For Quick Alerts
  ALLOW NOTIFICATIONS  
  For Daily Alerts

  ಚಾಕೋಲೇಟ್ ಹೀರೋ ಜೊತೆ ರಮ್ಯಾ ಹೊಸ ಚಿತ್ರ

  By Rajendra
  |

  'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲಿ ದೇವಕನ್ಯೆಯಾಗಿ ಕಾಣಿಸಿಕೊಳ್ಳುತ್ತಿರುವ ರಮ್ಯಾ ಈಗ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಬಾರಿ ಚಾಕೋಲೇಟ್ ಹೀರೋ ದಿಗಂತ್ ಜೊತೆ ಅಭಿನಯಿಸಲಿದ್ದಾರೆ ರಮ್ಯಾ. 'ಮೀರಾ ಮಾಧವ ರಾಘವ' ಬಳಿಕ ದಿಗಂತ್ ಜೊತೆಗಿನ ರಮ್ಯಾರ ಎರಡನೇ ಚಿತ್ರ ಇದು.

  ರಮ್ಯಾ ಅಭಿನಯಿಸಲಿರುವ ನೂತನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವವರು ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ. ಈ ಚಿತ್ರ ಜೂನ್‌ನಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ಚಿತ್ರದ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

  ಏತನ್ಮಧ್ಯೆ ರಮ್ಯಾಗೆ ಮತ್ತೊಂದು ಚಿತ್ರದಲ್ಲಿ ಅಭಿನಯಿಸುವ ಆಫರ್ ಬಂದಿದೆ. 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಖಾಮ್' ನಿರ್ದೇಶಿಸಿದ್ದ ಪ್ರೀತಂ ಗುಬ್ಬಿ ಈಗ 'ಜಾನಿ 2' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೂ ದುನಿಯಾ ವಿಜಯ್ ನಾಯಕ. ಆದರೆ ರಮ್ಯಾ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. (ಏಜೆನ್ಸೀಸ್)

  English summary
  Kataari Veera Sura Sundaraangi actress Ramya for paired opposite chacolate hero Diganth for second time. Erarlier the deo acted in Meera Madhava Raghava. The film to be directed by Telugu renowned director Kodi Ramakrishna. The untitled movie all set to launch in June.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X