'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!
Recommended Video

'ಕೆಜಿಎಫ್' ಎಂಬ ಒಂದು ಸಿನಿಮಾ ಇಡೀ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದೆ ಅಂದ್ರೆ ತಪ್ಪಾಗಲಾರದು. ಇದಕ್ಕೂ ಮುಂಚೆ ಇಂತಹ ಪ್ರಯತ್ನಗಳು ಸಾಕಾಷ್ಟಾಗಿದೆ. ಆದ್ರೆ, 'ಕೆಜಿಎಫ್' ಕಂಡ ಯಶಸ್ಸು ಮತ್ತು ಆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಯಾವ ಕನ್ನಡ ಸಿನಿಮಾಗೂ ಸಿಕ್ಕಿರಲಿಲ್ಲ ಎನ್ನುವುದು ಸತ್ಯ.
'ಕೆಜಿಎಫ್' ಸಿನಿಮಾ ಇಷ್ಟು ದೊಡ್ಡ ಸಕ್ಸಸ್ ಬಳಿಕ ಈಗ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಇಷ್ಟ ವರ್ಷಗಳಿಂದ ಏನೂ ಆಗಲ್ಲ ಅಂದುಕೊಂಡಿದ್ದರೋ ಅದೆಲ್ಲಾ ಆಗುತ್ತೆ ಎಂದು ಮುನ್ನುಗ್ಗುವ ಧೈರ್ಯ ಮಾಡ್ತಿದ್ದಾರೆ.
ಇದರ ಪರಿಣಾಮ ಕನ್ನಡ ಸಿನಿಮಾಗಳು ಹಾಗೂ ಕನ್ನಡ ಕಲಾವಿದ, ತಂತ್ರಜ್ಞರಲ್ಲಿ ಹೊಸ ಜೋಶ್ ಕಂಡಿದೆ. ಸದ್ಯಕ್ಕೆ 'ಕೆಜಿಎಫ್' ಹಿಟ್ ಆದ್ಮೇಲೆ ಕನ್ನಡ ಚಿತ್ರರಂಗದಲ್ಲಿ ಕೆಲವು ಚೇಂಜಸ್ ಆಗ್ತಿವೆ. ಅದು ಏನು ಅಂತ ಮುಂದೆ ಓದಿ.....

'ಪ್ಯಾನ್ ಇಂಡಿಯಾ' ಕಾನ್ಸೆಪ್ಟ್ ಹೆಚ್ಚಾಯ್ತು
ಸದ್ಯದ ಮಟ್ಟಿಗೆ ಯಾವ ಕನ್ನಡ ಸಿನಿಮಾನೂ ಪ್ಯಾನ್ ಇಂಡಿಯಾ ಫಾರ್ಮೆಟ್ ನಲ್ಲಿ ತೆರೆಕಂಡಿಲ್ಲ. ಐದು ಭಾಷೆಯಲ್ಲಿ 'ಕೆಜಿಎಫ್' ದೊಡ್ಡ ರಿಲೀಸ್ ಆಗಿತ್ತು. ಇದೀಗ, ಇದೇ ಮಾರ್ಗವನ್ನ ಅನುಸರಿಸಲು ಇತರೆ ಸಿನಿಮಾಗಳು ಸಜ್ಜಾಗ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಐದಾರು ಭಾಷೆಗಳಲ್ಲಿ ತಮ್ಮ ಚಿತ್ರಗಳನ್ನ ಬಿಡುಗಡೆ ಮಾಡಲು ತಯಾರಾಗ್ತಿದ್ದಾರೆ.

ಕನ್ನಡ ಚಿತ್ರಗಳಿಗೆ ಡಿಮ್ಯಾಂಡ್ ಜಾಸ್ತಿ
ಮೊದಲು ಕನ್ನಡ ಸಿನಿಮಾವನ್ನ ಹೊರಗಡೆ ತೆಗೆದುಕೊಂಡು ಹೋಗಬೇಕಾದರೇ, ನಾವಾಗಿಯೇ ಅವರ ಬಳಿ ಹೋಗಿ ಟ್ರೈಲರ್, ವಿಶ್ಯೂಲ್ಸ್ ತೋರಿಸಿ ರಿಲೀಸ್ ಮಾಡಿ ಎಂದು ಕೇಳಬೇಕಿತ್ತು. ಕೆಜಿಎಫ್ ನಂತರ ಹೊರ ರಾಜ್ಯಗಳಲ್ಲಿ ಕನ್ನಡ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ನಮ್ಮ ಟ್ರೈಲರ್, ವಿಶ್ಯೂಲ್ಸ್ ನೋಡಿ ಅವರಾಗಿಯೇ ರಿಲೀಸ್ ಮಾಡಲು, ಡಬ್ ಮಾಡಲು ಮುಂದೆ ಬರ್ತಿದ್ದಾರೆ.

ಪರಭಾಷೆ ತಾರೆಗಳ ಗಮನ ಸೆಳೆತ
ಕನ್ನಡ ಚಿತ್ರದ ಟ್ರೈಲರ್, ಪೋಸ್ಟರ್ ಅಥವಾ ಹಾಡನ್ನ ಪರಭಾಷೆ ತಾರೆಗಳು ನೋಡಿದ್ರೆ ಸಾಕು, ಅದೇನೋ ದೊಡ್ಡ ಸಾಧನೆ ಅನ್ನೋತರ ಇತ್ತು. ಅವರು ಹೇಳುವ ಒಂದು ಮಾತಿಗೆ ದೊಡ್ಡ ಪ್ರಚಾರ ಸಿಕ್ತಿತ್ತು. ಇದೀಗ, ಎಲ್ಲಾ ಭಾಷೆಯ ಸ್ಟಾರ್ ನಟರು ನಮ್ಮ ಚಿತ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಬೆಸ್ಟ್ ಉದಾಹರಣೆ ಪೈಲ್ವಾನ್ ಟೀಸರ್ ಬಗ್ಗೆ ಸಲ್ಮಾನ್ ಖಾನ್ ನಿಂದ ಹಿಡಿದು, ಆರ್.ಜಿ.ವಿ, ಪೂರಿ ಜಗನ್ನಾಥ್ ಎಲ್ಲರೂ ಮಾತನಾಡಿದ್ದು.

ಪರಭಾಷೆ ಮಾಧ್ಯಮಗಳ ಗಮನ
ಸಾಮಾನ್ಯವಾಗಿ ಕನ್ನಡ ಮಾಧ್ಯಮಗಳಲ್ಲಿ ಪರಭಾಷೆಯ ಸಿನಮಾ ಬಗ್ಗೆಯೇ ಹೆಚ್ಚು ಸುದ್ದಿ ಮಾಡ್ತಾರೆ, ಆದ್ರೆ, ನಮ್ಮ ಸಿನಿಮಾಗಳ ಬಗ್ಗೆ ಬೇರೆ ಭಾಷೆಯವರು ಯಾರೂ ಸುದ್ದಿ ಮಾಡಲ್ಲ ಎಂಬ ಆರೋಪವಿದೆ. ಆದ್ರೀಗ, ಕಾಲ ಬದಲಾಗಿದೆ. ನಮ್ಮ ಕನ್ನಡ ಸಿನಿಮಾಗಳ ಬಗ್ಗೆ ಬೇರೆ ಭಾಷೆಯ ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಯಜಮಾನ ಸಿನಿಮಾ ಬಗ್ಗೆ ತೆಲುಗು ಮತ್ತು ತಮಿಳು ಸುದ್ದಿ ಪತ್ರಿಕೆಯಲ್ಲಿ ವರದಿಯಾಗಿದ್ದು.

ಡಬ್ಬಿಂಗ್ ಸಿನಿಮಾಗಳು ಹೆಚ್ಚಾಗ್ತಿದೆ
ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಡಬ್ಬಿಂಗ್ ಗೆ ವಿರೋಧ ಇತ್ತು. ಬಟ್, ಕೆಜಿಎಫ್ ದೊಡ್ಡ ಯಶಸ್ಸು ಕಂಡ ಮೇಲೆ ಬೇರೆ ಭಾಷೆಯ ಚಿತ್ರಗಳೂ ನಮ್ಮಲ್ಲಿ ಬರಬೇಕು ಎಂಬ ಬೇಡಿಕೆ ಮತ್ತು ಸ್ವಾಗತವೂ ಸಿಕ್ತಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಕೆಜಿಎಫ್ ಒಂದೇ ನೆರವಾಗಿದೆ ಅನ್ನೋದಕ್ಕಿಂತ ಈ ಕ್ಷಣಕ್ಕೆ ಇದೇ ಕಾರಣ ಎನ್ನಬಹುದು.


Click it and Unblock the Notifications











