»   » ಬೆಂಗಳೂರು ಚಿತ್ರೋತ್ಸವದಲ್ಲಿ ದರ್ಶನ್, ಸುದೀಪ್, ಪುನೀತ್ ಚಿತ್ರಗಳು!

ಬೆಂಗಳೂರು ಚಿತ್ರೋತ್ಸವದಲ್ಲಿ ದರ್ಶನ್, ಸುದೀಪ್, ಪುನೀತ್ ಚಿತ್ರಗಳು!

Posted By:
Subscribe to Filmibeat Kannada

ಅಂತರಾಷ್ಟ್ರೀಯ ಚಿತ್ರೋತ್ಸವ ಅಂದ್ರೆ, ಅಲ್ಲಿ ಬರಿ ಕಲಾತ್ಮಕ ಚಿತ್ರಗಳು ಮಾತ್ರ ಪ್ರದರ್ಶನವಾಗುತ್ತೆ ಎಂಬುದು ಸುಳ್ಳು. ಪ್ರೇಕ್ಷಕರನ್ನ ರಂಜಿಸಿ, ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ಮನರಂಜನ ಚಿತ್ರಗಳು ಪ್ರದರ್ಶನವಾಗುತ್ತೆ ಎಂಬುದಕ್ಕೆ ಈ ಬಾರಿಯ ಬೆಂಗಳೂರು ಚಿತ್ರೋತ್ಸವ ತಾಜಾ ನಿದರ್ಶನ.

ಫೆಬ್ರವರಿ 2ರಿಂದ ನಡೆಯಲಿರುವ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಮಾರು 40 ಕನ್ನಡ ಸಿನಿಮಾಗಳು ಪ್ರದರ್ಶನವಾಗುತ್ತಿದೆ. ಇವುಗಳಲ್ಲಿ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಗಣೇಶ್ ಚಿತ್ರಗಳು ಸೇರಿವೆ ಎನ್ನುವುದು ವಿಶೇಷ.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?]

ಹೀಗಾಗಿ, ಈ ಬಾರಿಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಮನರಂಜನೆ ನೀಡಲು ಕನ್ನಡದ ಟಾಪ್ ಸ್ಟಾರ್ ಗಳ, 5 ಕಮರ್ಷಿಯಲ್ ಚಿತ್ರಗಳು ಎಂಟ್ರಿ ಕೊಟ್ಟಿವೆ. ಯಾವ ಯಾವ ಚಿತ್ರಗಳು ಎಂಬ ಮಾಹಿತಿ ಇಲ್ಲಿದೆ....

ದರ್ಶನ್ 'ಜಗ್ಗುದಾದ'

ಈ ವರ್ಷ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ ಚಿತ್ರ 'ಜಗ್ಗುದಾದ'. ದರ್ಶನ್ ಗೆ ಚಿತ್ರದಲ್ಲಿ ದೀಕ್ಷಾ ಸೇಠ್, ಸೃಜನ್ ಲೋಕೇಶ್, ರವಿಶಂಕರ್ ಕಾಣಿಸಿಕೊಂಡಿದ್ದ ಈ ಚಿತ್ರಕ್ಕೆ ರಾಘವೇಂದ್ರ ಹೆಗಡೆ ಆಕ್ಷನ್ ಕಟ್ ಹೇಳಿದ್ದರು. ಡಾನ್ ಪಾತ್ರದಲ್ಲಿ ಅಬ್ಬರಿಸಿದ್ದ ದರ್ಶನ್, ಔಟ್ ಅಂಡ್ ಔಟ್ ಕಾಮಿಡಿ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದರು. ಹೀಗಾಗಿ, ಫಿಲ್ಮ್ ಫೆಸ್ಟಿವಲ್ ನಲ್ಲೂ ದಾದಾ ದರ್ಬಾರ್ ನಡೆಯಲಿದೆ.

ಕಿಚ್ಚನ 'ಕೋಟಿಗೊಬ್ಬ-2'

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ವರ್ಷದ ಬಿಗ್ಗೇಸ್ಟ್ ಹಿಟ್ ಸಿನಿಮಾ. ಕಿಚ್ಚನ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದ 'ಕೋಟಿಗೊಬ್ಬ-2', ಸೂಪರ್ ಸೆಂಚುರಿ ಬಾರಿಸಿತ್ತು. ಇದೀಗ ಈ ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದೆ. ಕೆ ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರ, ಕನ್ನಡದಲ್ಲಿ ಮಾತ್ರವಲ್ಲದೇ, ತೆಲುಗು ಹಾಗೂ ತಮಿಳಿನಲ್ಲೂ ತೆರೆಕಂಡಿತ್ತು. ಸುದೀಪ್ ಜೊತೆಯಲ್ಲಿ ನಿತ್ಯಾ ಮೆನನ್, ಚಿಕ್ಕಣ್ಣ, ರವಿಶಂಕರ್ ಸೇರಿದಂತೆ ಹಲವರು ಅಭಿನಯಿಸಿದ್ದರು.

ಶಿವಣ್ಣನ 'ಶಿವಲಿಂಗ'

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಇದೇ ವರ್ಷ ರಿಲೀಸ್ ಆಗಿತ್ತು. ಪಿ.ವಾಸು ನಿರ್ದೇಶನದ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲಿಂಗ್ ಕಥೆಯನ್ನ ಹೊಂದಿತ್ತು. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿ, ಪ್ರೇಕ್ಷಕರನ್ನ ರಂಜಿಸುವಲ್ಲಿ ಸಕ್ಸಸ್ ಕಂಡಿತು. ಇದರ ಪರಿಣಾಮ, 'ಶಿವಲಿಂಗ' ಬೆಂಗಳೂರು ಸಿನಿಮೋತ್ಸವದಲ್ಲಿ ಪಾಲ್ಗೊಂಡಿದೆ.

ಪುನೀತ್ 'ದೊಡ್ಮನೆ ಹುಡ್ಗ'

ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ವರ್ಷದ ಉತ್ತಮ ಎಂಟರ್ ಟೈನ್ ಮೆಂಟ್ ಸಿನಿಮಾ. ದುನಿಯಾ ಸೂರಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅಂಬರೀಶ್, ರಾಧಿಕಾ ಪಂಡಿತ್, ರವಿಶಂಕರ್, ಸುಮಲತಾ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವರು ತೆರೆ ಹಂಚಿಕೊಂಡಿದ್ದರು. ಹೀಗಾಗಿ ಈ ಚಿತ್ರವೂ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನವಾಗುತ್ತಿದೆ.

ಗಣೇಶ್ 'ಮುಂಗಾರು ಮಳೆ-2'

ಗಣೇಶ್ ಅಭಿನಯದ 'ಮುಂಗಾರು ಮಳೆ 2' ಚಿತ್ರವೂ ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ. ಶಶಾಂಕ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ನೇಹಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

'ಫೈವ್ ಸ್ಟಾರ್'ಗಳ ಪಂಚ ಚಿತ್ರ !

ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಗಣೇಶ್ ಚಿತ್ರಗಳಿಂದ ಈ ಬಾರಿಯ ಅಂತರಾಷ್ಟ್ರೀಯ ಚಿತ್ರೋತ್ಸವ ಮತ್ತಷ್ಟು ಮನರಂಜನೆಯಿಂದ ಸಂಭ್ರಮಿಸಲಿದೆ.

English summary
9th Bengaluru International Film Festival (BIFFES) To be held on from February 2. Here is the complete details of Kannada Movies Participation of 9th edition of the Bengaluru International Film Festival.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada