»   » 'ನನ್ನ ನಿನ್ನ ಪ್ರೇಮಕಥೆ'ಯಲ್ಲಿ ಉಪ್ಪಿ ಮತ್ತು ಪುನೀತ್ ರ ಕಮಾಲ್

'ನನ್ನ ನಿನ್ನ ಪ್ರೇಮಕಥೆ'ಯಲ್ಲಿ ಉಪ್ಪಿ ಮತ್ತು ಪುನೀತ್ ರ ಕಮಾಲ್

Posted By:
Subscribe to Filmibeat Kannada

ನಟ ವಿಜಯ ರಾಘವೇಂದ್ರ ಮತ್ತು ನಟಿ ನಿಧಿ ಸುಬ್ಬಯ್ಯ ಅವರು ಒಂದಾಗಿ ಕಾಣಿಸಿಕೊಂಡಿರುವ 'ನನ್ನ ನಿನ್ನ ಪ್ರೇಮ ಕಥೆ' ಸಾಕಷ್ಟು ಸುದ್ದಿ ಮಾಡುತ್ತಿದೆ. ನಿರ್ದೇಶಕ ಶಿವು ಜಮಖಂಡಿ ನಿರ್ದೇಶನ ಮಾಡಿರುವ ಈ ಸಿನಿಮಾ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಅಂದಹಾಗೆ ನಟ ವಿಜಯ ರಾಘವೇಂದ್ರ ಹಾಗೂ ನಟಿ ನಿಧಿ ಸುಬ್ಬಯ್ಯ ಸೇರಿದಂತೆ ಸ್ಯಾಂಡಲ್ ವುಡ್ ನ ಇನ್ನು ಮೂವರು ಸ್ಟಾರ್ ನಟರು ಈ ಚಿತ್ರದ ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದಾರೆ.['ನನ್ನ ನಿನ್ನ ಪ್ರೇಮಕಥೆ'ಗೆ ಪ್ರೇಮ ಪತ್ರ ಬರೆಯಿರಿ ಲಕ್ಷ ಬಹುಮಾನ ಗೆಲ್ಲಿ]

5 Actors one album for Kannada Movie 'Nanna Ninna Prema Kathe'

ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಅವರು ಚಿತ್ರದ ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, ಎಲ್ಲಾ ಹಾಡುಗಳಿಗೂ ನಿರ್ದೇಶಕ ಶಿವು ಜಮಖಂಡಿ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ನಟರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಚಿತ್ರದ ಹಾಡುಗಳನ್ನು ಹಾಡಿಸಲಾಗಿದೆ.

5 Actors one album for Kannada Movie 'Nanna Ninna Prema Kathe'

ಇಡೀ ಚಿತ್ರರಂಗದ ಕೊಡುಗೆ ಬಗ್ಗೆ ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ಸೇರಿದಂತೆ ತಂತ್ರಜ್ಞರ ಕುರಿತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಾಡೊಂದನ್ನು ಹಾಡಿದ್ದಾರೆ.

5 Actors one album for Kannada Movie 'Nanna Ninna Prema Kathe'

ನಟಿ ನಿಧಿ ಸುಬ್ಬಯ್ಯ ಮತ್ತು ನಟ ವಿಜಯ ರಾಘವೇಂದ್ರ ಅವರು ರೋಮ್ಯಾಂಟಿಕ್ ಹಾಡುಗಳನ್ನು ಹಾಡಿದರೆ, ರಿಯಲ್ ಸ್ಟಾರ್ ಉಪೇಂದ್ರ ಅವರು ಉತ್ತರ ಕರ್ನಾಟಕದ ಶೈಲಿಯಲ್ಲಿ ಹಾಡನ್ನು ಹಾಡಿದ್ದಾರೆ.

English summary
Director Shivu Jamakhandi of Nanna Ninna Prem Kathe has managed to rope in five actors to sing songs for his film. The lead pair Actor Vijay Raghavendra and Actress Nidhi Subaiah have sung a song each and so have Actor Puneeth Rajkumar, Actor Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada