ಈ ವಾರ ಕನ್ನಡದ 5 ಸಿನಿಮಾಗಳ ಬಿಡುಗಡೆ

ಈ ಶುಕ್ರವಾರ ಕನ್ನಡದ 5 ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಜನವರಿ ತಿಂಗಳ ಕೊನೆಯ ವಾರದಲ್ಲಿ ಹೊಸ ಸಿನಿಮಾಗಳು ರಿಲೀಸ್ ಗೆ ಸಿದ್ಧವಾಗಿವೆ.

ಡಾರ್ಲಿಂಗ್ ಕೃಷ್ಣ ನಟನೆಯ 'ಲವ್ ಮಾಕ್ ಟೈಲ್', ವಿಕಾಸ್ ನಟನೆಯ 'ಕಾಣದಂತೆ ಮಾಯವಾದನು', 'ಡಿಂಗ' 'ನಮೋ' ಹಾಗೂ 'ನಿಗರ್ವ' ಚಿತ್ರಗಳು ಈ ವಾರ ಚಿತ್ರಮಂದಿರಕ್ಕೆ ಕಾಲಿಡುತ್ತಿವೆ.

'ಲವ್ ಮಾಕ್ ಟೈಲ್' ಹೆಸರೇ ಹೇಳುವಂತೆ ಪಕ್ಕಾ ಲವ್ ಸ್ಟೋರಿ ಸಿನಿಮಾವಾಗಿದೆ. ಡಾರ್ಲಿಂಗ್ ಕೃಷ್ಣ ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಮಿಲನ ನಾಗರಾಜ್ ಹಾಗೂ ಅಮೃತ ಐಯ್ಯರ್ ಸಿನಿಮಾದ ನಾಯಕಿಯರಾಗಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಕುತೂಹಲ ಮೂಡಿಸಿದೆ.

5 Kannada Movies Will Be Releasing On This Friday

'ಕಾಣದಂತೆ ಮಾಯವಾದನು' ಸಿನಿಮಾ ವಿಕಾಸ್ ಹಾಗೂ ಸಿಂಧು ಲೋಕನಾಥ್ ನಟನೆಯ ಸಿನಿಮಾ. ಉದಯ್ ಹಾಗೂ ಭಜರಂಗಿ ಲೋಕಿ ಖಳನಾಯಕರಾಗಿದ್ದಾರೆ. ಧರ್ಮಣ್ಣ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಚ್ಚುತ್ ಕುಮಾರ್ ಸುಚೇಂದ್ರ ಪ್ರಸಾದ್ ಇದ್ದಾರೆ. ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ನಿರೀಕ್ಷೆ ಹುಟ್ಟಿಸಿವೆ.

ಐ ಫೋನ್ ನಲ್ಲಿ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಸಿನಿಮಾ ಎಂಬ ಕಾರಣಕ್ಕೆ 'ಡಿಂಗ' ಚಿತ್ರ ಸುದ್ದಿ ಮಾಡಿತ್ತು. ಮಾಯಕಾರ್ ಪ್ರೊಡಕ್ಷನ್ಸ್ ನಲ್ಲಿ 11 ಜನ ನಿರ್ಮಾಪಕರು ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರವ್ ಗೌಡ ಹಾಗೂ ಅನುಷಾ ಸಿನಿಮಾದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.

5 Kannada Movies Will Be Releasing On This Friday

'ನಮೋ' ಎಂಬ ಕನ್ನಡ ಸಿನಿಮಾ ಸಹ ಈ ವಾರ ರಿಲೀಸ್ ಆಗುತ್ತಿದೆ. ಪುಟ್ಟ ರಾಜ್ ಸ್ವಾಮಿ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಜೊತೆಗೆ 'ನಿಗರ್ವ' ಎಂಬ ಸಿನಿಮಾ ಸಹ ಶುಕ್ರವಾರ ತೆರೆಗೆ ಬರುತ್ತಿದೆ.

More from Filmibeat

English summary
5 kannada movies will be releasing on this friday (January 31st).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X