ಈ ಶುಕ್ರವಾರ 5 ಕನ್ನಡ ಸಿನಿಮಾಗಳ ಬಿಡುಗಡೆ
Recommended Video
ಈ ಶುಕ್ರವಾರ (ಜನವರಿ 24) ಕನ್ನಡದ 5 ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿದೆ. 'ಇಂಡಿಯಾ ಇಂಗ್ಲೆಂಡ್', 'ನಾನು ಮತ್ತು ಗುಂಡ', 'ನಾವೆಲ್ರೂ ಹಾಫ್ ಬಾಯ್ಡ್', 'ಗಡಿನಾಡು', 'ಕೃಥ' ಚಿತ್ರಗಳು ರಿಲೀಸ್ ಗೆ ಸಿದ್ಧವಾಗಿವೆ.
'ಇಂಡಿಯಾ V/S ಇಂಗ್ಲೆಂಡ್' ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾ. ವಸಿಷ್ಟ ಸಿಂಹ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ಮಾನ್ವಿತಾ ಹರೀಶ್ ಚಿತ್ರದ ನಾಯಕಿ. ಸುಮಲತಾ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಗಮನ ಸೆಳೆದಿದೆ.
'ನಾನು ಮತ್ತು ಗುಂಡ' ಶಿವರಾಜ್ ಕೆ ಆರ್ ಪೇಟೆ ನಟನೆಯ ಸಿನಿಮಾ. ಸಂಯುಕ್ತ ಹೊರನಾಡು ಚಿತ್ರದ ನಾಯಕಿ. ಶ್ರೀನಿವಾಸ್ ತಿಮ್ಮಯ್ಯ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರಘು ಹಾಸನ್ ನಿರ್ಮಾಣ ಮಾಡಿದ್ದಾರೆ. ಒಬ್ಬ ವ್ಯಕ್ತಿ ಹಾಗೂ ಒಂದು ಶ್ವಾನ ಭಾವನಾತ್ಮಕ ಸಂಬಂಧದ ಮೇಲೆ ಸಿನಿಮಾದ ಕಥೆ ಇದೆ.

'ಗಡಿನಾಡು' ಸಿನಿಮಾದ ಮೂಲಕ ನಟಿ ಸಂಚಿತಾ ಕಮ್ ಬ್ಯಾಕ್ ಮಾಡಿದ್ದಾರೆ. ಗಡಿಭಾಗದಲ್ಲಿ ಆಗಾಗ ಆಗುವ ಜಗಳವನ್ನು ಇಟ್ಟುಕೊಂಡು ಚಿತ್ರದ ಕಥೆ ಮಾಡಲಾಗಿದೆ. ಬೆಳಗಾವಿ ಹುಡುಗ ಹಾಗೂ ಮಹಾರಾಷ್ಟ್ರದ ಹುಡುಗಿ ನಡುವೆ ನಡೆಯುವ ಪ್ರೇಮ ಕಥೆ ಸಿನಿಮಾದಲ್ಲಿ ಇದೆ.

'ಕೃಥ' ಉಪ್ಪರಿ ರಮೇಶ್ ನಿರ್ದೇಶನದ ಸಿನಿಮಾ. ವಿಜಯೇಂದ್ರ ಕುಟ್ಟ, ಮೇಘನಾ ಗೌಡ, ರಶ್ಮಿಕಾ ಸಿನಿಮಾದ ನಾಯಕಿಯರು. ಜೀವಿತ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











