»   » ಈ ವಾರ ಕನ್ನಡದಲ್ಲಿ ಯಾವ ಯಾವ ಸಿನಿಮಾಗಳು ಬಿಡುಗಡೆ?

ಈ ವಾರ ಕನ್ನಡದಲ್ಲಿ ಯಾವ ಯಾವ ಸಿನಿಮಾಗಳು ಬಿಡುಗಡೆ?

Posted By:
Subscribe to Filmibeat Kannada

ಶುಕ್ರವಾರ ಬಂದೇ ಬಿಡ್ತು. ಈ ವೀಕೆಂಡ್ ನಲ್ಲಿ ಯಾವ ಚಿತ್ರಕ್ಕೆ ಹೋಗ್ಬೇಕು ಎನ್ನುವ ಪ್ಲಾನ್ ಮಾಡ್ತಿದ್ದೀರಾ..? ಈ ವಾರ ಕನ್ನಡದಲ್ಲಿ ಯಾವ ಸಿನಿಮಾ ರಿಲೀಸ್ ಆಗ್ತಿದೆ ಎಂಬ ಕುತೂಹಲ ಕಾಡ್ತಿದ್ಯಾ? ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಈ ವಾರ ಕನ್ನಡದಲ್ಲಿ ಒಟ್ಟು ನಾಲ್ಕು ಚಿತ್ರಗಳು ತೆರೆ ಕಾಣುತ್ತಿವೆ. ನಾಲ್ಕರಲ್ಲಿ ಯಾವುದು ಬೆಸ್ಟ್ ಎಂದು ತಿಳಿದುಕೊಳ್ಳಬೇಕಾದ್ರೆ, ಆ ಚಿತ್ರಗಳು ಯಾವುದು? ಆ ಚಿತ್ರಗಳ ಸ್ಪೆಷಲಾಟಿ ಏನು ಎಂಬುದರ ಬಗ್ಗೆ ಮೊದಲು ಗಮನಹರಿಸೋಣ...

ರಾಜಹಂಸ

ಈ ವಾರ ತೆರೆ ಕಾಣುತ್ತಿರುವ ನಿರೀಕ್ಷೆಯ ಸಿನಿಮಾ 'ರಾಜಹಂಸ'. ಈ ಚಿತ್ರದ ವಿಶೇಷ ಏನಪ್ಪಾ ಅಂದ್ರೆ, 'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿ ನಾಯಕಿ ಆಗಿ ಕಾಣಿಸಿಕೊಂಡಿರುವ ಮೊದಲ ಚಿತ್ರ. ಈ ಚಿತ್ರಕ್ಕೆ ಜಡೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಗೌರಿ ಶಂಕರ್ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಅಯನ

ಸಾಫ್ಟ್ ವೇರ್ ವ್ಯಕ್ತಿಯ ಸುತ್ತ ಮೂಡಿ ಬಂದಿರುವ ಸಿನಿಮಾ 'ಅಯನ'. ಗಂಗಾಧರ್ ಸಾಲಿಮಠ ಈ ಚಿತ್ರವನ್ನ ನಿರ್ದೇಶಿಸಿದ್ದು, ದೀಪಕ್ ಸುಬ್ರಹ್ಮಣ್ಯ ನಾಯಕನಾಗಿ ನಟಿಸಿದ್ದಾರೆ. ಅಪೂರ್ವ ಸೋಮ ನಾಯಕಿಯಾಗಿದ್ದು, ರಮೇಶ್‌ ಭಟ್‌ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಶ್ರಿಯಾಂಶ್ ಶ್ರೀರಾಮ್ ಅವರ ಸಂಗೀತ, ವರುಣ್ ಡಿಕೆ ಕ್ಯಾಮರಾ ಈ ಚಿತ್ರಕ್ಕಿದೆ.

ದರ್ಪಣ

ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಗೀತರಚನೆ ಹಾಗೂ ನಿರ್ದೇಶನ ಮಾಡಿರುವ ಚಿತ್ರ 'ದರ್ಪಣ'. 'ರಂಗಿತರಂಗ' ಖ್ಯಾತಿಯ ಅರವಿಂದ್ ರಾವ್, ಯತಿರಾಜ್, ಸಂದಿಪ್ ಮಲಾನಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಧನುಷ್, ಸೂರ್ಯೋದಯ, ಹಾಗೂ ಸಚಿನ್ ಅವರ ಛಾಯಾಗ್ರಹಣವಿದೆ. ವಿನೋದ್ ಬಸವರಾಜ್ ಸಂಕಲನ, ರಾಜ್‍ದೇವ್ ನೃತ್ಯ ನಿರ್ದೇಶನ ಹಾಗೂ ಪವರ್ ಪುಷ್ಪರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಹಳ್ಳಿ ಸೊಗಡು

ನೃತ್ಯ ನಿರ್ದೇಶಕ ಕಪಿಲ್ ರವರು ಕಥೆ, ಚಿತ್ರಕಥೆ, ರಚಿಸಿ ನಿರ್ದೇಶನ ಮಾಡಿರುವ 'ಹಳ್ಳಿ ಸೊಗಡು' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಬ್ಬ ಸಂಗೀತ ಸಾಧನೊಬ್ಬನ ಅಭಿಮಾನಿಯೊಬ್ಬನ ಸಾಧನೆ, ಗುರುಭಕ್ತಿಯಲ್ಲಿ ಎಂಥಾ ಶಕ್ತಿ ಇದೆ ಎಂಬುದನ್ನ ಈ ಚಿತ್ರದಲ್ಲಿ ಹೇಳಲಾಗ್ತಿದೆ. ಅರವ್ ಸೂರ್ಯ ಮತ್ತ ಅಕ್ಷರ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.

English summary
Kannada Movies 'Darpana', 'Rajahamsa', 'Ayana' and 'Halli sogadu' are Releasing on September 8th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada