For Quick Alerts
  ALLOW NOTIFICATIONS  
  For Daily Alerts

  ಗಾಂಧಿನಗರದ ಮೇನಕಾಕ್ಕೆ ಅಪ್ಪಳಿಸಲಿದೆ 'ಗವಿಪುರ'

  |

  ಕನ್ನಡ ಚಿತ್ರರಂಗ ಕಳೆದ ವರ್ಷದ ಅಂತ್ಯ ಹಾಗೂ ಈ ವರ್ಷದ ಆರಂಭದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿ ಹೊಸ ಬದಲಾವಣೆಯ ಗಾಳಿ ಹಾಗೂ ಬೆಳಕಿಗೆ ಕಾರಣವಾಗಿದೆ. ಸಾಕಷ್ಟಿ ನಿರೀಕ್ಷೆಯ ಚಿತ್ರವಾದ ಚಿಂಗಾರಿ ಬಿಡುಗಡೆಯಾಗಿ ಗಳಿಕೆಯಲ್ಲಿ ದಾಖಲೆಯತ್ತ ಸಾಗುತ್ತಿದೆ. ಇದೀಗ ನಿರೀಕ್ಷೆಗಳಿಲ್ಲದ ಹೊಸಬರ ಚಿತ್ರಗಳು ತೆರೆಗೆ ಬರಲು ಸಾಲುಸಾಲಾಗಿ ನಿಂತಿವೆ.

  ಈ ಸಾಲಿನಲ್ಲಿ ನಿಲ್ಲುವ ಚಿತ್ರಗಳಲ್ಲೊಂದು 'ಗವಿಪುರ'. ಸೂರಜ್ ಸಾಸ್ನೂರ್ ಹಾಗೂ ಸೌಜನ್ಯ ಹೊಸ ತಾರಾಗಣದ ಈ ಚಿತ್ರವನ್ನು ಮಾರಿಕಣ್ಣು ಕುಮಾರ್ ನಿರ್ದೇಶಿಸಿದ್ದಾರೆ. ಜಗನ್ನಾಥ್ ಹೆಗಡೆ (ಶಿರಸಿ) ನಿರ್ಮಾಣದ ಈ ಚಿತ್ರ ಸ್ವಲ್ಪವೂ ಸದ್ದುಗದ್ದಲವಿಲ್ಲದೇ ತೆರೆಗೆ ಬರುತ್ತಿದೆ.

  ಎ ನರಸಿಂಹ ಕಥೆಯನ್ನು ನಿರ್ದೇಶಿಸುತ್ತಿರುವ ಮಾರಿಕಣ್ಣು ಕುಮಾರ್ ಚಿತ್ರ ಗವಿಪುರಕ್ಕೆ ರಾಜೇಶ್ ರಾಮನಾಥ್ ಸಂಗೀತವಿದೆ. ಜೆಜಿ ಕೃಷ್ಣ ಕ್ಯಾಮರಾ, ಡಿಫರೆಂಟ್ ಡ್ಯಾನಿ ಸಾಕಸ, ಸೌಂದರ್ ರಾಜ್ ಸಂಕಲನ, ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೆಶನ ಈ ಚಿತ್ರಕ್ಕಿದೆ. ಜಾತ್ಯಾತೀತ ಪ್ರೇಮ...... ಅಡಿಬರಹದ ಈ ಚಿತ್ರ ಬೆಂಗಳೂರಿನ ಮೇನಕಾ ಹಾಗೂ ರಾಜ್ಯಾದ್ಯಂತ ಈ ಶುಕ್ರವಾರ (10-2-2012) ತೆರೆಕಾಣಲಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada Movie Gavipura releases on 10th Feb 2012. Suraj Sasnur Soujanya in the lead role. Marikannu Kumar directed this and jagannath Hegde producer. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X