twitter
    For Quick Alerts
    ALLOW NOTIFICATIONS  
    For Daily Alerts

    'ಆನಂದ್' ಚಿತ್ರಕ್ಕೆ 33 ವರ್ಷ : ಶಿವಣ್ಣ, ಸುಧಾರಾಣಿಯ ಸಂಭ್ರಮದ ದಿನ

    |

    Recommended Video

    ಶಿವರಾಜ್ ಕುಮಾರ್ ಹಾಗು ಸುಧಾರಾಣಿ ಜೋಡಿಯ ಆನಂದ್ ಸಿನಿಮಾಗೆ 33 ವರ್ಷ | FILMIBEAT KANNADA

    ನಟ ಶಿವರಾಜ್ ಕುಮಾರ್ ಇಂದು ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಆಗಿದ್ದಾರೆ. ಇದೇ ದಿನ 33 ವರ್ಷಗಳ ಹಿಂದೆ ಅವರು ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದರು.

    'ಕನ್ನಡ ಚಿತ್ರರಂಗಕ್ಕೊಂದು ಕೊಡುಗೆ ಶಿವರಾಜ್ ಕುಮಾರ್', 'ಇನ್ನೊಂದು ಕೊಡುಗೆ ಸುಧಾರಾಣಿ' ಎನ್ನುವ ಟೈಟಲ್ ಕಾರ್ಡ್ ಸಿನಿಮಾದಲ್ಲಿ ಇತ್ತು. ಇದರ ಮೂಲಕ ಕನ್ನಡಿಗರಿಗೆ ಈ ಪ್ರತಿಭಾವಂತ ನಟ, ನಟಿ ಪರಿಚಯ ಆದರು.

    ಶಿವಣ್ಣನ ಮೊದಲ ಚಿತ್ರ 'ಆನಂದ್' ಶೂಟಿಂಗ್ ಅನುಭವ ಹೇಗಿತ್ತು ಗೊತ್ತಾ? ಶಿವಣ್ಣನ ಮೊದಲ ಚಿತ್ರ 'ಆನಂದ್' ಶೂಟಿಂಗ್ ಅನುಭವ ಹೇಗಿತ್ತು ಗೊತ್ತಾ?

    'ಆನಂದ್' ಶಿವರಾಜ್ ಕುಮಾರ್ ಲಾಂಚ್ ಆದ ಸಿನಿಮಾ. ಈ ಮೊದಲ ಸಿನಿಮಾನೇ ಸೂಪರ್ ಹಿಟ್ ಆಯಿತು. ಸಂಗೀತಂ ಶ್ರೀನಿವಾಸ ರಾವ್ ಸಿನಿಮಾದ ನಿರ್ದೇಶನ ಮಾಡಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಅವರೇ ಬಂಡವಾಳ ಹಾಕಿದ್ದರು. ಈ ಸಿನಿಮಾಗೆ ಮುಂಚೆ ಸುಧಾರಾಣಿ ಬಾಲನಟಿಯಾಗಿದ್ದರು.

    33 years anand kannada movie

    ಶಂಕರ್ ಗಣೇಶ್ ಸಂಗೀತ ಹಾಗೂ ಚಿ ಉದಯ ಶಂಕರ್ ಹಾಡುಗಳು ಸಿನಿಮಾದ ಗೆಲುವಿನಲ್ಲಿ ಪ್ರಮುಖ ಕಾರಣ ಆಗಿದ್ದವು. ಚಿತ್ರದ ಎಲ್ಲ ಹಾಡುಗಳು ಹಿಟ್ ಆಗಿದೆ. ಅದರಲ್ಲಿಯೂ 'ಟುವ್ವಿ ಟುವ್ವಿ..' ಆ ಕಾಲಕ್ಕೆ ದೊಡ್ಡ ಟ್ರೆಂಡ್ ಹುಟ್ಟುಹಾಕಿತ್ತು.

    ಸಿನಿಮಾದ ನಟನೆಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನು ಜಯಂತಿ ಪಡೆದರು. ಅತ್ಯುತ್ತಮ ಚಿತ್ರಕತೆಗೂ ರಾಜ್ಯ ಪ್ರಶಸ್ತಿ ಸಿಕ್ಕಿದೆ.

    ಶಿವರಾಜ್ ಕುಮಾರ್ 'ಎ ಕೆ 47' ಸಿನಿಮಾಗೆ 20 ವರ್ಷ ಶಿವರಾಜ್ ಕುಮಾರ್ 'ಎ ಕೆ 47' ಸಿನಿಮಾಗೆ 20 ವರ್ಷ

    'ಆನಂದ್' ಸಿನಿಮಾ ದಿಂದ ಶುರುವಾದ ಶಿವರಾಜ್ ಕುಮಾರ್ ಹಾಗೂ ಸುಧಾರಾಣಿ ಸಿನಿ ಕೆರಿಯರ್ ಇಂದಿಗೂ ಮುಂದುವರೆದಿದೆ.

    English summary
    33 years 'Anand' kannada movie. Shivaraj Kumar and Sudharani are launched from this movie. 'Anand' is directed by Singeetham Srinivasa Rao.
    Wednesday, June 19, 2019, 12:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X