»   » 27, 28ಕ್ಕೆ ಅಂತರರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್

27, 28ಕ್ಕೆ ಅಂತರರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್

Written By:
Subscribe to Filmibeat Kannada

'3ನೇ ಅಂತರರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಬೆಂಗಳೂರು' (ISFFB) ಜನವರಿ 27 ಮತ್ತು 28 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಿರು ಚಿತ್ರಗಳ ಪ್ರದರ್ಶನ ದಿನಾಂಕ 27 ಮತ್ತು 28 ರಂದು ನಡೆಯಲಿದ್ದು, 28 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ.


'3ನೇ ಅಂತರರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಬೆಂಗಳೂರು' (ISFFB) ನಲ್ಲಿ 3 ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು. ಮೊದಲನೇ ಬಹುಮಾನಕ್ಕೆ ಆಯ್ಕೆಗೊಂಡ ಅತ್ಯುತ್ತಮ ಕಿರುಚಿತ್ರಕ್ಕೆ ರೂ.20,000, ಎರಡನೇ ಅತ್ಯುತ್ತಮ ಕಿರುಚಿತ್ರಕ್ಕೆ ರೂ.15,000, ಮೂರನೇ ಅತ್ಯುತ್ತಮ ಕಿರುಚಿತ್ರಕ್ಕೆ ರೂ.10,000 ಪ್ರಶಸ್ತಿ ಲಭಿಸಲಿದೆ.

short film festival


ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಕಿರುಚಿತ್ರ ಛಾಯಾಗ್ರಾಹಕ, ಅತ್ಯುತ್ತಮ ಸಂಕಲನಕಾರ, ಅತ್ಯುತ್ತಮ ಸೈಲೆಂಟ್ ಫಿಲ್ಮ್ ಎಂಬಿತ್ಯಾದಿ ಪ್ರಶಸ್ತಿಗಳನ್ನು ನೀಡಲಾಗುವುದು.


'3ನೇ ಅಂತರರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಬೆಂಗಳೂರು' (ISFFB) ನಡೆಯುವ ಸ್ಥಳ #444/13, ಗ್ರೌಂಡ್ ಫ್ಲೋರ್, ತ್ರಿವೇಣಿ ಮುಖ್ಯ ರಸ್ತೆ, ಯಶವಂತಪುರ, ಬೆಂಗಳೂರು-560022.

ಹೆಚ್ಚಿನ ಮಾಹಿತಿಗಾಗಿ : www.isffh.com

English summary
3rd International Short Film Festival Bangalore (ISFFB)-2017, Karnataka (India) has held on january 27 and 28.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada