»   » ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳ ಡಿಟೇಲ್ಸ್

ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳ ಡಿಟೇಲ್ಸ್

Posted By:
Subscribe to Filmibeat Kannada

ಪ್ರತಿವಾರದಂತೆ ಈ ವಾರವೂ ಕನ್ನಡದಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಯಾವುದೇ ದೊಡ್ಡ ಸ್ಟಾರ್ ನಟರ ಸಿನಿಮಾ ಈ ವಾರ ಇಲ್ಲವಾದರೂ, ತಕ್ಕ ಮಟ್ಟಿಗೆ ಕುತೂಹಲ ಮೂಡಿಸಿರುವ ಹೊಸ ಚಿತ್ರಗಳು ಚಿತ್ರಮಂದಿರಕ್ಕೆ ಬರ್ತಿದೆ.

'ಜಂಭದ ಹುಡುಗಿ' ಖ್ಯಾತಿಯ ಪ್ರಿಯಾ ಹಾಸನ್ ಅಭಿನಯದ 'ಸ್ಮಗ್ಲರ್' ಸಿನಿಮಾ ಈ ವಾರ ಎಂಟ್ರಿ ಕೊಡ್ತಿದೆ. ತಿಲಕ್ ಅಭಿನಯದ 'ಅನ್ವೇಷಿ' ಚಿತ್ರ ಇದೇ ವಾರ ಗಾಂಧಿನಗರಕ್ಕೆ ಲಗ್ಗೆಯಿಡುತ್ತಿದೆ. ಈ ಎರಡು ಚಿತ್ರಗಳ ಜೊತೆ ಅನೂಪ್ ಸಾ ರಾ ಗೋವಿಂದು ಅಭಿನಯದ 'ಮಿಸ್ಟರ್ ಫರ್ಫೆಕ್ಟ್' ಚಿತ್ರವೂ ತೆರೆಗೆ ಅಪ್ಪಳಿಸುತ್ತಿದೆ.

ಇನ್ನು ಈ ಮೂರು ಚಿತ್ರಗಳ ಜೊತೆ ಮತ್ತೆರೆಡು ಹೊಸ ಚಿತ್ರಗಳು ಈ ವಾರ ಅಗ್ನಿಪರೀಕ್ಷೆ ಎದುರಿಸಲಿವೆ. ಹಾಗಿದ್ರೆ, ಈ ವಾರ ಸ್ಯಾಂಡಲ್ ವುಡ್ ನಲ್ಲಿ ಒಟ್ಟು ಎಷ್ಟು ಸಿನಿಮಾಗಳು ರಿಲೀಸ್ ಮತ್ತು ಯಾವುದು ಎಂಬ ಪೂರ್ತಿ ವಿವರ ಮುಂದಿದೆ. ಓದಿ......

ಈ ವಾರ ತೆರೆಗೆ 'ಸ್ಮಗ್ಲರ್'

ಪ್ರಿಯಾ ಹಾಸನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ `ಸ್ಮಗ್ಲರ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಿಯಾ ಹಾಸನ್ ಹಾಗೂ ವೀರು ಕೆ ನಿರ್ದೇಶನದ ಈ ಚಿತ್ರಕ್ಕೆ ಚಕ್ರಿ ಸಂಗೀತ ನೀಡಿದ್ದಾರೆ. ಇನ್ನುಳಿದಂತೆ ಸುಮನ್, ಶಯ್ಯಾಜಿರಾವ್ ಶಿಂಧೆ, ರವಿಕಾಳೆ, ರಮೇಶ್ ಭಟ್. ಗಿರಿಜಾ ಲೋಕೇಶ್ ಮುಂತಾದವರಿದ್ದಾರೆ.

ಈ ವಾರ ತೆರೆಗೆ `ಮಿಸ್ಟರ್ ಪರ್ಫೆಕ್ಟ್`

ಅನೂಪ್ ಸಾ ರಾ ಗೋವಿಂದು ಮತ್ತು ಶಾಲಿನಿ ನಾಯಕ, ನಾಯಕಿಯಾಗಿ ನಟಿಸಿರುವ `ಮಿಸ್ಟರ್ ಪರ್ಫೆಕ್ಟ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎ. ರಮೇಶ್ ಬಾಬು ಅವರೇ ಕಥೆ ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಮೇಶ್ ಭಟ್, ರಮೇಶ್ ಪಂಡಿತ್ ಬುಲೆಟ್ ಪ್ರಕಾಶ್, ಮಜಾ ಟಾಕೀಸ್ ಪವನ್ ಮುಂತಾದವರಿದ್ದಾರೆ.

ಈ ವಾರ ತೆರೆಗೆ 'ಅನ್ವೇಷಿ'

ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ 'ಅನ್ವೇಷಿ' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವೇಮಗಲ್ ಜಗನ್ನಾಥ್ ರಾವ್ ನಿರ್ದೇಶಿಸಿದ್ದಾರೆ. ತಿಲಕ್ ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ 2ನೇ ನಾಯಕನಾಗಿ ರಘುಭಟ್ ನಟಿಸಿದ್ದಾರೆ. ಅವಿನಾಶ್, ರಮೇಶ್‌ಭಟ್, ಬ್ಯಾಂಕ್ ಜನಾರ್ದನ್, ಅನು ಅಗರ್ ವಾಲ್, ದಿಶಾ ಪೂವಯ್ಯ, ರಮ್ಯಾ ಬಾರ್ನ, ಶ್ರದ್ದಾ ಶರ್ಮ, ವಿಕ್ರಂ ಸೂರಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ವುಮನ್ಸ್ ಡೇ' ಮತ್ತು 'ಮೂಢಾಯಣ'

ಡಾ|| ಡಿ.ಎ. ಉಪಾಧ್ಯ ನಿರ್ದೇಶನದ 'ಮೂಢಾಯಣ' ಮತ್ತು ಈಶ ನಿರ್ದೇಶನದ 'ವುಮನ್ಸ್ ಡೇ' ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

English summary
Mr perfect, anveshi, smuggler, moodayana and women's day Movies are releasing on December 8th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada