ಈ ವಾರ ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳು ಯಾವುವು? ಇಲ್ಲಿದೆ ಕಂಪ್ಲೀಟ್ ಲಿಸ್ಟ್
'ಭೀಮ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಚಿತ್ರಗಳ ಗೆಲುವು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದಿದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಿಲ್ಲ ಎನ್ನುವ ಅಪವಾದವನ್ನು ಈ 2 ಚಿತ್ರಗಳು ಅಳಿಸಿವೆ. ಒಳ್ಳೆ ಸಿನಿಮಾ ಇದ್ದರೆ ಖಂಡಿತ ಪ್ರೇಕ್ಷಕರು ಬರ್ತಾರೆ ಎನ್ನುವುದು ಸಾಬೀತು ಆದಂತಾಗಿದೆ.
ನಿಧಾನವಾಗಿ ಒಂದಷ್ಟು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಕಳೆದ ವಾರ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ತೆರೆಗೆ ಬಂದಿತ್ತು. ನಿಧಾನವಾಗಿ ಚಿತ್ರ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ವಿಹಾನ್ ಗೌಡ ಹಾಗೂ ಅಂಕಿತಾ ಅಮರ್ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು.

ಗಣೇಶ ಹಬ್ಬದ ವೀಕೆಂಡ್‌ನಲ್ಲಿ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಿ ಬಾಕ್ಸಾಫೀಸ್ ದೋಚುವ ಅವಕಾಶ ಇತ್ತು. ತಮಿಳಿನ 'ಗೋಟ್' ಸಿನಿಮಾ ಕೂಡ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಯಾಕೋ ಈ ಅವಕಾಶವನ್ನು ಕನ್ನಡ ಫಿಲ್ಮ್ ಮೇಕರ್ಸ್ ಬಳಸಿಕೊಳ್ಳಲಿಲ್ಲ. ಇನ್ನು ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಗೆ ಬರ್ತಿವೆ ಮುಂದೆ ಓದಿ.
1. ಕಾಲಾಪತ್ಥರ್
ವಿಕ್ಕಿ ವರುಣ್ ನಿರ್ದೇಶಿಸಿ ನಟಿಸಿರುವ 'ಕಾಲಾಪತ್ಥರ್' ಸಿನಿಮಾ ಈ ಶುಕ್ರವಾರ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಮಿಂಚಿದ್ದಾರೆ. ಶಿವಣ್ಣ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಶುಭ ಕೋರಿದ್ದಾರೆ. ಎರಡು ವರ್ಷಗಳ ಹಿಂದೆ ಶುರುವಾಗಿದ್ದ ಸಿನಿಮಾ ಅಂತೂ ಇಂತೂ ತೆರೆಗೆ ಬರಲು ಸಜ್ಜಾಗಿದೆ. ಕೆಜಿ ರಸ್ತೆಯ ತ್ರಿವೇಣಿ ಸೇರಿ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ.

2. ರಾನಿ
ಗುರುತೇಜ್ ಶೆಟ್ಟಿ ನಿರ್ದೇಶನದ ಗ್ಯಾಂಗ್‌ಸ್ಟರ್ ಚಿತ್ರ 'ರಾನಿ' ಕೂಡ ಈ ವಾರ ತೆರೆಗೆ ಬರಲಿದೆ. ಒಂದು ದಿನ ಮುನ್ನವೇ(ಸೆಪ್ಟೆಂಬರ್ 12) ಪ್ರೇಕ್ಷಕರನ್ನು ರಂಜಿಸಲಿದೆ. ಕಿರಣ್ ರಾಜ್ ಹೀರೊ ಆಗಿ ನಟಿಸಿರುವ ಚಿತ್ರದಲ್ಲಿ ಸಮೀಕ್ಷ, ಅಪೂರ್ವ ಹಾಗೂ ರಾಧ್ಯಾ ನಾಯಕಿಯರಾಗಿ ಮಿಂಚಿದ್ದಾರೆ. ಕಿರಣ್ ರಾಜ್ ಖಡಕ್ ಲುಕ್, ಆಕ್ಷನ್ ಧಮಾಕ ಟ್ರೈಲರ್‌ನಲ್ಲಿ ಗಮನ ಸೆಳೆದಿದೆ.
3. ವಿಕಾಸ ಪರ್ವ, ಕಲ್ಜಿಗ
'ಕಾಲಾಪತ್ಥರ್' ಹಾಗೂ 'ರಾನಿ' ಚಿತ್ರಗಳ ಜೊತೆಗೆ 'ವಿಕಾಸಪರ್ವ' ಹಾಗೂ 'ಕಲ್ಜಿಗ' ಎನ್ನುವ ಮತ್ತೆರಡು ಚಿತ್ರಗಳು ಶುಕ್ರವಾರ ತೆರೆಗೆ ಬರ್ತಿವೆ. ಸ್ವಾಮಿ ಕೊರಗಜ್ಜ ದೈವದ ಕಾರ್ಣಿಕದ ಕಥೆ ಇರುವ 'ಕಲ್ಜಿಗ' ಚಿತ್ರಕ್ಕೆ ಸುಮನ್ ಸುವರ್ಣ ಆಕ್ಷನ್ ಕಟ್ ಹೇಳಿದ್ದಾರೆ.
ಮಲಯಾಳಂನ 'ಎ.ಆರ್.ಎಂ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ಜಿತಿನ್ ಲಾಲ್ ನಿರ್ದೇಶನದ ಚಿತ್ರದಲ್ಲಿ ಟೊವಿನೊ ಥಾಮಸ್, ಕೃತಿ ಶೆಟ್ಟಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಕನ್ನಡಕ್ಕೆ ಡಬ್ ಆಗಿರುವ ಈ ಚಿತ್ರವನ್ನು ಹೊಂಬಾಳೆ ಸಂಸ್ಥೆ ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದೆ.


Click it and Unblock the Notifications











