ಈ ವಾರ 4 ಚಿತ್ರಗಳು ತೆರೆಗೆ : 2 ಆರ್ಟ್ 2 ಕಮರ್ಷಿಯಲ್

By Naveen

Recommended Video

ಬಕಾಸುರನ ಜೊತೆ ಬರ್ತಿವೆ ಬೊಂಬಾಟ್ 3 ಸಿನಿಮಾಗಳು | Filmibeat Kannada

ಪ್ರತಿ ವಾರದಂತೆ ಈ ವಾರವೂ ಚಿತ್ರಮಂದಿರಕ್ಕೆ ಬರುವುದಕ್ಕೆ ಸಿನಿಮಾಗಳು ಸಿದ್ಧವಾಗಿ ನಿಂತಿವೆ. ಈ ಶುಭ ಶುಕ್ರವಾರ ನಾಲ್ಕು ಹೊಸ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ವಿಶೇಷ ಅಂದರೆ ಅವುಗಳಲ್ಲಿ ಎರಡು ಆರ್ಟ್ ಸಿನಿಮಾ ಆದರೆ ಇನ್ನು ಎರಡು ಸಿನಿಮಾಗಳು ಕಮರ್ಷಿಯಲ್ ಕಥೆ ಹೊಂದಿದೆ.

ನಟಿ ತಾರ ಅಭಿನಯದ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ 'ಹೆಬ್ಬೆಟ್ ರಾಮಕ್ಕ', ಟಿ.ಎಸ್.ನಾಗಾಭರಣ ನಿರ್ದೇಶನ 'ಕಾನೂರಾಯಣ', ಪ್ರಿಯಾಮಣಿ ನಟನೆಯ 'ಧ್ವಜ' ಹಾಗೂ ನಟ ಆರ್ ಜೆ ರೋಹಿತ್ ಅವರ 'ಬಕಾಸುರ' ಸಿನಿಮಾಗಳು ಇದೇ ವಾರ ರಿಲೀಸ್ ಆಗುತ್ತಿವೆ. ಈ ನಾಲ್ಕು ಸಿನಿಮಾಗಳು ವಿಶೇಷ ಕಥಾ ವಸ್ತುವನ್ನು ಹೊಂದಿದ್ದು, ಯಾವ ಸಿನಿಮಾಗೆ ಜನರು ಜೈ ಎನ್ನುತ್ತಾರೆ ಎನ್ನುವ ಕುತೂಹಲ ಇದೆ.

ಅಂದಹಾಗೆ, ಈ ವಾರ ಬಿಡುಗಡೆಯಾಗುವ ನಾಲ್ಕು ಸಿನಿಮಾಗಳ ಕೆಲ ಪ್ರಮುಖ ವಿವರ ಮುಂದಿದೆ ಓದಿ..

'ಹೆಬ್ಬೆಟ್ ರಾಮಕ್ಕ'

'ಹೆಬ್ಬೆಟ್ ರಾಮಕ್ಕ'

ಇತ್ತೀಚಿಗಷ್ಟೆ ರಾಷ್ಟ್ರಪ್ರಶಸ್ತಿ ಗೆದ್ದ ಸಿನಿಮಾ `ಹೆಬ್ಬೆಟ ರಾಮಕ್ಕ' ಈ ವಾರ ತೆರೆಗೆ ಬರಲಿದೆ. ಈ ಹಿಂದೆ 'ನಾನು ಗಾಂಧಿ' ಸೇರಿದಂತೆ ಬಹುತೇಕ ಮಕ್ಕಳ ಚಿತ್ರಗಳನ್ನೇ ನಿರ್ದೇಶಿಸಿದ್ದ ಎನ್.ಆರ್.ನಂಜುಂಡೇಗೌಡ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಇದಾಗದೆ. ರಾಮಕ್ಕನಾಗಿ ಹಿರಿಯ ನಟಿ ತಾರಾ ಅಭಿನಯಿಸಿದ್ದಾರೆ. ದೇವರಾಜ್, ಹನುಮಂತೇಗೌಡ್ರು, ನಾಗರಾಜಮೂರ್ತಿ, ಜಗದೀಶ್ ಜಾಲ, ಮೈಮ ನಂಜುಂಡ, ಸಿಂಧು ಕಾನೇನಹಳ್ಳಿ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ಎ.ಪುಟ್ಟರಾಜು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆ, ಬಿ.ಸತೀಶ್ ಅವರ ಛಾಯಾಗ್ರಹಣ, ಬಸವರಾಜ್‍ಅರಸ್ ಅವರ ಸಂಕಲನ, ಎಸ್.ವಿ.ಸಿದ್ದರಾಮಯ್ಯ ಅವರ ಸಂಭಾಷಣೆ ಚಿತ್ರದಲ್ಲಿದೆ.

ಮುಖ್ಯ ಚಿತ್ರಮಂದಿರ: ತ್ರಿವೇಣಿ

'ಕಾನೂರಾಯಣ'

'ಕಾನೂರಾಯಣ'

ಟಿ.ಎಸ್.ನಾಗಾಭರಣ ನಿರ್ದೇಶಿಸಿರುವ 'ಕಾನೂರಾಯಣ' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಶ್ರುತಾಲಯ ಫಿಲ್ಮ್ಸ್ ನಿರ್ಮಿತ `ಕಾನೂರಾಯಣ` ಈ ಚಿತ್ರಕ್ಕೆ ನಾಗಾಭರಣ ಪುತ್ರ ಪನ್ನಗಾಭರಣ ಅವರ ಸಹ ನಿರ್ದೇಶನವಿದೆ. ಸ್ಕಂದ ಅಶೋಕ್, ಸೋನು ಗೌಡ, ದೊಡ್ಡಣ್ಣ, ಸುಂದರ್ ರಾಜ್, ಗಿರಿಜಾ ಲೋಕೇಶ್, ಕರಿ ಸುಬ್ಬು, ಚಂದ್ರು(ಕಡ್ಡಿಪುಡಿ), ನೀನಾಸಂ ಅಶ್ವಥ್ಥ್, ಮನು ಹೆಗ್ಡೆ, ಜಾನ್ಹವಿ ಜ್ಯೋತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಟಿ ವಾಸುಕಿ ವೈಭವ್ ಸಂಗೀತ ನಿರ್ದೇಶನ, ಶ್ರೀನಿವಾಸ ರಾಮಯ್ಯ ಛಾಯಾಗ್ರಹಣ ಹಾಗೂ ಬಿ.ಎಸ್.ಕೆಂಪರಾಜು ಅವರ ಸಂಕಲನವಿರುವ ಈ ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆಯನ್ನು ಹರೀಶ್ ಹಾಗಲವಾಡಿ, ಡಾ||ಎಲ್.ಎಚ್.ಮಂಜುನಾಥ್, ಅವಿನಾಶ್ ಬಲೆಕ್ಕಳ್ ಬರೆದಿದ್ದಾರೆ.

'ಧ್ವಜ'

'ಧ್ವಜ'

ನಟಿ ಪ್ರಿಯಾಮಣಿ ಅಭಿನಯದ 'ಧ್ವಜ' ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರ ಒಂದು ರಾಜಕೀಯ ಹಿನ್ನಲೆಯ ಕಥೆ ಹೊಂದಿದೆ. ಕನ್ನಡದ

ಜನಪ್ರಿಯ ಸಿನಿಮಾಟೋಗ್ರಾಫರ್ ಆಗಿರುವ ಅಶೋಕ್ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಸುಧಾ ಬಸವೇಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರವಿ ಗೌಡ ಚಿತ್ರದ ನಾಯಕ ಆಗಿದ್ದಾರೆ. ರವಿ ನಟ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ 'ಹುಲಿರಾಯ' ಸಿನಿಮಾ ಮಾಡಿದ್ದ ದಿವ್ಯ ಹುರುಡುಗ ಈ ಸಿನಿಮಾದ ಮತ್ತೊಬ್ಬ ನಾಯಕಿ ಆಗಿದ್ದಾರೆ. ಪ್ರಿಯಾಮಣಿ ರಮ್ಯಾ ಎಂಬ ಪಾತ್ರ ಮಾಡುತ್ತಿದ್ದು, ದಿವ್ಯ ಬಜಾರಿ ಮೊಟ್ಟೆ ಮಹಾಲಕ್ಷ್ಮಿ ಎಂಬ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಧ್ವಜ' ತಮಿಳಿನ 'ಕೋಡಿ' ಚಿತ್ರದ ರೀಮೇಕ್ ಆಗಿದೆ ಅಲ್ಲಿನ ಧನುಷ್ ಮತ್ತು ತ್ರಿಷಾ ಅಭಿನಯಿಸಿದ್ದ ಪಾತ್ರವನ್ನ ಇಲ್ಲಿ ರವಿ ಮತ್ತು ಪ್ರಿಯಾಮಣಿ ನಿರ್ವಹಿಸಿದ್ದಾರೆ. ಟಿ.ಎನ್.ಸೀತಾರಾಮ್, ತಬಲನಾಣಿ, ವೀಣ ಸುಂದರ್ ಚಿತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣ್ ಸಿನಿಮಾಗೆ ಸಂಗೀತ ನೀಡಿದ್ದಾರೆ. 'ಮಾಸ್ಟರ್ ಫೀಸ್' ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.

ಮುಖ್ಯ ಚಿತ್ರಮಂದಿರ : ಅನುಪಮ

'ಬಕಾಸುರ'

'ಬಕಾಸುರ'

ಇಷ್ಟು ದಿನ ಸಾಕಷ್ಟು ಸದ್ದು ಮಾಡಿದ್ದ ಆರ್ ಜೆ ರೋಹಿತ್ ನಟನೆಯ 'ಬಕಾಸುರ' ಸಿನಿಮಾ ಕೂಡ ಇದೇ ವಾರ ಚಿತ್ರಮಂದಿರಕ್ಕೆ ಬರುತ್ತಿದೆ. ಈ ಹಿಂದೆ 'ಕರ್ವ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ನವನೀತ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಿರುತೆರೆಯ ನಟಿ ಕಾವ್ಯ ಗೌಡ ರೋಹಿತ್ ಗೆ ಜೊತೆಯಾಗಿದ್ದಾರೆ. ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ನಟ ರವಿಚಂದ್ರನ್ ನಟಿಸಿದ್ದಾರೆ. ಈ ಸಿನಿಮಾ ಸೈಕಾಲಜಿ ಥ್ರಿಲ್ಲರ್ ಆಧಾರಿತ ಕಥೆ ಹೊಂದಿದೆ. ಸಿತಾರ, ಸಾಧುಕೋಕಿಲ ಸೇರಿದಂತೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಮುಖ್ಯ ಚಿತ್ರಮಂದಿರ : ನರ್ತಕಿ

More from Filmibeat

English summary
4 kannada movies are releasing on april 27th. Kanurayana, Dhwaja, Hebbet Ramakka and Bakasura kannada movies will release day after tomorrow (April 27th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X