»   » ನಾಳೆ 'ಮಫ್ತಿ' ಜೊತೆ ಪೈಪೋಟಿಗೆ ನಿಂತಿವೆ 3 ಸಿನಿಮಾಗಳು

ನಾಳೆ 'ಮಫ್ತಿ' ಜೊತೆ ಪೈಪೋಟಿಗೆ ನಿಂತಿವೆ 3 ಸಿನಿಮಾಗಳು

Posted By:
Subscribe to Filmibeat Kannada

ವರ್ಷದ ಕೊನೆಯ ತಿಂಗಳಿನ ಪಾರಂಭದಲ್ಲಿಯೇ 4 ಸಿನಿಮಾಗಳು ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರ 'ಮಫ್ತಿ'. ಸೆಟ್ಟೇರಿದಾಗಿನಿಂದಲೂ ಸುದ್ದಿ ಮಾಡಿದ್ದ 'ಮಫ್ತಿ' ನಾಳೆ (ಡಿಸೆಂಬರ್ 1)ಕ್ಕೆ ರಿಲೀಸ್ ಆಗುತ್ತಿದೆ.

'ಮಫ್ತಿ' ಚಿತ್ರದ ಜೊತೆಯಲ್ಲಿ ಹೊಸ ಕಲಾವಿದರು ಅಭಿನಯಿಸಿರುವ 'ಮಂತ್ರಂ', 'ಗೌಡ್ರು ಹೋಟೆಲ್' ಹಾಗೂ 'ಡ್ರೀಮ್ ಗರ್ಲ್' ಸಿನಿಮಾಗಳು ನಾಳೆಯೇ ತೆರೆ ಕಾಣಲು ಸಿದ್ಧವಾಗಿದೆ. ಡಿಸೆಂಬರ್ ಬಂದ ಕೂಡಲೇ ಸಿನಿಮಾಗಳ ಬಿಡುಗಡೆಯ ಸಾಲು ದೊಡ್ಡದಾಗಿದೆ. ಈ ತಿಂಗಳ ಮೊದಲ ಶುಕ್ರವಾರವೇ ದೊಡ್ಡ ಸಿನಿಮಾದ ಜೊತೆ ಸಣ್ಣ ಪುಟ್ಟ ಕಲಾವಿದರ ಚಿತ್ರಗಳು ಪೈಪೋಟಿ ನೀಡುತ್ತಿದೆ.

ಅಂದಹಾಗೆ, ಈ ವಾರ ಬಿಡುಗಡೆ ಆಗುತ್ತಿರುವ 4 ಚಿತ್ರಗಳ ವಿಶೇಷತೆ ಏನು..? ಈ ಚಿತ್ರಗಳಲ್ಲಿ ಯಾರೆಲ್ಲಾ ಕಲಾವಿದರು ಅಭಿನಯಿಸಿದ್ದಾರೆ..? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿದೆ ಓದಿ...

ಚಿತ್ರ: ಮಫ್ತಿ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಅಭಿನಯದ 'ಮಫ್ತಿ' ಸಿನಿಮಾ ನಾಳೆ (ಡಿಸೆಂಬರ್ 1) ರಾಜ್ಯಾದ್ಯಂತ 300ಕ್ಕೂ ಹೆಚ್ಚು ಸಿನಿಮಾ ಮಂದಿರದಲ್ಲಿ ತೆರೆಗೆ ಬರುತ್ತಿದೆ. ಶ್ರೀ ಮುರಳಿ ಜೊತೆಯಲ್ಲಿ ಶಾನ್ವಿ ಶ್ರೀವತ್ಸ ನಾಯಕಿಯಾಗಿ ಅಭಿನಯಿಸಿದ್ದು ಛಾಯಾಸಿಂಗ್ ಮತ್ತು ವಸಿಷ್ಠ ಚಿತ್ರದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನರ್ತನ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, 'ಮಫ್ತಿ' ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಖ್ಯಾತಿಯ ನವೀನ್ ಕುಮಾರ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

ಚಿತ್ರ: ಗೌಡ್ರು ಹೋಟೆಲ್

'ಗೌಡ್ರು ಹೋಟೆಲ್', ಮಲೆಯಾಳಂ ನಲ್ಲಿ ತೆರೆಕಂಡು ಸಕ್ಸಸ್ ಕಂಡಿದ್ದ 'ಉಸ್ತಾದ್ ಹೋಟೆಲ್' ಚಿತ್ರದ ರಿಮೇಕ್. ಇಲ್ಲಿ ನವ ನಟ ರಚನ್ ಚಂದ್ರ ನಾಯಕನಾಗಿ ಅಭಿನಯಿಸಿದ್ದು ವೇದಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪಿ.ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ರೈ ಸಿನಿಮಾದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು, ಯುವನ್ ಶಂಕರ್ 'ಗೌಡ್ರು ಹೋಟೆಲ್' ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಚಿತ್ರ: ಮಂತ್ರಂ

ಟ್ರೇಲರ್ ನಿಂದಲೇ ಪ್ರೇಕ್ಷಕರನ್ನು ಕುತೂಹಲವನ್ನು ಹೆಚ್ಚಿಸಿದ ಸಿನಿಮಾ ಮಂತ್ರಂ. ನೈಜಘಟನೆಯನ್ನು ಆಧಾರವಿಟ್ಟುಕೊಂಡು ಕಥೆಯನ್ನು ಎಣೆದಿರುವ 'ಮಂತ್ರಂ' ಚಿತ್ರ ನಾಳೆ(ಡಿಸೆಂಬರ್ 1) ತೆರೆಗೆ ಬರುತ್ತಿದೆ. ಎಸ್ ಎಸ್ ಸಜ್ಜನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮಣಿಶೆಟ್ಟಿ ಹಾಗೂ ಪಲ್ಲವಿ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ರಷೀದ್ ಖಾನ್ 'ಮಂತ್ರಂ' ಸಂಗೀತ ನಿರ್ದೇಶನ ಮಾಡಿದ್ದರೆ, ರಾಜಶೇಖರ್ ಛಾಯಾಗ್ರಹಣ ಸಿನಿಮಾಗಿದೆ.

ಚಿತ್ರ: ಡ್ರೀಮ್ ಗರ್ಲ್

'ರಿಂಗ್ ರೋಡ್ ಶುಭ' ಸಿನಿಮಾದ ನಂತರ ಪಟ್ರೆ ಅಜಿತ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ 'ಡ್ರೀಮ್ ಗರ್ಲ್'. ಚಿತ್ರದಲ್ಲಿ ಅಮೃತಾ ರಾವ್ ಮತ್ತು ದೀಪಿಕಾ ದಾಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು ಲಕ್ಷಣ್ ನಾಯಕ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗಂಧರ್ವ ಸಂಗೀತ ಸಂಯೋಜನೆ ಮಾಡಿದ್ದು, 'ಡ್ರೀಮ್ ಗರ್ಲ್' ಲವ್ ಸಸ್ಪೆನ್ಸ್ ಕಥಾಹಂದರವಿರುವ ಸಿನಿಮಾ.

English summary
'Mafthi', Dream Girl, Gowdru Hotel and Mantram kannada movies are releasing Tomorrow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada