»   » ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳು ಯಾವುದು?

ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರಗಳು ಯಾವುದು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈ ವಾರ ವಿಭಿನ್ನ, ವಿಶೇಷವಾದ 4 ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಲವ್, ಆಕ್ಷನ್, ಸಸ್ಪೆನ್ಸ್ ಥ್ರಿಲ್ಲರ್, ಹೀಗೆ ಎಲ್ಲ ರೀತಿಯ ಅಂಶಗಳನ್ನ ಹೊಂದಿರುವ ಚಿತ್ರಗಳು ಪ್ರೇಕ್ಷಕರನ್ನ ರಂಜಿಸಲು ಬರುತ್ತಿದೆ.

ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಈ ಸಿನಿಮಾಗಳು ಕನ್ನಡ ಅಭಿಮಾನಿಗಳ ಗಮನ ಸೆಳೆದಿದೆ.

ಹಾಗಿದ್ರೆ, ಈ ವಾರ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿರುವ 4 ಚಿತ್ರಗಳು ಯಾವುದು? ಆ ಚಿತ್ರಗಳ ವಿಶೇಷತೆ ಏನು ಎಂಬುದು ಮುಂದೆ ನೀಡಲಾಗಿದೆ. ಮುಂದೆ ಓದಿ.....

ಚಿತ್ರ: ಒನ್ಸ್ ಮೋರ್ ಕೌರವ

ನಿರ್ದೇಶಕ: ಮಹೇಂದರ್
ಕಲಾವಿದರು: ನರೇಶ್ ಗೌಡ, ಅನುಷಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಅಭಿನಯ
ತಾಂತ್ರಿಕ ತಂಡ: ಶ್ರೀಧರ್ ವಿ ಸಂಭ್ರಮ್ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ
ಚಿತ್ರದ ವಿಶೇಷ: ಸುಮಾರು 19 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಕೌರವ' ಚಿತ್ರವನ್ನ ನೆನಪಿಸುತ್ತಿದೆ 'ಒನ್ಸ್ ಮೋರ್ ಕೌರವ'. ಹಳ್ಳಿ ಸೊಗಡಿನ ಜೊತೆ ಇತ್ತೀಚಿನ ಟ್ರೆಂಡ್ ಗೆ ತಕ್ಕ ಸಿನಿಮಾ.

ಚಿತ್ರ: ಹಾಲು-ತುಪ್ಪ

ನಿರ್ದೇಶಕ: ಶಶಾಂಕ ರಾಜ್
ಕಲಾವಿದರು: 'ತಿಥಿ' ಖ್ಯಾತಿಯ ಸೆಂಚುರಿಗೌಡ, ಗಡ್ಡಪ್ಪ, ಪವನ್ ಸೂರ್ಯ, ಸಂಹಿತಾ ವಿನ್ಯ ಮತ್ತು ಇತರರು
ತಾಂತ್ರಿಕ ತಂಡ: ಆರ್.ವಿ.ನಾಗೇಶ್ವರರಾವ್ ಛಾಯಾಗ್ರಹಣ, ಇಂದ್ರಸೇನಾ ಸಂಗೀತ
ಚಿತ್ರದ ವಿಶೇಷ: ಗಡ್ಡಪ್ಪ ಮತ್ತು ಸೆಂಚುರಿಗೌಡ ಕಾಂಬಿನೇಷನ್. ಕಾಮಿಡಿ ಎಂಟರ್ ಟೈನ್ ಮೆಂಟ್ ಮನರಂಜನೆ

ಚಿತ್ರ: ಜಾಲಿ ಬಾರು ಪೋಲಿ ಹುಡುಗರು

ನಿರ್ದೇಶಕ: ಶ್ರೀಧರ್ (ಕಾರಂಜಿ ಸಿನಿಮಾ)
ಕಲಾವಿದರು: ಮದರಂಗಿ ಕೃಷ್ಣ, ಚಿಕ್ಕಣ್ಣ, ಮಾನಸಿ, ಜಹಾಂಗೀರ್, ವೀಣಾಸುಂದರ್,
ಮೈಕೋ ನಾಗರಾಜ್ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ.
ತಾಂತ್ರಿಕ ತಂಡ: ವೀರಸಮರ್ಥ್ ಸಂಗೀತ ಸಂಯೋಜನೆ, ವಿಷ್ಣುವರ್ಧನ್ ಛಾಯಾಗ್ರಹಣ
ಚಿತ್ರದ ವಿಶೇಷ: ಮದರಂಗಿ ಕೃಷ್ಣ ನಾಯಕ ನಟ. ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾ

ಚಿತ್ರ; ನಿಶ್ಯಬ್ದ-೨

ನಿರ್ದೇಶಕ: ದೇವರಾಜ್‌ ಕುಮಾರ್ (ಡೇಂಜರ್ ಜೋನ್ ಸಿನಿಮಾ)
ಕಲಾವಿದರು: ರೂಪ್ ಶೆಟ್ಟಿ, ಆರಾಧ್ಯ ಶೆಟ್ಟಿ, ಅವಿನಾಶ್, ಪೆಟ್ರೋಲ್ ಪ್ರಸನ್ನ, ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.
ತಾಂತ್ರಿಕ ತಂಡ: ವೀನಸ್ ಮೂರ್ತಿ ಅವರ ಛಾಯಾಗ್ರಹಣ, ಸತೀಶ್ ಆರ್ಯನ್ ಸಂಗೀತ
ಚಿತ್ರದ ವಿಶೇಷ: ಡೇಂಜರ್ ಜೋನ್ ರೀತಿಯಲ್ಲಿ ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ ಇದಾಗಿರುತ್ತೆ ಎನ್ನುವ ನಿರೀಕ್ಷೆ.

English summary
4 Kannada Movies are Releasing on this week (November 3rd).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada