»   » ಕನ್ನಡಚಿತ್ರ ನೋಡಲು ಸಲ್ಮಾನ್ ಬರುತ್ತಿದ್ದಾರೆ, ಸೈಡ್ ಪ್ಲೀಸ್..

ಕನ್ನಡಚಿತ್ರ ನೋಡಲು ಸಲ್ಮಾನ್ ಬರುತ್ತಿದ್ದಾರೆ, ಸೈಡ್ ಪ್ಲೀಸ್..

Posted By:
Subscribe to Filmibeat Kannada
Salman Khan
ಬಾಲಿವುಡ್ ಹ್ಯಾಂಡ್ ಸಮ್ ಬ್ಯಾಚುಲರ್ ಸಲ್ಮಾನ್ ಖಾನ್ ಕರ್ನಾಟಕಕ್ಕೆ ಸದ್ಯದಲ್ಲಿಯೇ ಬರುತ್ತಿದ್ದಾರೆ. ನಮ್ಮ ಬಾಲಿವುಡ್ ಬ್ಯಾಡ್ ಬಾಯ್ ಸಲ್ಲೂ ಮಿಯಾಗೆ ಕನ್ನಡ, ಕರ್ನಾಟಕ ಪ್ಯಾರ್ಗೆ ಆಗ್ಬಿಟ್ಟೈತೆ. ಕಾರಣ, ಇದೀಗ ಕೊಲವೆರಿ ಹಾಡಿನ ಜನಪ್ರಿಯತೆಯನ್ನೂ ಮೀರಿಸಲು ಹೊರಟಿರುವ 'ಗೋವಿಂದಾಯ ನಮಃ' ಚಿತ್ರದ 'ಪ್ಯಾರ್ಗೆ ಆಗ್ಬಿಟ್ಟೈತೆ' ಹಾಡು ಸಲ್ಮಾನ್ ಅವರಿಗೂ ಕೂಡ ತುಂಬಾ ಇಷ್ಟವಾಗಿದೆಯಂತೆ.

ಗೋವಿಂದಾಯ ನಮಃ ಚಿತ್ರ ಇದೇ ತಿಂಗಳು ಮಾರ್ಚ್ 30ರಂದು ಕರ್ನಾಟಕದಾದ್ಯಂತ ತೆರೆಗೆ ಬರಲಿದೆ. ಕೋಮಲ್ ನಾಯಕತ್ವದ ಈ ಚಿತ್ರ ಈಗಾಗಲೇ ತೆರೆಗೆ ಬರಬೇಕಿತ್ತು. ಆದರೆ ಚಿತ್ರಮಂದಿರದ ಸಮಸ್ಯೆಯಿಂದ ಲೇಟಾಗಿದೆ. ಈ ಚಿತ್ರ ಹಿಂದಿಗೆ ರೀಮೇಕ್ ಆಗಲಿದೆ ಎಂಬುದು ಈಗಾಗಲೇ ಹಬ್ಬಿ ಹಳೆಯದಾಗಿರುವ ಸುದ್ದಿ. ಇದೀಗ ಸಲ್ಮಾನ್ ಖಾನ್ ಬರುತ್ತಿರುವ ಹೊಸ ಸುದ್ದಿ ಕನ್ನಡ ಸಿನಿಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದೆ.

ಕನ್ನಡದ ಚಿತ್ರವೊಂದು ಬಿಡುಗಡೆಗೆ ಮೊದಲೇ ಒಂದೇ ಒಂದು ಹಾಡಿನ ಮೂಲಕ ಈ ಪರಿ ಸದ್ದು, ಸುದ್ದಿ ಮಾಡುತ್ತಿರುವದು ಇದೇ ಮೊದಲು. ಕನ್ನಡ ಸಿನಿಮಾಗಳೆಲ್ಲಾ ಬೇರೆ ಭಾಷೆಯ ರೀಮೇಕ್ ಗಳು ಎನ್ನುವ ಕಾಲ ಮರೆಯಾಗಿ ಕನ್ನಡ ಚಿತ್ರಗಳು ಬಾಲಿವುಡ್ ಅಂಗಳದಲ್ಲಿ ರೀಮೇಕ್ ಆಗುವ ಕಾಲ ಬಂದಿದೆ. ಅದಕ್ಕೆ ಖುಷಿಪಡದ ಕನ್ನಡಿಗರು ಯಾರಿದ್ದಾರೆ? ಸಲ್ಲು ಮಿಯಾ ಕರ್ನಾಟಕಕ್ಕೆ ಗೋವಿಂದಾಯ ನಮಃ ಚಿತ್ರ ನೋಡಲು ಬರುತ್ತಿರುವ ಸುದ್ದಿ ಕೇಳಿ ಸಿನಿಅಭಿಮಾನಿಗಳು 'ಸಲ್ಲೂ'ಗೂ ನಮೋ ನಮಃ ಎನ್ನುತ್ತಿದ್ದಾರೆಂದು ಗಾಂಧಿನಗರದಲ್ಲಿ ಗುಲ್ಲೆದ್ದಿದೆ. (ಒನ್ ಇಂಡಿಯಾ ಕನ್ನಡ)

English summary
Bollywood Actor Salman Khan comes Bangalore to watch Kannada Movie Govindaya Namaha. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X