ಈ ಶುಕ್ರವಾರ ಬಿಡುಗಡೆಯಾಗುತ್ತಿರುವ 4 ಹೊಸ ಸಿನಿಮಾಗಳು

ಪ್ರತಿ ಶುಕ್ರವಾರ ಚಿತ್ರಮಂದಿರಗಳಿಗೆ ಹೊಸ ಹೊಸ ಸಿನಿಮಾಗಳ ಆಗಮನ ಆಗುತ್ತದೆ. ಅದೇ ರೀತಿ ಈ ವಾರವೂ ನಾಲ್ಕು ಹೊಸ ಕನ್ನಡ ಚಿತ್ರಗಳು ಬಿಡುಗಡೆಯಾಗಲು ಸಿದ್ಧವಾಗಿವೆ.

ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ನಟನೆಯ 'ಆದಿಲಕ್ಷ್ಮಿ ಪುರಾಣ', ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಅಭಿನಯದ 'ಸಿಂಗ', ರಣ ಚಂದು ನಟನೆ ಮತ್ತು ನಿರ್ದೇಶನದ 'ಡಿಜ್ಕಿ ಡಿಸೈನ್' ಹಾಗೂ ಹೊಸ ಹುಡುಗ ಶರತ್ ನಾಯಕನಾಗಿರುವ 'ಮಳೆ ಬಿಲ್ಲು' ಚಿತ್ರಗಳು ಜುಲೈ 19 ರಂದು ಬಿಡುಗಡೆಯಾಗುತ್ತಿವೆ.

ಈ ವಾರ ತೆರೆಗೆ ಬರುತ್ತಿರುವ ನಾಲ್ಕು ಕನ್ನಡ ಸಿನಿಮಾಗಳ ವಿವರ ಇಲ್ಲಿದೆ....

ಆದಿಲಕ್ಷ್ಮಿ ಪುರಾಣ

ಆದಿಲಕ್ಷ್ಮಿ ಪುರಾಣ

ನಟಿ ರಾಧಿಕಾ ಪಂಡಿತ್ ವರ್ಷಗಳ ಬಳಿಕ ನಟಿಸುತ್ತಿರುವ ಸಿನಿಮಾ 'ಆದಿಲಕ್ಷ್ಮಿ ಪುರಾಣ'. ಈವರೆಗೆ ಪ್ರತಿ ಸಿನಿಮಾದಲ್ಲಿಯೂ ತಮ್ಮ ಪಾತ್ರಗಳ ಮೂಲಕ ಪ್ರಯೋಗ ಮಾಡುತ್ತಿರುವ ರಾಧಿಕಾ ಇಲ್ಲಿ ಯಾವ ರೀತಿಯ ಪಾತ್ರ ಆಯ್ಕೆ ಮಾಡಿದ್ದಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಿಗೆ ಇದೆ. ಪ್ರಿಯಾ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ. ನಿರೂಪ್ ಭಂಡಾರಿ ಸಿನಿಮಾದ ನಾಯಕನಾಗಿದ್ದಾರೆ.

ಸಿಂಗ

ಸಿಂಗ

'ಶಾನೆ ಟಾಪ್ಪಾಗವ್ಳೆ ನಮ್ಮುಡುಗಿ....' ಹಾಡಿನ ಮೂಲಕ 'ಸಿಂಗ' ಸಿನಿಮಾ ಫೇಮಸ್ ಆಗಿದೆ. ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ನಟಿಸಿರುವ ಈ ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ನಾಯಕನ ತಾಯಿಯ ಪಾತ್ರದಲ್ಲಿ ತಾರ ಕಾಣಿಸಿಕೊಂಡಿದ್ದಾರೆ. ವಿಜಯ ಕಿರಣ್ ಚಿತ್ರದ ನಿರ್ದೇಶನ ಮಾಡಿದ್ದಾರೆ.

ಡಿಜ್ಕಿ ಡಿಸೈನ್

ಡಿಜ್ಕಿ ಡಿಸೈನ್

ಒಬ್ಬ ಹಳ್ಳಿ ಹುಡುಗ ಬೆಂಗಳೂರಿಗೆ ಬಂದರೆ, ಈ ಊರು ಅವನನ್ನು ಹೇಗೆ ಬದಲು ಮಾಡುತ್ತದೆ ಎನ್ನುವ ಕಥೆಯನ್ನು ಹಾಸ್ಯ ರೂಪದಲ್ಲಿ 'ಡಿಜ್ಕಿ ಡಿಸೈನ್' ಸಿನಿಮಾದಲ್ಲಿ ಹೇಳಲಾಗಿದೆ. ಕಾಮಿಡಿ, ಲವ್, ಥ್ರಿಲ್ಲರ್ ಅಂಶಗಳ ಜೊತೆಗೆ ಈ ಸಿನಿಮಾ ಬರುತ್ತದೆ. ರಣ ಚಂದು ಸಿನಿಮಾದ ನಿರ್ದೇಶನದ ಜೊತೆಗೆ ನಾಯಕನೂ ಆಗಿದ್ದಾರೆ. ನಿಮಿಕಾ ರತ್ನಾಕರ್ ಸಿನಿಮಾದ ಹೀರೋಯಿನ್.

ಮಳೆಬಿಲ್ಲು

ಮಳೆಬಿಲ್ಲು

ಈ ಹಿಂದೆ 'ಕ' ಸೇರಿದಂತೆ ಕೆಲವು ಸಿನಿಮಾ ಮಾಡಿದ್ದ ಶರತ್ 'ಮಳೆಬಿಲ್ಲು' ಸಿನಿಮಾದ ಹೀರೋ ಆಗಿದ್ದಾರೆ. ಭಾರ್ಗವಿ ಮತ್ತು ಸಂಜನಾ ಆನಂದ್ ಸಿನಿಮಾದ ನಾಯಕಿ ಆಗಿದ್ದಾರೆ. ಸಿನಿಮಾದಲ್ಲಿ ಹತ್ತು ಹಾಡುಗಳು ಇದ್ದು, ಗಣೇಶ್ ನಾರಾಯಣ್ ಮ್ಯೂಸಿಕ್ ನೀಡಿದ್ದಾರೆ. ನಾಗರಾಜ್ ಹಿರಿಯೂರು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Aadi Lakshmi Purana, Singa, Male Billu, Dichki Design kannada movies releasing on this friday ( july 19th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X