'ಗೀತಾ', 'ಕಿಸ್' ಸೇರಿ ಈ ಶುಕ್ರವಾರ 5 ಕನ್ನಡ ಚಿತ್ರಗಳ ಬಿಡುಗಡೆ

Recommended Video

'ಗೀತಾ', 'ಕಿಸ್' ಸೇರಿ ಈ ಶುಕ್ರವಾರ 5 ಕನ್ನಡ ಚಿತ್ರಗಳ ಬಿಡುಗಡೆ | FILMIBEAT KANNADA

ನಾಳೆ (ಶುಕ್ರವಾರ) ಕನ್ನಡದಲ್ಲಿ ಐದು ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸ್ಟಾರ್ ಗಳ ಜೊತೆಗೆ ಹೊಸಬರು ಸ್ಪರ್ಧೆಗೆ ಇಳಿದಿದ್ದಾರೆ.

ಗೀತಾ, ಕಿಸ್, ಆಟಕ್ಕುಂಟು ಲೆಕ್ಕಕ್ಕಿಲ್ಲ, ಸೂಪರ್ ಹೀರೋ ಹಾಗೂ ನವರಾತ್ರಿ ಈ ವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳಾಗಿವೆ.

ಗಣೇಶ್ ನಟನೆಯ 'ಗೀತಾ' ಕನ್ನಡ ನುಡಿ, ಗೋಕಾಕ್ ಹೋರಾಟದ ಬಗ್ಗೆ ಇರುವ ಚಿತ್ರ. ಜೊತೆಗೆ ಎಂದಿನಂತೆ ಗಣೇಶ್ ಲವ್ ಸ್ಟೋರಿ ಇಲ್ಲಿದೆ. ವಿಜಯ್ ನಾಗೇಂದ್ರ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಶಾನ್ವಿ ಶ್ರೀವಾತ್ಸವ, ಪಾರ್ವತಿ ಅರುಣ್ ಹಾಗೂ ಪ್ರಯಾಗ ಮಾರ್ಟಿನ್ ಚಿತ್ರದ ನಾಯಕಿಯರು.

5 kannada movies will be releasing this friday

'ಕಿಸ್' ಎಪಿ ಅರ್ಜುನ್ ನಿರ್ದೇಶನದ ಸಿನಿಮಾ. ವಿರಾಟ್ ಹಾಗೂ ಶ್ರೀಲೀಲಾ ಚಿತ್ರದ ನಾಯಕಿ ನಾಯಕಿಯಾಗಿದ್ದಾರೆ. ಹರಿಕೃಷ್ಣ ಸಂಗೀತದ ಹಾಡುಗಳು ಹಿಟ್ ಆಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

5 kannada movies will be releasing this friday

'ಆಟಕ್ಕುಂಟು ಲೆಕ್ಕಕ್ಕಿಲ್ಲ' ಸಂಚಾರಿ ವಿಜಯ್ ಹಾಗೂ ಮಯೂರಿ ನಟನೆಯ ಸಿನಿಮಾ. ರಾಮ್ ಜಿ ಚಂದ್ರ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್‌ ಆಗಿದೆ.

5 kannada movies will be releasing this friday

ಇದರೊಂದಿಗೆ ಹೊಸಬರ 'ನವರಾತ್ರಿ' ಹಾಗೂ 'ಸೂಪರ್ ಹೀರೋ' ಚಿತ್ರಗಳು ಬಿಡುಗಡೆ ಆಗುತ್ತಿವೆ. 'ನವರಾತ್ರಿ' ಸಿನಿಮಾದಲ್ಲಿ ಹೃದಯ ನಾಯಕಿಯಾಗಿದ್ದು, ಲಕ್ಷ್ಮಿಕಾಂತ್ ಚಿನ್ನ ನಿರ್ದೇಶನ ಮಾಡಿದ್ದಾರೆ.

More from Filmibeat

English summary
5 Kannada Movies will be releasing this week (September 27).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X