'ಆನಂದ್' ಚಿತ್ರಕ್ಕೆ 33 ವರ್ಷ : ಶಿವಣ್ಣ, ಸುಧಾರಾಣಿಯ ಸಂಭ್ರಮದ ದಿನ
Recommended Video
ನಟ ಶಿವರಾಜ್ ಕುಮಾರ್ ಇಂದು ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಆಗಿದ್ದಾರೆ. ಇದೇ ದಿನ 33 ವರ್ಷಗಳ ಹಿಂದೆ ಅವರು ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದರು.
'ಕನ್ನಡ ಚಿತ್ರರಂಗಕ್ಕೊಂದು ಕೊಡುಗೆ ಶಿವರಾಜ್ ಕುಮಾರ್', 'ಇನ್ನೊಂದು ಕೊಡುಗೆ ಸುಧಾರಾಣಿ' ಎನ್ನುವ ಟೈಟಲ್ ಕಾರ್ಡ್ ಸಿನಿಮಾದಲ್ಲಿ ಇತ್ತು. ಇದರ ಮೂಲಕ ಕನ್ನಡಿಗರಿಗೆ ಈ ಪ್ರತಿಭಾವಂತ ನಟ, ನಟಿ ಪರಿಚಯ ಆದರು.
'ಆನಂದ್' ಶಿವರಾಜ್ ಕುಮಾರ್ ಲಾಂಚ್ ಆದ ಸಿನಿಮಾ. ಈ ಮೊದಲ ಸಿನಿಮಾನೇ ಸೂಪರ್ ಹಿಟ್ ಆಯಿತು. ಸಂಗೀತಂ ಶ್ರೀನಿವಾಸ ರಾವ್ ಸಿನಿಮಾದ ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಅವರೇ ಬಂಡವಾಳ ಹಾಕಿದ್ದರು. ಈ ಸಿನಿಮಾಗೆ ಮುಂಚೆ ಸುಧಾರಾಣಿ ಬಾಲನಟಿಯಾಗಿದ್ದರು.

ಶಂಕರ್ ಗಣೇಶ್ ಸಂಗೀತ ಹಾಗೂ ಚಿ ಉದಯ ಶಂಕರ್ ಹಾಡುಗಳು ಸಿನಿಮಾದ ಗೆಲುವಿನಲ್ಲಿ ಪ್ರಮುಖ ಕಾರಣ ಆಗಿದ್ದವು. ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿದೆ. ಅದರಲ್ಲಿಯೂ 'ಟುವ್ವಿ ಟುವ್ವಿ..' ಆ ಕಾಲಕ್ಕೆ ದೊಡ್ಡ ಟ್ರೆಂಡ್ ಹುಟ್ಟುಹಾಕಿತ್ತು.
ಸಿನಿಮಾದ ನಟನೆಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನು ಜಯಂತಿ ಪಡೆದರು. ಅತ್ಯುತ್ತಮ ಚಿತ್ರಕತೆಗೂ ರಾಜ್ಯ ಪ್ರಶಸ್ತಿ ಸಿಕ್ಕಿದೆ.
'ಆನಂದ್' ಸಿನಿಮಾ ದಿಂದ ಶುರುವಾದ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಸಿನಿ ಕೆರಿಯರ್ ಇಂದಿಗೂ ಮುಂದುವರೆದಿದೆ.


Click it and Unblock the Notifications











