ಈ ವಾರ 'ಐದು' ಸಿನಿಮಾ ರಿಲೀಸ್: ಶೀರ್ಷಿಕೆಯಿಂದಲೇ ಎಲ್ಲವೂ ಆಕರ್ಷಣೆ

ಈ ವಾರ ಐದು ಕನ್ನಡ ಸಿನಿಮಾಗಳು ತೆರೆಗೆ ಬರ್ತಿದೆ. ಎಲ್ಲವೂ ಶೀರ್ಷಿಕೆಯಿಂದಲೇ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಯಾವುದು ದೊಡ್ಡ ಸ್ಟಾರ್ ನಟರ ಸಿನಿಮಾ ಇಲ್ಲದಿದ್ದರೂ ಟ್ರೈಲರ್ ಗಳ ಮೂಲಕ ಜನರನ್ನ ಸೆಳೆಯುತ್ತಿದೆ.

ಇದೇ ವಾರ 'ನಡುವೆ ಅಂತರವಿರಲಿ'
ಆ ಚಿತ್ರಗಳ ಪೈಕಿ ಐಶಾನಿ ಶೆಟ್ಟಿ ಅಭಿನಯದ 'ನಡುವೆ ಅಂತರವಿರಲಿ' ಚಿತ್ರವೂ ಒಂದು. ಪ್ರಖ್ಯಾತ್ ಪರಮೇಶ್ ಮತ್ತು ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ರವೀನ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಿಮೆಚ್ಯೂರ್ ಪ್ರೇಮ ಕತೆ ಹೊಂದಿರುವ ನಡುವೆ ಅಂತರವಿರಲಿ ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಹೆಚ್ಚು ಸದ್ದು ಮಾಡಿದೆ.

5 Kannada movie are releasing on october 5th

ಈ ವಾರ 'A+' ಬರ್ತಿದೆ
ಪ್ರಭುಕುಮಾರ್ ನಿರ್ಮಿಸಿರುವ 'A+' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಜಯ್ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಆರ್.ಎಸ್.ಗಣೇಶ್ ನಾರಾಯಣನ್ ಸಂಗೀತ ನೀಡಿದ್ದಾರೆ. ಸಿದ್ದು, ಸಂಗೀತ, ಮಧುಸೂಧನ್, ಲಕ್ಷ್ಮೀ ಹೆಗ್ಗಡೆ, ಕೃಷ್ಣಮೂರ್ತಿ ನಾಡಿಗ್, ಪ್ರಶಾಂತ್ ಸಿದ್ದಿ, ಆಶಾರಾಣಿ, ನಾಗರಾಜ್, ಮುರಳಿ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ.

'ಆದಿ ಪುರಾಣ' ಇದೇ ಶುಕ್ರವಾರ
ಹೆಸರಾಂತ ಸಂಕಲನಕಾರ, ಕಿರು ಚಿತ್ರಗಳ ನಿರ್ದೇಶಕ ಮೋಹನ್ ಕಾಮಾಕ್ಷಿ ಅವರ ಪ್ರಥಮ ನಿರ್ದೇಶನದ ಚಿತ್ರ 'ಆದಿ ಪುರಾಣ'. ಆದಿ ಪುರಾಣ ಚಿತ್ರದಿಂದ ಶಷಾಂಕ್, ಅಹಲ್ಯ ಸುರೇಶ್ ಹಾಗೂ ಮೋಕ್ಷ ಕುಶಾಲ್ ಪರಿಚಯ ಸಹ ಆಗುತ್ತಿದ್ದಾರೆ. ಎಂ ಜಿ ಗುರುಪ್ರಸಾದ್ ಛಾಯಾಗ್ರಹಣ, ವಿಕ್ರಮ್ ವಸಿಷ್ಠ, ಚಂದನ ವಸಿಷ್ಠ ಹಾಗೂ ಸಿದ್ದಾರ್ತ್ ಕಾಮತ್ ಸಂಗೀತ ನೀಡಿದ್ದಾರೆ.

5 Kannada movie are releasing on october 5th

'ಸ್ನೇಹವೇ ಪ್ರೀತಿ' ಈ ವಾರ ತೆರೆಗೆ
ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ 'ಸ್ನೇಹವೇ ಪ್ರೀತಿ' ಸಿದ್ಧವಾಗಿದ್ದು, ಜಿ ಎಲ್ ಬಿ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಸೂರಜ್ ಗೌಡ ಈ ಚಿತ್ರದ ನಾಯಕನಾಗಿದ್ದು, ಸೋನಿಯ ಹಾಗೂ ಫರ್ಹಾ ಕಥಾ ನಾಯಕಿಯರು. ಇನ್ನುಳಿದಂತೆ ರವೀಂದ್ರ ತೇಜ, ಓಂ ಸಾಯಿ ಪ್ರಕಾಷ್, ಸಾಧು ಕೋಕಿಲ, ರಮೇಶ್ ಭಟ್, ಚಿತ್ರ ಶೆಣೈ, ಧನರಾಜ್ ಹಾಗೂ ಇತರರು ಕಾಣಿಸಿಕೊಂಡಿದ್ದಾರೆ.

5 Kannada movie are releasing on october 5th

ಈ ಎಲ್ಲಾ ಚಿತ್ರಗಳ ಜೊತೆ ರಾಮ್ ಚೇತನ್ ನಟನೆಯ ಖೊಟ್ಟಿಪೈಸೆ ಸಿನಿಮಾನೂ ತೆರೆಗೆ ಬರ್ತಿದೆ. ಕಿರಣ್ ಕುಮಾರ್ ಆರ್ ಕೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
kannada movie A+, naduve antaravirali, adi purana, snehave preethi, Khotti Paise movies are releasing on october 5th. A+,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X