»   » ಕನ್ನಡಸಿನಿಮಾ ಹಾಗೂ ರಂಗಭೂಮಿ ಕಲಾವಿದೆ ವಿಜಯಕಲಾ ನಿಧನ

ಕನ್ನಡಸಿನಿಮಾ ಹಾಗೂ ರಂಗಭೂಮಿ ಕಲಾವಿದೆ ವಿಜಯಕಲಾ ನಿಧನ

Posted By: Super
Subscribe to Filmibeat Kannada

ಬೆಂಗಳೂರು : ಕನ್ನಡ ಸಿನಿಮಾ ಹಾಗೂ ರಂಗಭೂಮಿ ನಟಿ ವಿಜಯಕಲಾ ಡಿಸೆಂಬರ್‌ 30ರ ರಾತ್ರಿ ಉಸಿರಾಟದ ತೊಂದರೆಯಿಂದ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು .

ಉತ್ತರ ಕರ್ನಾಟಕದ ನಾಟಕ ಕಂಪನಿಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ವಿಜಯಕಲಾ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 80ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ಅವರು ಅಭಿನಯಿಸಿದ ಚಿತ್ರಗಳಲ್ಲಿ - ಹೊಯ್ಸಳ, ಯಾರು ಹಿತವರು, ಗೃಹಿಣಿ, ತಂದೆ ಮಕ್ಕಳು, ಮಹಾ ತಪಸ್ವಿ ಸೇರಿವೆ.

ನಿರ್ಮಾಣ ಹಾಗೂ ನಿರ್ದೇಶನದಲ್ಲೂ ತೊಡಗಿದ್ದ ವಿಜಯಕಲಾ, ಪ್ರೇಮ ಮಂದಿರ ಹಾಗೂ ಡೈಮಂಡ್‌ ಸೀಕ್ರೆಟ್‌ ಎನ್ನುವ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು.

(ಇನ್ಫೋ ವಾರ್ತೆ)

English summary
Actress Vijaya Kala dead

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada