For Quick Alerts
  ALLOW NOTIFICATIONS  
  For Daily Alerts

  ಒಂದು ಡಬ್ಬಿಂಗ್ ಸಿನಿಮಾದ ಜೊತೆಗೆ ನಾಳೆ ಬರ್ತಿವೆ 3 ಚಿತ್ರಗಳು

  By Naveen
  |

  ಕಳೆದ ವಾರ ಬಿಡುಗಡೆಯಾಗಿರುವ 'ಒಂದಲ್ಲಾ ಎರಡಲ್ಲಾ' ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾಗಳಿಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಇವುಗಳ ನಂತರ ಈ ವಾರ ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿದೆ.

  'ಜಿಗರ್ ಥಂಡ' ಖ್ಯಾತಿಯ ನಿರ್ದೇಶಕರ 'ತ್ರಾಟಕ', ಹೇಮಂತ್ ಕೃಷ್ಣಪ್ಪ ನಟನೆಯ 'ಉದ್ದಿಶ್ಯ', ಹಾರರ್, ಥ್ರಿಲ್ಲರ್ ಸಿನಿಮಾ 'ಚೌಕುರ್ ಗೇಟ್' ಹಾಗೂ ಡಬ್ಬಿಂಗ್ ಸಿನಿಮಾ 'ಕಮಾಂಡೋ' ನಾಳೆ ಬಿಡುಗಡೆಯಾಗುತ್ತಿರುವ ಸಿನಿಮಾಗಳಾಗಿವೆ. ಡಬ್ಬಿಂಗ್ ಸಿನಿಮಾ ಹೊರತು ಪಡಿಸಿ ಉಳಿದ ಮೂರು ಚಿತ್ರಗಳಲ್ಲಿ ಹೊಸ ಕಲಾವಿದರೇ ಹೆಚ್ಚು ಕಾಣಿಸಿಕೊಂಡಿದ್ದಾರೆ.

  ನಾಳೆ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ ಡಬ್ಬಿಂಗ್ ಸಿನಿಮಾ 'ಕಮಾಂಡೊ' ನಾಳೆ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ ಡಬ್ಬಿಂಗ್ ಸಿನಿಮಾ 'ಕಮಾಂಡೊ'

  ಅಂದಹಾಗೆ, ನಾಳೆ ರಿಲೀಸ್ ಆಗುತ್ತಿರುವ ನಾಲ್ಕು ಸಿನಿಮಾಗಳ ಒಂದಷ್ಟು ವಿವರ ಮುಂದಿದೆ ಓದಿ....

  'ತ್ರಾಟಕ'

  'ತ್ರಾಟಕ'

  ಈ ಹಿಂದೆ `ಜಿಗರ್ ಥಂಡ` ಚಿತ್ರವನ್ನು ನಿರ್ದೇಶಿಸಿದ್ದ ಶಿವಗಣೇಶ್ ಈಗ 'ತ್ರಾಟಕ' ಎಂಬ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ನಾಳೆ ರಾಜ್ಯಾದಂತ್ಯ ರಿಲೀಸ್ ಆಗಲಿದೆ. ಆಸ್ತಾ ಸಿನಿಮಾಸ್ ಲಾಂಛನದಲ್ಲಿ ರಾಹುಲ್ ಐನಾಪುರ ಅವರು ನಿರ್ಮಿಸಿ, ನಟಿಸಿರುವ ಚಿತ್ರ ಇದಾಗಿದೆ. ರಾಹುಲ್ ಐನಾಪುರ, ಅಜಿತ್ ಜಯರಾಜ್, ಹೃದಯ, ಅಕ್ಷತ, ಭವಾನಿ ಪ್ರಕಾಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಉದ್ದಿಶ್ಯ

  ಉದ್ದಿಶ್ಯ

  ಹೇಮನ್ (ಹೇಮಂತ್ ಕೃಷ್ಣಪ್ಪ) ನಿರ್ಮಿಸಿ ನಿರ್ದೇಶಿಸಿರುವ 'ಉದ್ದಿಶ್ಯ' ಚಿತ್ರವು ಈ ವಾರ ಬಿಡುಗಡೆಯಾಗುತ್ತಿದೆ. ಸಸ್ಪೆನ್ಸ್-ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರ ಟ್ರೇಲರ್ ಗಮನ ಸೆಳೆದಿದೆ. ಹೇಮಂತ್, ಅರ್ಚನಾ ಗಾಯಕ್ವಾಡ್, ಅಕ್ಷತಾ, ಅನಂತವೇಲು, ಅಶ್ವತ್ ನಾರಾಯಣ್, ವಿಜಯ್ ಕೌಂಡಿನ್ಯ, ಚಿತ್ರದಲ್ಲಿ ನಟಿಸಿದ್ದಾರೆ. ಶದ್ರಚ್ ಸಾಲೊಮನ್ ಸಂಗೀತ ನೀಡಿದ್ದಾರೆ.

  'ಉದ್ದಿಶ್ಯ' ಸಿನಿಮಾ ನೋಡೋದಕ್ಕೆ ಈ ಒಂದು ಕಾರಣ ಸಾಕು 'ಉದ್ದಿಶ್ಯ' ಸಿನಿಮಾ ನೋಡೋದಕ್ಕೆ ಈ ಒಂದು ಕಾರಣ ಸಾಕು

  ಚೌಕುರ್ ಗೇಟ್

  ಚೌಕುರ್ ಗೇಟ್

  'ಚೌಕುರ್ ಗೇಟ್' ಒಂದು ಹಾರರ್, ಥ್ರಿಲ್ಲರ್ ಸಿನಿಮಾವಾಗಿದೆ. ಕಾಮಿಡಿ, ಆಕ್ಷನ್, ಲವ್ ಎಲ್ಲ ಅಂಶಗಳು ಸಿನಿಮಾದಲ್ಲಿ ಇದೆಯಂತೆ. ನಾಲ್ಕು ಪಾತ್ರಗಳು ಸಿನಿಮಾದಲ್ಲಿ ಮುಖ್ಯವಾಗಿದ್ದು, ಅರವಿಂದ್ ಪೋಲೀಸ್ ಅಧಿಕಾರಿಯಾಗಿ ಮತ್ತು ಪವಿತ್ರಾ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.

  ಕಮಾಂಡೊ

  ಕಮಾಂಡೊ

  ತಮಿಳಿನ ಅಜಿತ್ ನಟನೆಯ ಸಿನಿಮಾ 'ವಿವೇಗಂ' ಈಗ ಕನ್ನಡಕ್ಕೆ ಡಬ್ ಆಗಿದೆ. 'ಕಮಾಂಡೊ' ಎಂಬ ಹೆಸರಿನಲ್ಲಿ ನಾಳೆ ಈ ಚಿತ್ರ ಬಿಡುಗಡೆಯಾಗುತ್ತಿದೆ. ಕರ್ನಾಟಕದ ಸುಮಾರು 85ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರವು ತೆರೆಕಾಣುತ್ತಿದೆ. ಬೆಂಗಳೂರಿನಲ್ಲಿ ಭೂಮಿಕಾ ಪ್ರಮುಖ ಚಿತ್ರಮಂದಿರ ಆಗಿದೆ. ಹರಿವು ಕ್ರಿಯೇಷನ್ಸ್ ಈ ಸಿನಿಮಾವನ್ನು ಡಬ್ ಮಾಡಿದೆ.

  'ತ್ರಾಟಕ' ಅಂದರೆ ಏನು? ಚಿತ್ರತಂಡದಿಂದ ಸಿಕ್ಕಿದೆ ಉತ್ತರ 'ತ್ರಾಟಕ' ಅಂದರೆ ಏನು? ಚಿತ್ರತಂಡದಿಂದ ಸಿಕ್ಕಿದೆ ಉತ್ತರ

  English summary
  kannada movies Uddishya, Trataka, Commando and Chowkur Gate will be releasing tomorrow (August 31st).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X