಾದ್‌ನಲ್ಲಿ ನಡೆದ ಮಕ್ಕಳ ಚಿತ್ರೋತ್ಸವದಲ್ಲಿ ಇದೇ ವರ್ಷ ಪ್ರದರ್ಶನಗೊಂಡವು.
- ನಾಗಾಭರಣ ಅವರಿಗೆ ಮಿಶ್ರಫಲ. ಅವರ ನಿರ್ದೇಶನದ ಸಿಂಗಾರವ್ವ ಅತ್ತುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದರೆ, ರಾಜ್ಯ ಪ್ರಶಸ್ತಿ ಪಡೆಯುವಲ್ಲಿ ಸಾಧ್ಯವಾಗಲಿಲ್ಲ . ಬಹು ನಿರೀಕ್ಷಿತ ಚಿಗುರಿದ ಕನಸು ಗಲ್ಲಾಪೆಟ್ಟಿಗೆಯಲ್ಲಿ ಸೋತಿತು.
- ಕನ್ನಡಿಗ ಪ್ರಕಾಶ್ ಬೆಳವಾಡಿ ನಿರ್ದೇಶನದ ಇಂಗ್ಲಿಷ್ ಚಿತ್ರ ಸ್ಟಂಬಲ್ ಕೂಡ ವಿಶೇಷ ಕೆಟಗರಿಯಲ್ಲಿ ರಾಷ್ಟ್ರಪ್ರಶಸ್ತಿ ಗಳಿಸುವ ಮೂಲಕ ಗಮನ ಸೆಳೆಯಿತು.
- ಈ ಪಟ್ಟಿಯಾಂದಿಗೆ ರಾಜ್ಯ ಪ್ರಶಸ್ತಿ ಪಡೆದು ಖುಷಿಯಾದವರ ಪಟ್ಟಿಯೂ ಇದೆ. ಆ ಪಟ್ಟಿ ದೊಡ್ಡದು.
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications