ವಿನೋದ್ ರಾಜ್ ಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

Vinodraj Leelavathi
ಹಿರಿಯ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್ ಗೆ ಹೃದಯಾಘಾತವಾಗಿದೆ. ಎರಡು ದಿನಗಳ ಹಿಂದೆ ಲೀಲಾವತಿ ಹಾಗೂ ವಿನೋದ್ ರಾಜ್ ಇಬ್ಬರೂ ಬೇಗೂರಿಗೆ ಹೋಗಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಮಾರ್ಗಮಧ್ಯದಲ್ಲಿ ತೀರಾ ಬಳಲಿಕೆ ಬಂದು "ಅಮ್ಮಾ, ನಂಗೆ ತುಂಬಾ ಸುಸ್ತಾಗ್ತಿದೆ, ಡ್ರೈವ್ ಮಾಡಲು ಆಗುತ್ತಿಲ್ಲ" ಎಂದಿದ್ದಾರೆ. ರೆಸ್ಟ್ ತೆಗೆದುಕೊಂಡರೆ ಸರಿ ಹೋಗುತ್ತೆ ಎಂಬ ಲೀಲಾವತಿಯವರ ಲೆಕ್ಕಾಚಾರ ತಪ್ಪಿದೆ.

ಸ್ವಲ್ಪ ಹೊತ್ತಲ್ಲೇ ವಿನೋದ್ ರಾಜ್ ತಲೆತಿರುಗಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿ ಈಗ ಎಂ ಎಸ್ ರಾಮಯ್ಯ ಆಸ್ಪತ್ರೆಯ ತುರ್ತುನಿಘಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗಿದೆ. ತಾಯಿ ಲೀಲಾವತಿಯವರು ಮಗನಿಗೆ ಹುಶಾರಾದರೆ ಸಾಕು ಎನ್ನುತ್ತಾ ಕಣ್ಣೀರಿನ ಕೋಡಿಯನ್ನೇ ಹರಿಸುತ್ತಿದ್ದಾರೆ.

ಸ್ವಲ್ಪ ದಿನಗಳ ಹಿಂದೆ ತಮ್ಮ ತೋಟಕ್ಕೆ ಬೆಂಕಿ ಬಿದ್ದು ನಷ್ಟವಾದಾಗಿನಿಂದಲೂ ವಿನೋದ್ ರಾಜ್ ತುಂಬಾ ಭಾವುಕರಾಗಿಯೇ ಇರುತ್ತಿದ್ದರಂತೆ. ಆ ಶಾಕ್ ನಿಂದ ವಿನೋದ್ ಸಾಕಷ್ಟು ಜರ್ಜರಿತರಾಗಿಯೇ ಇದ್ದರು ಎಂಬುದು ಅವರ ಆಪ್ತರು ನೀಡುವ ಸುದ್ದಿ. ಈ ಕನ್ನಡದ ಕಂದ ವಿನೋದ್ ರಾಜ್ ಬೇಗ ಗುಣಮುಖರಾಗಲಿ ಎಂಬುದು ಲೀಲಾವತಿ, ವಿನೋದ್ ರಾಜ್ ಅಭಿಮಾನಿಗಳು ಹಾಗೂ ಎಲ್ಲರ ಹಾರೈಕೆಯಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada actor Vinod Raj suffers heart attack, admitted to MS Ramaiah Institute #Cardiology.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X