»   » 2003 : ಮೊದಲಿಗೆ ಅಮ್ಮ , ಕೊನೆಯಲ್ಲಿ ಆಚಾರ್ಯ

2003 : ಮೊದಲಿಗೆ ಅಮ್ಮ , ಕೊನೆಯಲ್ಲಿ ಆಚಾರ್ಯ

Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
2003ರಲ್ಲಿ ಅಗಲಿದವರ ಸಂಖ್ಯೆ ದೊಡ್ಡದು. ಕನ್ನಡ ಚಿತ್ರರಂಗದ ಅಮ್ಮ ಪಂಡರಿಬಾಯಿ ಅವರೊಂದಿಗೆ ಪ್ರಾರಂಭವಾದ ಸಾವಿನ ಸರಪಳಿ ಕೊನೆಗೊಂಡಿದ್ದು ಆಚಾರ್ಯ ಜಿ.ವಿ.ಅಯ್ಯರ್‌ ಅವನ ನಿಧನದೊಂದಿಗೆ.

ಸಿನಿಮಾ ಪತ್ರಕರ್ತ, ಮನೋಹರ ತೋಳಹುಣಸೆ ಅವರ ಸಾವು ಪತ್ರಿಕಾಸಮೂಹದಲ್ಲಿ ಮಾತ್ರವಲ್ಲದೆ ಸಿನಿಮಾರಂಗದಲ್ಲೂ ಸುದ್ದಿಯಾದದ್ದು ವಿಶೇಷ. ಇದೇ ಸಂದರ್ಭದಲ್ಲಿ ರೂಪುಗೊಂಡ ಸಿನಿಮಾ ಪತ್ರಕರ್ತರ ಒಕ್ಕೂಟ- ‘ಬಳಗ’ (ಅಧ್ಯಕ್ಷ -ಜೋಗಿ, ಉಪಾಧ್ಯಕ್ಷ- ಎಸ್ಕೆ.ಶಾಮಸುಂದರ), ನಿಧಿ ಸಂಗ್ರಹಿಸುವ ಮೂಲಕ ತೋಳಹುಣಸೆ ಕುಟುಂಬಕ್ಕೆ ನೆರವಾದದ್ದು ಜನಮೆಚ್ಚುಗೆ ಪಡೆದ ಕಾರ್ಯಕ್ರಮ.

ಭೌತಿಕವಾಗಿ ನಮ್ಮನ್ನಗಲಿದ ಸಿನಿ ಚೇತನಗಳು....

  • ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಕೊಳಲು ವಾದಕ ಗುಣಸಿಂಗ್‌.
  • ಕಿರುತೆರೆ ಹಾಗೂ ಬೆಳ್ಳಿತೆರೆ ನಟ ವೆಂಕಿ.
  • ಹಿರಿಯ ನಿರ್ಮಾಪಕ ವಿಕ್ರಂ ಶ್ರೀನಿವಾಸ್‌.
  • ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ವಿಜೇತ ನಿರ್ದೇಶಕ ವಿ.ಸೋಮಶೇಖರ್‌.
  • ಕಲಾವಿದೆ ಮಹಾಲಕ್ಷ್ಮಿ.
  • ಹಿರಿಯ ನಿರ್ದೇಶಕ ಎಸ್‌.ಕೆ.ಚಾರಿ.
  • ನಿರ್ದೇಶಕ ಬಸವರಾಜ್‌ ಕೆಸ್ತೂರ್‌.
Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada