ದಿಗಂತ್, ಐಂದ್ರಿತಾ ಜೋಡಿಯ ಪಾರಿಜಾತ ಬಿಡುಗಡೆ

ದೂದ್ ಪೇಡ ದಿಗಂತ್ ಹಾಗೂ ಐಂದ್ರಿತಾ ರೇ ಜೋಡಿಯ 'ಪಾರಿಜಾತ' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹಳಷ್ಟು ದಿನಗಳ ಹಿಂದೆಯೇ ಬಿಡುಗಡೆ ಆಗಬೇಕಾಗಿದ್ದ ಈ ಚಿತ್ರ, ಸೂಕ್ತ ಥಿಯೇಟರ್ ಸಿಗದೇ ಡಬ್ಬದೊಳಗೇ ಕುಳಿತಿತ್ತು. ಇದೀಗ ಬಿಡುಗಡೆಯ ಭಾಗ್ಯಕ್ಕೆ ಕಾಲ ಕೂಡಿಬಂದಿದ್ದು, ಮುಂದಿನ ವಾರ (ಫೆಬ್ರವರಿ 10, 2012) 10ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಪ್ರಭು ಶ್ರೀನಿವಾಸ್ ನಿರ್ದೇಶನದ ಈ ಚಿತ್ರ, ತಮಿಳು ಸೂಪರ್ ಹಿಟ್ ಚಿತ್ರ 'ಬಾಸ್ ಎಂಗಿರ ಭಾಸ್ಕರನ್ (Boss Engira Bhaskaran)ದ ರೀಮೇಕ್. ಯಶಸ್ವಿ ಚಿತ್ರ 'ಮನಸಾರೆ' ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಪ್ರಮುಖ ತಾರಾಗಣದಲ್ಲಿದ್ದು ದಿಗಂತ್ ತಂಗಿಯ ಪಾತ್ರದ ಮೂಲಕ ಕೊಡಗಿನ ಹೊಸ ಬೆಡಗಿ 'ತನಿಷಾ' ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆಯಲಿದ್ದಾರೆ. ಮೂಲ ಚಿತ್ರದ ಕಥೆ, ಚಿತ್ರಕಥೆ ತುಂಬಾ ಚೆನ್ನಾಗಿದ್ದು ಕನ್ನಡದಲ್ಲಿ ಅದನ್ನು ಇನ್ನೂ ಚೆನ್ನಾಗಿ ಮಾಡಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ.

ಪ್ರೇಮ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶಕರು. 'ಪಾರಿಜಾತವೇ.....' ಹಾಗೂ 'ಓ ಚಂದ್ರಿಕೆ...' ಹಾಡುಗಳು ಸೌತ್ ಇಂಡಿಯಾ ನೋಕಿಯಾ ವರದಿಯಲ್ಲಿ ನಂ. 2 ಸ್ಥಾನದಲ್ಲಿ ಕಾಣಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಬಹುದು. ಹಾಡುಗಳ ಮೂಲಕ ಈಗಾಗಲೇ ಪಾರಿಜಾತ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಸದ್ಯದಲ್ಲೇ ತೆರೆಕಾಣಲಿರುವ ಚಿತ್ರ ಪ್ರೇಕ್ಷಕರ ಪಾಲಿಗೆ 'ಪಾರಿಜಾತ' ಆಗಬಹುದೇ? (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada Movie Parijatha release on 10 Feb 2012. Diganth Aindrita Ray Lead in this movie. Prabhu Srinivas Directed this.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X