For Quick Alerts
  ALLOW NOTIFICATIONS  
  For Daily Alerts

  ಫಸ್ಟ್ ಡೇ ಗಳಿಕೆಯಲ್ಲಿ ದರ್ಶನ್ 'ಚಿಂಗಾರಿ' ದಾಖಲೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವ ಹಾಗೂ ಎ ಹರ್ಷ ನಿರ್ದೇಶನದ 'ಚಿಂಗಾರಿ' ಚಿತ್ರ ರಾಜ್ಯದಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನದ ಗಳಿಕೆಯಲ್ಲಿ ಕನ್ನಡ ಚಿತ್ರರಂಗದಲ್ಲೇ ದಾಖಲೆ ಸ್ಥಾಪಿಸಿರುವ ಈ ಚಿತ್ರ ನಂತರ ಕೂಡ ರಾಜ್ಯದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು 100% ಗಳಿಕೆ ದಾಖಲಿಸುತ್ತಿದೆ.

  ಚಿತ್ರ ಬಿಡುಗಡೆಯಾಗಿರುವ ಥಿಯೇಟರ್ ಸಂಖ್ಯೆಯಲ್ಲಿಯೂ ಚಿಂಗಾರಿ ದಾಖಲೆ ನಿರ್ಮಿಸಿದೆ. ಕರ್ನಾಟಕದಾದ್ಯಂತ ಒಟ್ಟೂ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಚಿಂಗಾರಿ. ಪ್ರೇಕ್ಷಕರ ಹಾಗೂ ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿರುವ ಈ ಚಿತ್ರ ಇನ್ನೆಷ್ಟು ದಾಖಲೆಗಳನ್ನು ಮುರಿಯಲಿದೆಯೋ? ಮೇಕಿಂಗ್ ಹಾಗೂ ಗಳಿಕೆ ಎರಡರಲ್ಲೂ ಚೆನ್ನಾಗಿರುವ ಚಿಂಗಾರಿ ಕನ್ನಡ ಚಿತ್ರರಂಗಕ್ಕೆ ಯಶಸ್ಸಿನ ಟಾನಿಕ್ ಆಗಲಿರುವ ಶುಭ ಸೂಚನೆ ದೊರೆತಿದೆ.

  ಸಾರಥಿ ಯಶಸ್ಸಿನಿಂದ ಈಗಾಗಲೇ 'ಬಾಕ್ಸ್ ಆಫೀಸ್ ಸುಲ್ತಾನ್' ಎನಿಸಿರುವ ದರ್ಶನ್, ಚಿಂಗಾರಿಯ ಮೂಲಕ ಇನ್ನೂ ಎತ್ತರಕ್ಕೆ ಏರಲಿದ್ದಾರೆ. ಬೆಸ್ಟ್ ಕೋರಿಯೋಗ್ರಾಫರ್ ಎಂದು ಹೆಸರು ಪಡೆದಿದ್ದ ಎ ಹರ್ಷ, ಚಿಂಗಾರಿ ಮೂಲಕ ಯಶಸ್ವೀ ನಿರ್ದೇಶಕ ಪಟ್ಟ ಗಿಟ್ಟಿಸಿದ್ದಾರೆ. ನಿರ್ಮಾಪಕರಿಗೆ ಈಗಾಗಲೇ ಬಹಳಷ್ಟು ಲಾಭ ತಂದುಕೊಟ್ಟಿರುವ ಚಿಂಗಾರಿ, ವಿತರಕರ ಜೇಬು ಭರ್ತಿಮಾಡುವುದು ಪಕ್ಕಾ ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Challenging Star Darshan movie Chingari scored 100% collection all over Karnataka. Its 1st Day Collection became Record in Sandalwood. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X