For Quick Alerts
  ALLOW NOTIFICATIONS  
  For Daily Alerts

  ವಿಷ ಕುಡಿಯುತ್ತೇನೆ ಅಂತ ಜಗ್ಗೇಶ್ ಗೆ ಪತ್ರ ಬರೆದಿದ್ದ ಪತ್ನಿ ಪರಿಮಳಾ.!

  By Harshitha
  |

  ಹೀರೋ-ಹೀರೋಯಿನ್ ಕದ್ದು ಮುಚ್ಚಿ ಪ್ರೀತಿ ಮಾಡುವುದು, ಅದು ತಂದೆ-ತಾಯಿಗೆ ಗೊತ್ತಾದಾಗ ದೊಡ್ಡ ತಾಪತ್ರಯ, ಹೀರೋಯಿನ್ ನ ಮನೆಯಲ್ಲಿ ಕೂಡಿ ಹಾಕುವುದು, ಹೀರೋಗೆ ವಿಷಯ ಮುಟ್ಟಿಸಲು ಹೀರೋಯಿನ್ ಲೆಟರ್ ಬರೆಯುವುದು.....

  ಪ್ರೀತಿ ಸಕ್ಸಸ್ ಆಗಲ್ಲ ಅನ್ನೋ ಟೆನ್ಷನ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುವುದು...ಹೀಗೆ ಕ್ಷಣ ಕ್ಷಣಕ್ಕೂ ಗೊಂದಲ, ವಿರಹ, ಕಾತರ....ಎಲ್ಲಾ ಮಿಕ್ಸ್ ಆಗಿರುವ ಭಾವನೆಗಳಿರುವ ಅನೇಕ ಲವ್ ಸ್ಟೋರಿಗಳನ್ನ ನೀವು ಹಲವು ಸಿನಿಮಾಗಳಲ್ಲಿ ನೋಡಿರಬಹುದು. [ಜಗ್ಗೇಶ್'ರ ನಡೆ ಅವರ ಬಂಧುಗಳಿಗೆ ಹೇಸಿಗೆ ಉಂಟುಮಾಡಿತ್ತಂತೆ]

  ಆ ಎಲ್ಲಾ ಸಿನಿಮಾಗಳ ತಲೆ ಮೇಲೆ ಹೊಡೆದ ಹಾಗಿದೆ 'ನವರಸ ನಾಯಕ' ಜಗ್ಗೇಶ್ ರವರ ಲವ್ ಸ್ಟೋರಿ. [ತಮ್ಮ 'ರಿಯಲ್ ಲವ್ ಸ್ಟೋರಿ' ಬಯಲು ಮಾಡಿದ ನಟ ಜಗ್ಗೇಶ್!]

  ಆಗಿನ್ನೂ 9 ನೇ ಕ್ಲಾಸ್ ನಲ್ಲಿ ಓದುತ್ತಿದ್ದ ಪರಿಮಳಾ ರವರನ್ನ ಪ್ರೀತಿಸಿ ಮದುವೆ ಆಗಲು ಜಗ್ಗೇಶ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಮುಂದೆ ಓದಿ....

  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಜಗ್ಗೇಶ್

  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಜಗ್ಗೇಶ್

  ನಟ ಜಗ್ಗೇಶ್ ಇಂದು ತಮ್ಮ 32ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

  ಜಗ್ಗೇಶ್ ಟ್ವೀಟ್ ಗಳು...

  ಜಗ್ಗೇಶ್ ಟ್ವೀಟ್ ಗಳು...

  ತಮ್ಮ 32ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ತಮ್ಮ ಲವ್ ಸ್ಟೋರಿ, ತಮಗೆ ಪತ್ನಿ ಪರಿಮಳಾ ಬರೆದ ಪತ್ರಗಳನ್ನ ಟ್ವಿಟ್ಟರ್ ನಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ. ಅದನ್ನೆಲ್ಲಾ ಒಂದೊಂದೇ ನೋಡಿ ಮುಂದಿನ ಸ್ಲೈಡ್ ಗಳಲ್ಲಿ....

  ವಿಷ ಕುಡಿಯುತ್ತೇನೆ ಎಂದಿದ್ದ ಪರಿಮಳಾ

  ಜಗ್ಗೇಶ್ (ಈಶ್ವರ್) - ಪರಿಮಳಾ ಪ್ರೀತಿ-ಪ್ರಣಯ, ಪರಿಮಳಾ ರವರ ತಂದೆ-ತಾಯಿಗೆ ಗೊತ್ತಾದಾಗ, 'ಬೇರೆ ದಾರಿ ಇಲ್ಲದೆ ವಿಷ ಕುಡಿಯುತ್ತೇನೆ' ಅಂತ ಜಗ್ಗೇಶ್ ಗೆ ಪರಿಮಳಾ ಗಾಬರಿಯಿಂದ ಬರೆದಿರುವ ಪತ್ರ ಇದು.

  ವಿರೋಧದ ನಡುವೆ ಮದುವೆ

  ವಿರೋಧದ ನಡುವೆ ಮದುವೆ

  ಮನೆಯವರ ವಿರೋಧದ ನಡುವೆ ನಟ ಜಗ್ಗೇಶ್, ಪರಿಮಳಾ ರವರನ್ನ ಸಂಪಂಗಿರಾಮನಗರದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ 22/3/1984 ರಂದು ಬೆಳಗ್ಗೆ 10.30ಕ್ಕೆ ಮದುವೆ ಆದರು.

  ಮದುವೆಗೆ ಬಂದಿದ್ದು ಕೇವಲ ನಾಲ್ಕೇ ಜನ

  ಮದುವೆಗೆ ಬಂದಿದ್ದು ಕೇವಲ ನಾಲ್ಕೇ ಜನ

  ಜಗ್ಗೇಶ್-ಪರಿಮಳಾ ಮದುವೆಗೆ ಹರಸಲು ಆಗಮಿಸಿದ್ದು ಕೇವಲ ನಾಲ್ಕು ಮಂದಿ ಅಷ್ಟೆ.

  ಜ್ಯೋತಿಷ್ಯದಲ್ಲಿ ನಂಬಿಕೆ

  ಜ್ಯೋತಿಷ್ಯದಲ್ಲಿ ನಂಬಿಕೆ

  ಪರಿಮಳಾ ರವರನ್ನ ಕೈಹಿಡಿಯಲು ಈಶ್ವರ್ ಅನ್ನೋ ಹೆಸರು ಸೂಕ್ತ ಅಲ್ಲ ಅಂತ ಕಂಡುಕೊಂಡಿದ್ದ ಜಗ್ಗೇಶ್, ತಮ್ಮ ಹೆಸರು ಬದಲಾವಣೆ ಮಾಡುವ ಬಗ್ಗೆ ಪರಿಮಳಾ ರವರಿಗೆ ಬರೆದ ಪತ್ರ ಇದು.

  ಜಗ್ಗೇಶ್ ಹೆಸರು ಸೂಕ್ತ

  ಜಗ್ಗೇಶ್ ಹೆಸರು ಸೂಕ್ತ

  ಪರಿಮಳಾ ರವರನ್ನ ಮದುವೆ ಆಗಲು ಜಗ್ಗೇಶ್ ಸಂಖ್ಯಾಶಾಸ್ತ್ರದ ಮೊರೆ ಹೋಗಿದ್ದರು ಅನ್ನೋದಕ್ಕೆ ಈ ಪತ್ರ ಸಾಕ್ಷಿ.

  ಜಗ್ಗೇಶ್ ಅಂತಲೇ ಕರೆಯಬೇಕು

  ಜಗ್ಗೇಶ್ ಅಂತಲೇ ಕರೆಯಬೇಕು

  ಅಷ್ಟಕ್ಕೂ ಜಗ್ಗೇಶ್ ಅನ್ನೋದು ಅವರ ನಿಜನಾಮವೇ. ಈಶ್ವರ್ ಸ್ಕೂಲ್ ನೇಮ್ ಮಾತ್ರ. ಪರಿಮಳಾಗೆ ಜಗ್ಗೇಶ್ ಹೆಸರು ಹೊಂದಾಣಿಕೆ ಆಗುವುದರಿಂದ 'ಇನ್ಮುಂದೆ ಜಗ್ಗೇಶ್ ಅಂತಲೇ ಕರೆಯಬೇಕು' ಅಂತ ಪತ್ರದಲ್ಲಿ ಜಗ್ಗೇಶ್ ಉಲ್ಲೇಖಿಸಿದ್ದಾರೆ.

  200 ವರ್ಷದ ಹಿಂದಿನ ಪುಸ್ತಕ

  200 ವರ್ಷದ ಹಿಂದಿನ ಪುಸ್ತಕ

  ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳಲು ಆಂಗ್ಲ ಭಾಷೆಯಲ್ಲಿರುವ ಇನ್ನೂರು ವರ್ಷಗಳ ಹಿಂದಿನ ಪುಸ್ತಕವನ್ನ ರೆಫರ್ ಮಾಡಿದ್ರಂತೆ ನಟ ಜಗ್ಗೇಶ್.

  ಶಾಲೆಯಲ್ಲೂ ಕೂತು ಲವ್ ಲೆಟರ್ ಬರೆಯುತ್ತಿದ್ರಂತೆ!

  ಬೆಂಗಳೂರಿನ ಮಲ್ಲೇಶ್ವರದ ಕ್ಲೂನಿ ಕಾನ್ವೆಂಟ್ ನಲ್ಲಿ ಓದುತ್ತಿದ್ದ ಪರಿಮಳಾ, ಶಾಲೆಯಲ್ಲೇ ಕೂತು ಜಗ್ಗೇಶ್ ಗಾಗಿ ಲವ್ ಲೆಟರ್ ಬರೆಯುತ್ತಿದ್ದರು.

  ಇಬ್ಬರ ಮದುವೆ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು!

  ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಆದ ಜಗ್ಗೇಶ್-ಪರಿಮಳಾ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಅಂದು ಪ್ರಕಟವಾದ ವರದಿಯನ್ನ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  ನೂರು ಕಾಲ ಹೀಗೆ ಬಾಳಿ...

  ನೂರು ಕಾಲ ಹೀಗೆ ಬಾಳಿ...

  ಜಗ್ಗೇಶ್-ಪರಿಮಳಾ ಅಂದು ಹಂಚಿಕೊಂಡ ಪ್ರೇಮ ಪತ್ರಗಳನ್ನ ನೋಡಿದ್ರೆ, ಇಬ್ಬರದ್ದು ಪವಿತ್ರ ಪ್ರೀತಿ ಅನ್ನುವುದರಲ್ಲಿ ಎರಡು ಮಾತಿಲ್ಲ. ಅಂದಿನಿಂದ ಇಂದಿನವರೆಗೂ ಅನೇಕ ಕಷ್ಟಗಳನ್ನ ಎದುರಿಸಿರುವ ಈ ಜೋಡಿ ಹೀಗೆ ಒಂದಾಗಿ ನೂರು ಕಾಲ ಬಾಳಲಿ ಅನ್ನೋದು ನಮ್ಮ ಆಶಯ.

  English summary
  On the occasion of 32nd Marriage Anniversary, Kannada Actor Jaggesh has taken his twitter account to reveal his love letters that was shared between him and his wife Parimala before marriage. Check out the tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X