For Quick Alerts
  ALLOW NOTIFICATIONS  
  For Daily Alerts

  ಯಶ್ ಮನೆಯಲ್ಲಿ ಜನವರಿ ತಿಂಗಳು ಸಂಭ್ರಮವೋ ಸಂಭ್ರಮ

  By Bharath Kumar
  |
  ಯಶ್ ಮನೆಯಲ್ಲಿ ಜನವರಿ ತಿಂಗಳು ಸಂಭ್ರಮವೋ ಸಂಭ್ರಮ | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಗೆ ಜನವರಿ ತಿಂಗಳು ತುಂಬಾನೇ ವಿಶೇಷ. ಯಾಕಂದ್ರೆ, ಆ ತಿಂಗಳಲ್ಲಿ ಮಾಸ್ಟರ್ ಪೀಸ್ ಹುಟ್ಟುಹಬ್ಬ. ಜನವರಿ 8 ರಂದು ಯಶ್ ಬರ್ತಡೇ ಸಂಭ್ರಮವನ್ನ ಅವರ ಕುಟುಂಬದವರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಾರೆ.

  ನಿಮಗೆ ಗೊತ್ತಿಲ್ಲದ ವಿಷ್ಯ ಏನಪ್ಪಾ ಅಂದ್ರೆ, ಜನವರಿ 8ನೇ ತಾರೀಖು ಮಾತ್ರವಲ್ಲ, ಜನವರಿ ತಿಂಗಳು ಪೂರ್ತಿ ಒಂದು ರೀತಿಯಲ್ಲಿ ಯಶ್ ಕುಟುಂಬಕ್ಕೆ ವಿಶೇಷವೇ ಸರಿ. ಹೌದು, ಯಶ್ ಹುಟ್ಟುಹಬ್ಬ ಆಚರಿಸಿಕೊಂಡ, ಎರಡು ದಿನದ ನಂತರ ಅವರ ತಂದೆಯ ಜನುಮದಿನ.

  ಅಂದ್ರೆ, ಜನವರಿ 10 ರಂದು ಯಶ್ ಅವರ ಅಪ್ಪನ ಹುಟ್ಟುಹಬ್ಬ. ಈ ಸಂಭ್ರಮವನ್ನ ಕೂಡ ಕುಟುಂಬವೆಲ್ಲ ಸೇರಿ ಸಂಭ್ರಮಿಸಿದ್ದಾರೆ. ಇತ್ತೀಚೆಗಷ್ಟೇ ಈ ಫೋಟೋ ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

  ರಾಕಿಂಗ್ ಸ್ಟಾರ್ ಭಯ ಪಡೋದು ಈ ಒಬ್ಬ ವ್ಯಕ್ತಿಗೆ ಮಾತ್ರರಾಕಿಂಗ್ ಸ್ಟಾರ್ ಭಯ ಪಡೋದು ಈ ಒಬ್ಬ ವ್ಯಕ್ತಿಗೆ ಮಾತ್ರ

  ಎರಡು ದಿನ ಅಂತರದಲ್ಲಿ ಎರಡು ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿದ ಯಶ್ ಫ್ಯಾಮಿಲಿಯಲ್ಲಿ, ಇನ್ನು ಎರಡು ದಿನ ಬಿಟ್ಟು ಇನ್ನೊಂದು ಬರ್ತಡೇ ಇದೆ. ಅದು ಯಶ್ ಅವರ ತಂಗಿ ನಂದಿನಿ ಅವರದ್ದು. ಹೌದು, ಜನವರಿ 12 ರಂದು ಯಶ್ ಸಹೋದರಿಯ ಹುಟ್ಟುಹಬ್ಬ.

  ಬೇರೆ ಮನೆ ಮಾಡಿರುವ ಬಗ್ಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರಬೇರೆ ಮನೆ ಮಾಡಿರುವ ಬಗ್ಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರ

  ಇಷ್ಟೆಲ್ಲಾ ಓದಿದ ಮೇಲೆ ರಾಧಿಕಾ ಪಂಡಿತ್ ಅವರ ಬರ್ತಡೇ ಯಾವಾಗ ಎಂಬ ಕುತೂಹಲ ಕಾಡುತ್ತೆ. ಮಾರ್ಚ್ 7 ರಂದು ಮಿಸಸ್ ರಾಮಾಚಾರಿಯ ಜನುಮದಿನದ ಸಂಭ್ರಮ

  English summary
  3 birthday celebrations at Yash's house in January month. January 8 Rocking Star Yash Birthday. January 10, Yash's father's birthday, January 12 Yash's sister, Nandini birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X