»   » 'ಇದೀಗ ಬಂದ ಸುದ್ದಿ' : ನಾಳೆ ಚಿತ್ರಮಂದಿರಕ್ಕೆ ಬರ್ತಿವೆ 4 ಕನ್ನಡ ಸಿನಿಮಾಗಳು

'ಇದೀಗ ಬಂದ ಸುದ್ದಿ' : ನಾಳೆ ಚಿತ್ರಮಂದಿರಕ್ಕೆ ಬರ್ತಿವೆ 4 ಕನ್ನಡ ಸಿನಿಮಾಗಳು

Posted By:
Subscribe to Filmibeat Kannada
ನಾಳೆ ಚಿತ್ರಮಂದಿರಕ್ಕೆ ಬರ್ತಿವೆ 4 ಕನ್ನಡ ಸಿನಿಮಾಗಳು , ಆದರೆ ನೀವು ಯಾವುದನ್ನು ನೋಡಬೇಕು ?

ಮತ್ತೆ ಶುಕ್ರವಾರ ಬಂದಿದೆ. ಚಿತ್ರಮಂದಿರದಲ್ಲಿ ಮತ್ತೆ ಹಳೆ ಸಿನಿಮಾಗಳ ನಿರ್ಗಮನ, ಹೊಸ ಸಿನಿಮಾಗಳ ಆಗಮನ ಆಗುತ್ತಿದೆ. ನಾಳೆ ಕನ್ನಡದ ನಾಲ್ಕು ಚಿತ್ರಗಳ ಭವಿ‍ಷ್ಯ ನಿರ್ಧಾರ ಆಗಲಿದೆ. ನಾಲ್ಕು ಚಿತ್ರತಂಡಗಳ ಶ್ರಮಕ್ಕೆ ಫಲ ಸಿಗುವ ಸಮಯ ಬಂದಿದೆ.

'ಗುಳ್ಟು', 'ಹೀಗೊಂದು ದಿನ', 'ಜಾನಿ ಜಾನಿ ಎಸ್ ಪಪ್ಪಾ' ಜೊತೆಗೆ 'ಇದೀಗ ಬಂದ ಸುದ್ದಿ' ಸಿನಿಮಾಗಳು ನಾಳೆ ತೆರೆಗೆ ಬರುತ್ತಿದೆ. ಸಾಮಾಜಿಕ ಜಾಲತಾಣದ ರಹಸ್ಯ ಹೇಳುವ 'ಗುಳ್ಟು', ಮಹಿಳಾ ಪ್ರಧಾನ ಸಿನಿಮಾ ಹೀಗೊಂದು ದಿನ', ದುನಿಯಾ ವಿಜಯ್ ನಟನೆಯ 'ಜಾನಿ ಜಾನಿ ಎಸ್ ಪಪ್ಪಾ' ಮತ್ತು ವಿಭಿನ್ನ ಶೀರ್ಷಿಕೆಯ 'ಇದೀಗ ಬಂದ ಸುದ್ದಿ' ಸಿನಿಮಾಗಳ ನಡುವೆ ಪೈಪೋಟಿ ನಡೆಯಲಿದೆ. ಬೇರೆ ಬೇರೆ ಕಥಾವಸ್ತು ಹೊಂದಿರುವ ಈ ಸಿನಿಮಾಗಳಲ್ಲಿ ಪ್ರೇಕ್ಷಕರು ಯಾವ ಸಿನಿಮಾ ಇಷ್ಟ ಪಡುತ್ತಾರೆ ಎನ್ನುವ ನಿರೀಕ್ಷೆ ಇದೆ.

ಸಂದರ್ಶನ: 'ಹೀಗೊಂದು ದಿನ'ದಲ್ಲಿ 'ರೆಬೆಲ್' ಆದ ಸಿಂಧು ಲೋಕನಾಥ್

ಅಂದಹಾಗೆ, ನಾಳೆ ನಿಮ್ಗೆ ಹೊಸ ಸಿನಿಮಾ ನೋಡುವ ಪ್ಲಾನ್ ಇದ್ದರೆ ಸಿನಿಮಾ ನೋಡುವ ಮುಂಚೆ ಈ ನಾಲ್ಕು ಚಿತ್ರಗಳ ವಿಶೇಷತೆಗಳು ಇಲ್ಲಿದೆ ಓದಿ...

'ಹೀಗೊಂದು ದಿನ'

ನಟಿ ಸಿಂಧು ಲೋಕನಾಥ್ ಮೂರು ವರ್ಷದ ನಂತರ ಮತ್ತೆ ಬಂದಿದ್ದಾರೆ. 'ಹೀಗೊಂದು ದಿನ' ಮದುವೆಯ ನಂತರ ಸಿಂಧು ನಟನೆ ಮಾಡುತ್ತಿರುವ ಮೊದಲ ಸಿನಿಮಾವಾಗಿದೆ. ಇನ್ನು ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ. ಒಂದು ದಿನದಲ್ಲಿ ಅದರಲ್ಲಿಯೂ ಬೆಳ್ಳಗೆ 6 ಗಂಟೆಯಿಂದ 8 ಗಂಟೆವರೆಗೆ ನಡೆಯುವ ಕಥೆ ಸಿನಿಮಾದಲ್ಲಿದೆ. ವಿಶೇಷ ಅಂದರೆ ಇದೊಂದು ಅನ್ ಕಟ್ ಸಿನಿಮಾವಾಗಿದೆ. ಈ ಚಿತ್ರ ನಾಳೆ ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ.

ನಿರ್ದೇಶಕ : ವಿಕ್ರಂ ಯೋಗನಂದ್

ಮುಖ್ಯ ಚಿತ್ರಮಂದಿರ: ಮೂವಿ ಲ್ಯಾಂಡ್

ವಿಶೇಷತೆ : ಮೊದಲ ಅನ್ ಕಟ್ ಸಿನಿಮಾ

'ಗುಳ್ಟು'

ಸಾಮಾಜಿಕ ಜಾಲತಾಣದ ರಹಸ್ಯಗಳ ಬಗ್ಗೆ ಹೆಣೆದಿರುವ ಕಥೆ ಹೊಂದಿರುವ 'ಗುಳ್ಟು' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ದೊಡ್ಡ ಸದ್ದು ಮಾಡಿದೆ. ಈ ಚಿತ್ರದ ಮೂಲಕ ಉತ್ತರ ಕರ್ನಾಟಕದ ಇಂಜಿನಿಯರ್ ನವೀನ್ ಶಂಕರ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಸೋನು ಗೌಡ ಸಿನಿಮಾದ ನಾಯಕಿ ಆಗಿದ್ದಾರೆ. ಲೂಸಿಯಾ ಪವನ್ ಕುಮಾರ್ ಚಿತ್ರದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ : ಜನಾರ್ಧನ್ ಚಿಕ್ಕಣ್ಣ

ಮುಖ್ಯ ಚಿತ್ರಮಂದಿರ: ಮೇನಕಾ

ವಿಶೇಷತೆ : ಕ್ರೈಂ ನ ಹೊಸ ಮುಖ ಅನಾವರಣ

'ಜಾನಿ ಜಾನಿ ಎಸ್ ಪಪ್ಪಾ'

ದುನಿಯಾ ವಿಜಯ್ ಮತ್ತೆ ಪ್ರೀತಂ ಗುಬ್ಬಿ ಮತ್ತೆ ಒಂದಾಗಿದ್ದಾರೆ. ಇಬ್ಬರ ಕಾಂಬಿನೇಶನ್ ನಲ್ಲಿ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಬರುತ್ತಿದೆ. ಹೊಸ ಪದ್ಮಾವತಿಯಾಗಿ ರಚಿತಾ ರಾಮ್ ಇಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ಮೊದಲ ಬಾರಿಗೆ ಜೋಡಿಯಾಗಿದ್ದಾರೆ. ಇದೊಂದು ಓಟ್ ಅಂಡ್ ಓಟ್ ಕಾಮಿಡಿ ಸಿನಿಮಾವಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಈಗಾಗಲೇ ಹಿಟ್ ಆಗಿದೆ. ಇದೇ ಶುಕ್ರವಾರ ಜಾನಿ ಚಿತ್ರಮಂದಿರಕ್ಕೆ ಬರುತ್ತಿದ್ದಾನೆ.

ನಿರ್ದೇಶಕ : ಪ್ರೀತಂ ಗುಬ್ಬಿ

ಮುಖ್ಯ ಚಿತ್ರಮಂದಿರ: ನರ್ತಕಿ

ವಿಶೇಷತೆ : 'ಜಾನಿ ಮೇರಾ ನಾಮ್' ನಂತರ ಮತ್ತೆ ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ ಒಂದಾಗಿದ್ದಾರೆ

'ಇದೀಗ ಬಂದ ಸುದ್ದಿ'

'ಇದೀಗ ಬಂದ ಸುದ್ದಿ' ಹೆಸರಿನಿಂದಲೇ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆದಿರ ಚಿತ್ರ. ಕೇವಲ ಹೊಸಬರೆ ಸೇರಿ ಮಾಡಿರುವ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ಕನ್ನಡಿಗ ಬಲರಾಮ್, ಮಾಧವ್, ಶಿವಕುಮಾರ್ ಲೋಕೇಶ್ವರಿ ನಾಗರಾಜ್, ಸಂಗೀತ ವಿಜಯ್, ಬೇಬಿ ಚೈತನ್ಯ ಹಾಗೂ ಮಾಸ್ಟರ್ ವೃಶಾಂಕ್ ಹೀಗೆ ಇನ್ನೂ ಅನೇಕರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಮಾಜಕ್ಕೆ ಒಂದು ಒಳ್ಳೆ ಸಂದೇಶವಿರುವ ಚಿತ್ರವನ್ನ ನೀಡಬೇಕು ಎನ್ನುವ ಉದ್ದೇಶ ಇದೀಗ ಬಂದ ಸುದ್ದಿ ಚಿತ್ರತಂಡದ್ದಾಗಿದೆ. ಸಸ್ಪೆಸ್ ಕಥಾಹಂದರವಿರುವ ಈ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದೆ.

ನಿರ್ದೇಶನ: ಎಸ್ ಆರ್ ಪಾಟೀಲ್

ಮುಖ್ಯ ಚಿತ್ರಮಂದಿರ : ಸಿಕ್ಕಿಲ್ಲ

ವಿಶೇಷತೆ : ವಿಭಿನ್ನ ಕಥೆ ಆಧಾರಿತ ಸಿನಿಮಾ

ನಿಮ್ಮ ಆಯ್ಕೆ ಯಾವುದು?

'ಗುಳ್ಟು', 'ಹೀಗೊಂದು ದಿನ', 'ಜಾನಿ ಜಾನಿ ಎಸ್ ಪಪ್ಪಾ' ಮತ್ತು 'ಇದೀಗ ಬಂದ ಸುದ್ದಿ' ಸಿನಿಮಾಗಳು ನಾಳೆ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ನಾಲ್ಕು ಸಿನಿಮಾಗಳಲ್ಲಿ ನೀವು ನೋಡಲು ಬಯಸಿದ ಸಿನಿಮಾದ ಹೆಸರನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಉತ್ತರ ಕರ್ನಾಟಕದ ಇಂಜಿನಿಯರ್ ಈಗ 'ಗುಳ್ಟು' ಹೀರೋ

English summary
4 kannada movies are releasing on march 30th. Heegondu Dina, Jani Jani Yes Papa Papa, Gultoo, Idiga Banda Suddi movies will release tomorrow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X