For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 7ರಂದು '3ರ್ಡ್ ಕ್ಲಾಸ್' ಪ್ರೇಮಕಥೆ ಬಿಡುಗಡೆ

  |

  ಫೆಬ್ರವರಿ 7 ರಂದು ಮೂರ್ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಇದರಲ್ಲಿ '3ರ್ಡ್ ಕ್ಲಾಸ್' ಚಿತ್ರ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಪಕ್ಕಾ ಕಮರ್ಷಿಯಲ್ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಈ ಚಿತ್ರ ಪ್ರಚಾರದ ಹಂತದಲ್ಲೇ ಭಾರಿ ಸದ್ದು ಮಾಡಿದೆ.

  ಸಿನಿಮಾದ ಹೆಸರು ಸ್ವಲ್ಪ ವಿಭಿನ್ನವಾಗಿದೆ. ಶೀರ್ಷಿಕೆ '3ರ್ಡ್ ಕ್ಲಾಸ್' ಅಂತ ಇದ್ದರೂ ಸಿನಿಮಾ ಮಾತ್ರ ಬಹಳ ಹೈ-ಫೈ ಆಗಿ ಮೂಡಿ ಬಂದಿದೆ ಎಂಬ ಭರವಸೆ ವ್ಯಕ್ತಪಡಿಸಿದೆ ಚಿತ್ರತಂಡ. ಅದಕ್ಕೆ ತಕ್ಕಂತೆ ಟ್ರೈಲರ್ ಹಾಡುಗಳು ಮೋಡಿ ಮಾಡಿದೆ.

  ಕಮರ್ಷಿಯಲ್ ಆಗಿ ಎಲ್ಲ ಅಂಶಗಳ ಕಡೆಯೂ ಗಮನ ಕೊಟ್ಟಿರುವ ಚಿತ್ರತಂಡ ತಂದೆ ಮತ್ತು ಮಗಳ ನಡುವಿನ ಅಸಾಧಾರಣ ಬಂದವನ್ನು ವರ್ಣಿಸಿದೆ. ಮ್ಯೂಸಿಕಲಿ ಹಾಡುಗಳು ಇಂಪಾಗಿದೆ. ಕಾಮಿಡಿ ಕಿಕ್ ಗೆ ಕೊರತೆ ಇಲ್ಲ. ಲವ್ ಜೊತೆ ಸ್ನೇಹ ಸಂಬಂಧ ಬಗ್ಗೆಯೂ ತೋರಿಸಲಾಗಿದೆ. ರೆಗ್ಯುಲರ್ ಕಮರ್ಷಿಯಲ್ ಚಿತ್ರಗಳಂತೆ ಎಲ್ಲ ರೀತಿಯಲ್ಲೂ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದೆ.

  ಅಂದ್ಹಾಗೆ, ಜಗದೀಶ್ ಈ ಚಿತ್ರದ ನಾಯಕನಾಗಿದ್ದು, ರೂಪಿಕಾ, ದಿವ್ಯಾ ರಾವ್, ಅವಿನಾಶ್ ಮತ್ತು ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಇನ್ನು ಸಿನಿಮಾ ಮಾಡಿ, ಲಾಭ ಮಾಡಿದ್ರೆ ಸಾಕು ಎನ್ನುವ ಕೆಲವರ ಮಧ್ಯೆ '3ರ್ಡ್ ಕ್ಲಾಸ್' ಚಿತ್ರತಂಡ ಸಮಾಜಮುಖಿ ಕೆಲಸಗಳ ಮೂಲಕ ವಿಶೇಷ ಸ್ಥಾನ ಪಡೆದುಕೊಂಡಿದೆ. ಪ್ರಚಾರಕ್ಕೆ ದುಡ್ಡು ಹಾಕುವ ಹಣದಿಂದ ಒಂದೊಳ್ಳೆಯ ಕೆಲಸಗಳನ್ನು ಮಾಡೋಣ ಎಂದು ನಿರ್ಧರಿಸಿ ಹಲವು ಉಪಯುಕ್ತ ಕೆಲಸಗಳನ್ನು ಮಾಡಿದೆ ಚಿತ್ರತಂಡ. 30 ಜಿಲ್ಲೆಗಳಲ್ಲೂ ರೋಡ್ ಶೋ ಮಾಡಿ, ಪ್ರೆಸ್ ಮೀಟ್ ಮಾಡಿ ಪ್ರಚಾರ ಮಾಡಲಾಗಿದೆ.

  3rd Class Movie Releasing On February 7th

  ಈ ಹಿಂದೆ ಚಿತ್ರದ ಆಡಿಯೋ ಬಿಡುಗಡೆ ಮಾಡಿದಾಗ 200 ಅಂದ ಹಾಗೂ ಅನಾಥ ಮಕ್ಕಳಿಗೆ ಸುಮಾರು Rs.2,50,000/- ಮೊತ್ತದ ಜೀವ ಹಾಗೂ ಆರೋಗ್ಯದ ವಿಮೆ ಮಾಡಿಕೊಡಲಾಗಿದೆ. ಬಾಗಲಕೋಟೆಯ ಕರ್ಲುಕೊಪ್ಪ ಗ್ರಾಮವನ್ನು ದತ್ತು ಪಡೆದು ಇಡೀ ಚಿತ್ರತಂಡ ಹಳ್ಳಿಯ ಪುನರ್ ವಸತಿ ಕಲ್ಪಿಸುವ ಕೆಲಸ ಮಾಡಿತ್ತು. ಇನ್ನು ಚಾಲಕರಿಗ ತಲಾ 1 ಲಕ್ಷದ ವಿಮೆಯನ್ನು ಸರಿ ಸುಮಾರು 50,000 ಕ್ಕೂ ಅಧಿಕ (ಕರ್ನಾಟಕ ರಾಜ್ಯಾದ್ಯಂತ) ಆಟೋ ಹಾಗೂ ಕ್ಯಾಬ್ ಚಾಲಕರಿಗೆ ವಿಮೆ ಮಾಡಿಸುವುದಾಗಿ ದಿಟ್ಟ ನಿರ್ಧಾರವನ್ನು ಕೈಗೊಂಡಿದೆ. ಈ ಕಾರ್ಯ ಪ್ರಗತಿಯಲ್ಲಿದೆ.

  7 ಹಿಲ್ಸ್ ಸ್ಟುಡಿಯೋ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಿದ್ದು, ಅಶೋಕ್ ದೇವ್ ನಿರ್ದೇಶಿಸಿದ್ದಾರೆ. ಜೆಸ್ಸಿ ಗಿಫ್ಟ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಬಿ ಕೆ ಶಾಮ್ ರಾಜ್ ಛಾಯಾಗ್ರಹಣ ಮತ್ತು ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

  English summary
  Kannada actor Jagadeesh, Roopika, Divya Rao, Avinash, Ramesh Bhat starring 3rd Class movie releasing on February 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X